ಕರ್ನಾಟಕದವರನ್ನು ಕಡೆಗಣಿಸಿದ ಬಾಲಿವುಡ್​ ಮಂದಿಗೆ ಸರಿಯಾಗಿ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ತೆರಳಿದ ನಂತರ ಕರ್ನಾಟಕವನ್ನು ಹಾಗೂ ಕನ್ನಡವನ್ನು ಕಡೆಗಣಿಸಿದರು ಎನ್ನುವ ಆರೋಪ ಬಂತು. ಇದಕ್ಕೆ ಪೂರಕವಾಗುವಂತೆ ಸಾಕಷ್ಟು ಘಟನೆಗಳು ನಡೆದವು.

ಕರ್ನಾಟಕದವರನ್ನು ಕಡೆಗಣಿಸಿದ ಬಾಲಿವುಡ್​ ಮಂದಿಗೆ ಸರಿಯಾಗಿ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ
ಕುಶಾ ಮತ್ತು ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 17, 2021 | 6:00 PM

ರಶ್ಮಿಕಾ ಮಂದಣ್ಣ ಕರ್ನಾಟಕದವರು. ಆದರೆ, ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ಪರಭಾಷೆಯಲ್ಲಿ. ಅವರು ಕನ್ನಡದಲ್ಲಿ ನಟಿಸಿದ ನಂತರ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಮಿಂಚಿದರು. ಈಗ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಹಿಂದಿಯ ಎರಡು ದೊಡ್ಡ ಬಜೆಟ್​ ಸಿನಿಮಾಗಳು ಅವರ ಕೈಯಲ್ಲಿವೆ. ರಶ್ಮಿಕಾ ಸಿನಿಮೇತರ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಾರೆ. ಈಗ ದಕ್ಷಿಣ ಭಾರತದವರನ್ನು ಹಂಗಿಸಿ, ಕರ್ನಾಟಕಟದವರನ್ನು ಕಡೆಗಣಿಸಿದ ಬಾಲಿವುಡ್​ನವರಿಗೆ ರಶ್ಮಿಕಾ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ತೆರಳಿದ ನಂತರ ಕರ್ನಾಟಕವನ್ನು ಹಾಗೂ ಕನ್ನಡವನ್ನು ಕಡೆಗಣಿಸಿದರು ಎನ್ನುವ ಆರೋಪ ಬಂತು. ಇದಕ್ಕೆ ಪೂರಕವಾಗುವಂತೆ ಸಾಕಷ್ಟು ಘಟನೆಗಳು ನಡೆದವು. ಈ ಕಾರಣಕ್ಕೆ ಕರ್ನಾಟಕದಲ್ಲಿ ಅವರ ಅಭಿಮಾನಿ ಬಳಗದಂತೆ ಅವರನ್ನು ದ್ವೇಷಿಸುವ ಗುಂಪೂ ಇದೆ. ಅವರು ಏನೇ ಮಾಡಿದರೂ ಅವರನ್ನು ವಿರೋಧಿಸುವವರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇನ್ನು, ರಶ್ಮಿಕಾ ಸದ್ಯ ಕನ್ನಡದ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಇದರಿಂದಲೂ ಅವರು ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ರಶ್ಮಿಕಾ ಆ ರೀತಿಯ ಭಾವನೆ ಹೊಂದಿಲ್ಲ ಎಂಬುದು ಸಾಬೀತಾಗಿದೆ.

ರಶ್ಮಿಕಾ ಜತೆ ಹಿಂದಿಯ ಕಂಟೆಂಟ್​ ಕ್ರಿಯೇಟರ್​ ಕುಶಾ ಕಪಿಲಾ ಮಾತನಾಡಿದ್ದಾರೆ. ಈ ಮಾತುಕತೆ ವೇಳೆ ದಕ್ಷಿಣ ಭಾರತವನ್ನು ಹಂಗಿಸುವ ಪ್ರಯತ್ನ ಮಾಡಿದ್ದಾರೆ ಕುಶಾ. ‘ನಿಮ್ಮ ಕೊಡವ ಉಚ್ಚಾರಣೆ​ ತುಂಬಾನೇ ಅದ್ಭುತವಾಗಿದೆ. ನಾನು ಇಂಗ್ಲಿಷ್​ನಲ್ಲಿ ಹೇಳುತ್ತೇನೆ. ಅದನ್ನು ನೀವು ನಿಮ್ಮ ಉಚ್ಚಾರಣೆಯಲ್ಲಿ ಹೇಳಿ ಎಂದರು ಕುಶಾ. ಎಗ್​ ಪದವನ್ನು ನೀವು ಹೇಗೆ ಉಚ್ಚಾರಿಸುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ರಶ್ಮಿಕಾ ಎಗ್​ ಎಂದೇ ಉತ್ತರಿಸಿದರು. ನೀವು ಎಗ್​ಗೆ ಯಗ್​ ಎನ್ನಲ್ವಾ ಎಂದು ಕುಶಾ ಪ್ರಶ್ನೆ ಮಾಡಿದರು. ಇಲ್ಲ ಎನ್ನುವ ಉತ್ತರ ರಶ್ಮಿಕಾ ಕಡೆಯಿಂದ ಬಂತು.

ಈ ಮಾತುಕತೆ ನಡೆದೇ ಇತ್ತು. ‘ನೀವು ಸ್ವಲ್ಪ ಮಲಯಾಳಿ ಉಚ್ಚಾರಣೆಯಲ್ಲಿ ಹೇಳಿ’ ಎಂದು ಕುಶಾ ಹೇಳುತ್ತಿದ್ದಂತೆ ರಶ್ಮಿಕಾ ನಗುಮುಖದಲ್ಲೇ ಅಸಮಾಧಾನ ಹೊರ ಹಾಕಿದರು. ‘ದಕ್ಷಿಣ ಭಾರತ ಎಂದರೆ ಕೇವಲ ಮಲಯಾಳಂ ಮಾತ್ರವಲ್ಲ. ಅಲ್ಲಿ ಕರ್ನಾಟಕ ಇದೆ. ಚೆನ್ನೈ ಕೂಡ ಇದೆ’ ಎಂದು ಗಂಭೀರವಾಗಿಯೇ ಉತ್ತರಿಸಿದರು.

View this post on Instagram

A post shared by Kusha Kapila (@kushakapila)

ಸಿನಿಮಾ ವಿಚಾರಕ್ಕೆ ಬರೋದಾದರೆ, ಬಾಲಿವುಡ್​ನಲ್ಲಿ ರಶ್ಮಿಕಾ ‘ಮಿಷನ್​ ಮಜ್ನು’ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ‘ಗುಡ್​ಬೈ’ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: Rashmika Mandanna: ಅಂದುಕೊಂಡಿದ್ದಕಿಂತಲೂ ಮುನ್ನವೇ ‘ಪುಷ್ಪ’ ರಿಲೀಸ್​; ಅಲ್ಲು ಅರ್ಜುನ್​-ರಶ್ಮಿಕಾ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ

ಈ ಅವತಾರದಲ್ಲಿ ಬಂದು ಅಭಿಮಾನಿಗಳಿಗೆ ರಶ್ಮಿಕಾ ಹೇಳಿದ್ದೇನು; ಹೊಸ ಫೋಟೋ ವೈರಲ್​

Published On - 5:26 pm, Sun, 17 October 21

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ