ಪ್ರಶಾಂತ್​ ನೀಲ್​ ಮತ್ತು ರಾಮ ಚರಣ್​ ಭೇಟಿಯ ಅಸಲಿಯತ್ತೇ ಬೇರೆ; ಕೊನೆಗೂ ಹೊರಬಿತ್ತು ಸತ್ಯ

ಪ್ರಶಾಂತ್​ ನೀಲ್​ ಮತ್ತು ರಾಮ ಚರಣ್​ ಭೇಟಿಯ ಅಸಲಿಯತ್ತೇ ಬೇರೆ; ಕೊನೆಗೂ ಹೊರಬಿತ್ತು ಸತ್ಯ
ರಾಮ್​ ಚರಣ್​-ಪ್ರಶಾಂತ್​ ನೀಲ್​- ಚಿರಂಜೀವಿ

ಸ್ಟಾರ್​ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್​ ನೀಲ್​ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಿರುವಾಗಲೇ ರಾಮ್​ ಚರಣ್​ ಜತೆ ಕಾಣಿಸಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

TV9kannada Web Team

| Edited By: Rajesh Duggumane

Oct 17, 2021 | 6:04 PM

ಪ್ರಶಾಂತ್​ ನೀಲ್​ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ‘ಕೆಜಿಎಫ್​’ ನಂತರ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಈ ಕಾರಣಕ್ಕೆ ಅವರು ಯಾವುದೇ ಸ್ಟಾರ್​ ನಟರನ್ನು ಭೇಟಿ ಮಾಡಿದರೂ ಸಿನಿಮಾ ವಿಚಾರ ಮುನ್ನೆಲೆಗೆ ಬರುತ್ತದೆ. ಇತ್ತೀಚೆಗೆ ರಾಮ್​ ಚರಣ್​ ಹಾಗೂ ಚಿರಂಜೀವಿ ಜತೆ ಕಾಣಿಸಿಕೊಂಡಿದ್ದರು ಪ್ರಶಾಂತ್ ನೀಲ್​​. ರಾಮ್​ ಚರಣ್​ ಜತೆ ಪ್ರಶಾಂತ್​ ನೀಲ್​ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದರ ಅಸಲಿಯತ್ತು ಈಗ ಹೊರ ಬಿದ್ದಿದೆ.

ಸ್ಟಾರ್​ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್​ ನೀಲ್​ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಿರುವಾಗಲೇ ರಾಮ್​ ಚರಣ್​ ಜತೆ ಕಾಣಿಸಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ‘ಲೆಜೆಂಡ್​ ನಟರನ್ನು ಭೇಟಿ ಮಾಡಿದೆ. ಆತಿಥ್ಯ ನೀಡಿದ್ದಕ್ಕೆ ಧನ್ಯವಾದ. ಚಿರಂಜೀವಿಯನ್ನು ಭೇಟಿ ಮಾಡಬೇಕು ಎನ್ನುವ ಬಾಲ್ಯದ ಕನಸು ನನಸಾಯಿತು’ ಎಂದು ಟ್ವೀಟ್​ ಮಾಡಿದ್ದರು ರಾಮ್​ ಚರಣ್​. ಇದರ ಜತೆಗೆ ಆರ್​ಆರ್​ಆರ್​ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವೀಸ್​ ಅನ್ನು ಟ್ಯಾಗ್​ ಮಾಡಿದ್ದರು ರಾಮ್​ ಚರಣ್​. ಈ ಮೂಲಕ ಸಾಕಷ್ಟು ಕುತೂಹಲ ಹುಟ್ಟಿಸಿದ್ದರು. ಈಗ ರಾಮ್​ ಚರಣ್​ ಕಡೆಯಿಂದ ಇದಕ್ಕೆ ಉತ್ತರ ಸಿಕ್ಕಿದೆ.

ಈ ಬಗ್ಗೆ ಟಿವಿ9 ತೆಲುಗಿಗೆ ಪ್ರತಿಕ್ರಿಯೆ ನೀಡಿರುವ ರಾಮ್​ ಚರಣ್​, ‘ಇಲ್ಲ, ಪ್ರಶಾಂತ್ ಅವರು ಕೇವಲ ಊಟಕ್ಕೆ ಬಂದಿದ್ದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಘೋಷಿಸುತ್ತೇವೆ’ ಎಂದರು.  ಈ ಮೂಲಕ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟರು. ಅವರು ಸಿನಿಮಾ ಮಾಡುವುದಿಲ್ಲ ಎಂದಾದರೆ, ಆರ್​ಆರ್​ಆರ್​ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವೀಸ್ಅನ್ನುಏಕೆ ಟ್ಯಾಗ್​ ಮಾಡುತ್ತಿದ್ದರು ಎಂದು ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ.

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂಬುದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್​ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಈ ಚಿತ್ರದ ಕೊನೆಯ ಹಂತದ ಕೆಲಸದಲ್ಲಿ ಪ್ರಶಾಂತ್​ ನೀಲ್​ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಮತ್ತು ರಾಮ್​ ಚರಣ್ ಜತೆ ಪ್ರಶಾಂತ್​ ನೀಲ್​​; ಆರ್​ಆರ್​ಆರ್​ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?

Follow us on

Related Stories

Most Read Stories

Click on your DTH Provider to Add TV9 Kannada