ರಾಮ್ ಚರಣ್, ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಅದರಲ್ಲೂ ‘ಆರ್ಆರ್ಆರ್’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ರಾಮ್ ಚರಣ್ ಸಂಭಾವನೆ ದುಪ್ಪಟ್ಟಾಗಿದೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ನಟಿಸಿದ ‘ಆಚಾರ್ಯ’ ಸಿನಿಮಾಕ್ಕೆ ಅವರು ಸಂಭಾವನೆ ಪಡೆದಿರಲಿಲ್ಲ, ಏಕೆಂದರೆ ಅದು ಅವರೇ ನಿರ್ಮಿಸಿದ್ದ ಸಿನಿಮಾ. ಇನ್ನು ‘ಗೇಮ್ ಚೇಂಜರ್’ ಸಿನಿಮಾಕ್ಕೆ ರಾಮ್ ಚರಣ್ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಈ ಮೊದಲೇ ಸುದ್ದಿಯಾಗಿತ್ತು. ಆದರೆ ಈಗ ಹೊರಬಿದ್ದಿರುವ ಸುದ್ದಿಯಂತೆ ಈ ಸಿನಿಮಾಕ್ಕೆ ಅವರು ತಮ್ಮ ಸಂಭಾವನೆ ತಗ್ಗಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಕಾರಣವೂ ಇದೆ.
‘ಗೇಮ್ ಚೇಂಜರ್’ ಸಿನಿಮಾಕ್ಕಾಗಿ ರಾಮ್ ಚರಣ್ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಒಪ್ಪಂದವೂ ಸಹ 100 ಕೋಟಿ ಸಂಭಾವನೆಗೆ ಆಗಿತ್ತಂತೆ. ಆದರೆ ರಾಮ್ ಚರಣ್ ಈಗ ಕೇವಲ 65 ಕೋಟಿ ರೂಪಾಯಿ ಸಂಭಾವನೆಯನ್ನಷ್ಟೆ ಪಡೆದುಕೊಂಡಿರುವುದಾಗಿ ತೆಲುಗಿನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ರಾಮ್ ಚರಣ್, ತಮ್ಮ ಸಂಭಾವನೆ ತಗ್ಗಿಸಿಕೊಂಡಿರುವುದಕ್ಕೆ ಕಾರಣವೂ ಇದೆ.
ಇದನ್ನೂ ಓದಿ:ಗೇಮ್ ಚೇಂಜರ್ ಟ್ರೇಲರ್; ರಾಮ್ ಚರಣ್ ಅಭಿಮಾನಿಗಳಿಗೆ ಸಿಕ್ತು ಕಥೆ ಸುಳಿವು
‘ಗೇಮ್ ಚೇಂಜರ್’ ಸಿನಿಮಾದ ಬಜೆಟ್ ಹೆಜ್ಜಾಗಿದ್ದು ಮಾತ್ರವೇ ಅಲ್ಲದೆ, ಸಿನಿಮಾ ಚಿತ್ರೀಕರಣ ತಡವಾದ ಕಾರಣಕ್ಕೆ ರಾಮ್ ಚರಣ್ ತಮ್ಮ ಸಂಭಾವನೆ ತಗ್ಗಿಸಿಕೊಂಡು ಕೇವಲ 65 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ತಡವಾಗಲೂ ರಾಮ್ ಚರಣ್ ಸಹ ಕಾರಣ ಆಗಿದ್ದ ಕಾರಣಕ್ಕೆ ಅವರು ತಮ್ಮ ಸಂಭಾವನೆ ತಗ್ಗಿಸಿಕೊಂಡಿದ್ದಾರಂತೆ. ರಾಮ್ ಚರಣ್ ಮಾತ್ರವೇ ಅಲ್ಲದೆ 50 ಕೋಟಿ ರೂಪಾಯಿ ಸಂಭಾವನೆ ಪಡೆಯಬೇಕಿದ್ದ ನಿರ್ದೇಶಕ ಶಂಕರ್ ಸಹ 35 ಕೋಟಿ ರೂಪಾಯಿ ಸಂಭಾವನೆಯನ್ನಷ್ಟೆ ಪಡೆದುಕೊಂಡಿದ್ದಾರೆ.
‘ಗೇಮ್ ಚೇಂಜರ್’ ಸಿನಿಮಾ ಜನವರಿ 10 ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾದ ಮೇಲೆ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿ, ಸಿನಿಮಾದಲ್ಲಿ ಎಸ್ಜೆ ಸೂರ್ಯ ವಿಲನ್, ಸುನಿಲ್ ಹಾಸ್ಯ ನಟನ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್ ಗಮನ ಸೆಳೆದಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಾಳೆ (ಜನವರಿ 04) ರಾಜಮಂಡ್ರಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ