ರಾಮ್ ಚರಣ್ ಫ್ಯಾನ್ಸ್ ವರ್ತನೆಗೆ ನೆಟ್ಟಿಗರ ಖಂಡನೆ; ವಿದೇಶದಲ್ಲಿ ಹೋಯ್ತು ಮಾನ

ರಾಮ್ ಚರಣ್ ಅವರು ಲಂಡನ್​ನ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು ಭಾರಿ ಸದ್ದು ಗದ್ದಲ ಮಾಡಿದ್ದಾರೆ. ಇದರಿಂದ ಅಲ್ಲಿನ ಸಿಬ್ಬಂದಿಗೆ ಕಿರಿಕಿರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ವಿಡಿಯೋ ವೈರಲ್ ಆಗಿದೆ.

ರಾಮ್ ಚರಣ್ ಫ್ಯಾನ್ಸ್ ವರ್ತನೆಗೆ ನೆಟ್ಟಿಗರ ಖಂಡನೆ; ವಿದೇಶದಲ್ಲಿ ಹೋಯ್ತು ಮಾನ
Ram Charan In London

Updated on: May 11, 2025 | 8:12 AM

ನಟ ರಾಮ್ ಚರಣ್ (Ram Charan) ಅವರಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಅವರು ಕೇವಲ ಟಾಲಿವುಡ್​ಗೆ ಸೀಮಿತ ಆಗಿಲ್ಲ. ‘ಆರ್​ಆರ್​ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ಹಲವು ರಾಷ್ಟ್ರಗಳಲ್ಲಿ ರಾಮ್ ಚರಣ್ ಅವರಿಗೆ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್ನು, ವಿಶ್ವ ಪ್ರಸಿದ್ಧ ‘ಮೇಡಂ ಟುಸಾಡ್ಸ್’ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆ (Ram Charan Wax Statue) ಸಿದ್ಧವಾಗಿದೆ. ಇದರ ಸಲುವಾಗಿ ಅವರು ಲಂಡನ್​ಗೆ ತೆರಳಿದ್ದರು. ಆ ವೇಳೆ ಅಭಿಮಾನಿಗಳು ನಡೆದುಕೊಂಡ ರೀತಿಗೆ ನೆಟ್ಟಿಗರು ಗರಂ ಆಗಿದ್ದಾರೆ. ವಿದೇಶದಲ್ಲಿ ಭಾರತೀಯರ ಮಾನ ಹೋಗುವಂತೆ ರಾಮ್ ಚರಣ್ ಫ್ಯಾನ್ಸ್ (Ram Charan Fans) ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ರಾಮ್ ಚರಣ್ ಅವರು ಮೇಣದ ಪ್ರತಿಮೆಯನ್ನು ಸಿಂಗಾಪುರದ ‘ಮೇಡಂ ಟುಸಾಡ್ಸ್’ ಮ್ಯೂಸಿಯಂನಲ್ಲಿ ಇಡಲಾಗುವುದು ಎಂದು ಈ ಮೊದಲು ಘೋಷಿಸಲಾಗಿತ್ತು. ಆದರೆ ಈಗ ಅದು ಲಂಡನ್​ನಲ್ಲಿಯೇ ಅನಾವರಣಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ರಾಮ್ ಚರಣ್ ಅವರು ಇತ್ತೀಚೆಗೆ ಲಂಡನ್​ಗೆ ಭೇಟಿ ನೀಡಿದರು. ಈ ವೇಳೆ ಅವರನ್ನು ನೋಡಲು ಮ್ಯೂಸಿಯಂ ಎದುರು ಅಭಿಮಾನಿಗಳು ಮುಗಿಬಿದ್ದರು.

ಇದನ್ನೂ ಓದಿ
ರಾಮ್ ಚರಣ್​ಗೆ ಪತ್ನಿ ಉಪಾಸನಾ ಕೊಡುವ ದುಬಾರಿ ಗಿಫ್ಟ್​ಗಳೇನು?
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?
ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ರಾಮ್ ಚರಣ್

ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಇಷ್ಟಪಡುವುದು ತಪ್ಪಲ್ಲ. ಆದರೆ ಸಾರ್ವಜನಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಜ್ಞಾನ ಇರಬೇಕಾಗುತ್ತದೆ. ಎಲ್ಲರಿಗೂ ತೊಂದರೆ ಆಗುವ ರೀತಿಯಲ್ಲಿ ಫ್ಯಾನ್ಸ್ ಕೇಕೆ ಹಾಕುತ್ತಾ, ಡೋಲು ಬಾರಿಸುತ್ತಿದ್ದರು. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಅಲ್ಲಿನ ಸಿಬ್ಬಂದಿಗೆ ಕಷ್ಟ ಆಯಿತು. ಈ ಕಾರಣದಿಂದ ಫ್ಯಾನ್ಸ್ ಮೀಟ್ ಕ್ಯಾನ್ಸಲ್ ಮಾಡಲಾಯಿತು ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

‘ರಾಮ್ ಚರಣ್ ಅವರ ಅಭಿಮಾನಿಗಳು ಈ ರೀತಿ ಮಾಡಿದ್ದರಿಂದ ಲಂಡನ್​ನಲ್ಲಿ ಬ್ರಿಟಿಷ್ ಮಂದಿಯ ಎದುರು ಭಾರತೀಯರ ಮಾನ ಹರಾಜು ಆಯಿತು. ಫ್ಯಾನ್ಸ್​​ಗೆ ಸ್ವಲ್ಪವೂ ನಾಗರಿಕ ಪ್ರಜ್ಞೆಯೇ ಇಲ್ಲ. ವಿದೇಶದಲ್ಲಿ ನೀವು ಈ ರೀತಿ ನಡೆದುಕೊಂಡರೆ ಇಡೀ ಭಾರತೀಯದ ಮರ್ಯಾದೆ ಹೋಗುತ್ತದೆ’ ಎಂದು ‘ಎಕ್ಸ್’ ಖಾತೆಯಲ್ಲಿ ನೆಟ್ಟಿಗರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಖತ್ ರಗಡ್ ಆಗಿದೆ ಪೆದ್ದಿ ಗ್ಲಿಂಪ್ಸ್; ಬ್ಯಾಟ್ ಹಿಡಿದು ಅಬ್ಬರಿಸಿದ ರಾಮ್ ಚರಣ್

‘ಮೇಡಂ ಟುಸಾಡ್ಸ್​’ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆ ಆನಾವರಣ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ಜೊತೆ ಅವರ ಮುದ್ದಿನ ಶ್ವಾನ ‘ರೈಮ್’ ಪ್ರತಿಮೆ ಕೂಡ ಇರಲಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.