Game Changer: ಮೂರು ವರ್ಷಗಳ ಬಳಿಕ ಪೂರ್ಣಗೊಂಡಿತು ‘ಗೇಮ್ ಚೇಂಜರ್’ ಶೂಟಿಂಗ್

ತೆಲುಗು ನಟ ರಾಮ್ ಚರಣ್ ಅವರು ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದರ ಕೆಲಸಗಳನ್ನು ಪೂರ್ಣಗೊಳಿಸಲು ತರಾತುರಿ ತೋರುವುದಿಲ್ಲ. ಶೂಟಿಂಗ್ ಮಧ್ಯೆ ಸಾಕಷ್ಟು ಬ್ರೇಕ್ ತೆಗೆದುಕೊಂಡು ನಿಧಾನವಾಗಿ ಸಿನಿಮಾ ಮಾಡುತ್ತಾರೆ. ಈ ಕಾರಣದಿಂದಲೇ ‘ಗೇಮ್ ಚೇಂಜರ್’ ಶೂಟಿಂಗ್ ಪೂರ್ಣಗೊಳ್ಳಲು ಬರೋಬ್ಬರಿ 3 ವರ್ಷಗಳು ಹಿಡಿದಿವೆ.

Game Changer: ಮೂರು ವರ್ಷಗಳ ಬಳಿಕ ಪೂರ್ಣಗೊಂಡಿತು ‘ಗೇಮ್ ಚೇಂಜರ್’ ಶೂಟಿಂಗ್
ರಾಮ್ ಚರಣ್
Follow us
|

Updated on: Jul 08, 2024 | 7:25 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಸೆಟ್ಟೇರಿ ಮೂರು ವರ್ಷಗಳ ಮೇಲಾಗಿದೆ. ಎಸ್​. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ಶೂಟಿಂಗ್ ಮಾಡುತ್ತಲೇ ಬರಲಾಗುತ್ತಿದೆ. ಈ ಸಿನಿಮಾಗೆ ಅದೆಷ್ಟು ಹಂತದಲ್ಲಿ ಶೂಟಿಂಗ್ ಮಾಡಿದರು ಎಂಬುದಕ್ಕೆ ಲೆಕ್ಕವೇ ಇಲ್ಲ. ಅಂತೂ-ಇಂತೂ ಈಗ ಸಿನಿಮಾಗೆ ಶೂಟಿಂಗ್ ಪೂರ್ಣಗೊಂಡಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರುವ ಬಿಟ್ಟಿದ್ದಾರೆ. ಈ ವರ್ಷವಾದರೂ ಸಿನಿಮಾ ರಿಲೀಸ್ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಆರ್​ಆರ್​ಆರ್’ ಸಿನಿಮಾ ರಿಲೀಸ್​ಗೂ ಮೊದಲೇ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಚಿತ್ರದಲ್ಲಿ ತೊಡಗಿಕೊಂಡರು. ‘ಆರ್​ಆರ್​ಆರ್​’ ರಿಲೀಸ್ ಬಳಿಕ ಅವರ ಗಮನ ಸಂಪೂರ್ಣವಾಗಿ ‘ಗೇಮ್ ಚೇಂಜರ್’ ಮೇಲೆ ಇತ್ತು. ಈಗ ‘ಆರ್​ಆರ್​ಆರ್’ ಸಿನಿಮಾ ರಿಲೀಸ್ ಆಗಿಯೇ ಎರಡು ವರ್ಷಗಳ ಮೇಲಾಗಿದೆ. ಆದಾಗ್ಯೂ ‘ಗೇಮ್ ಚೇಂಜರ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ಅಂತೂ-ಇಂತೂ ಶೂಟಿಂಗ್ ಈಗ ಪೂರ್ಣಗೊಂಡಂತೆ ಆಗಿದೆ.

‘ಗೇಮ್ ಚೇಂಜರ್’ ಸಿನಿಮಾದ ಕೆಲವು ಪೋಸ್ಟರ್​ಗಳು ರಿಲೀಸ್ ಆಗಿ ಗಮನ ಸೆಳೆದವು. ಚಿತ್ರದ ಸಾಂಗ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾ ಚುನಾವಣೆಗೆ ಸಂಬಂಧಿಸಿದ್ದು ಎನ್ನುವ ಮಾತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಅವರು ಚುನಾವಣಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಶೀಘ್ರವೇ ಅವರು ಡಬ್ಬಿಂಗ್ ಕೆಸಲ ಪೂರ್ಣಗೊಳಿಸಲಿದ್ದಾರಂತೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ರಿಲೀಸ್ ಆಗಲಿದೆ ‘ಗೇಮ್ ಚೇಂಜರ್’? ನಡೆಯಲಿದೆ ಬಿಗ್ ಕ್ಲ್ಯಾಶ್ 

‘ಗೇಮ್ ಚೇಂಜರ್’ ಶೂಟಿಂಗ್ ಬಳಿಕ ರಾಮ್ ಚರಣ್ ಅವರು ಸಣ್ಣ ಬ್ರೇಕ್ ಪಡೆಯಬಹುದು ಎನ್ನಲಾಗುತ್ತಿದೆ. ಆ ಬಳಿಕ ಅವರು ‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡಿದ ಶಂಕರ್ ಅವರು ‘ಇಂಡಿಯನ್ 2’ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಜುಲೈ 12ರಂದು ರಿಲೀಸ್ ಆಗಲಿರೋ ಈ ಸಿನಿಮಾದಿಂದಲೂ ‘ಗೇಮ್ ಚೇಂಜರ್’ ಕೆಲಸ ವಿಳಂಬ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾಲು ಜಾರಿ ಬಾವಿಗೆ ಬಿದ್ದ ಆನೆಮರಿ ಬದುಕುಳಿದಿದ್ದು ಹೇಗೆ?
ಕಾಲು ಜಾರಿ ಬಾವಿಗೆ ಬಿದ್ದ ಆನೆಮರಿ ಬದುಕುಳಿದಿದ್ದು ಹೇಗೆ?
ಬೆಂಗಳೂರಿನಲ್ಲಿ ಬಸ್ ಓಡಿಸುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು
ಬೆಂಗಳೂರಿನಲ್ಲಿ ಬಸ್ ಓಡಿಸುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು
ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವು ಹಿಡಿದ ಯುವತಿ
ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವು ಹಿಡಿದ ಯುವತಿ
ಮುಂಬೈ ರೈಲಿನಲ್ಲಿ ನೇತಾಡುತ್ತಾ ಯುವಕನ ನೃತ್ಯ; ಮಿಸ್ ಮಾಡದೆ ನೋಡಿ
ಮುಂಬೈ ರೈಲಿನಲ್ಲಿ ನೇತಾಡುತ್ತಾ ಯುವಕನ ನೃತ್ಯ; ಮಿಸ್ ಮಾಡದೆ ನೋಡಿ
ಶಿಗ್ಗಾವಿ ಅಭ್ಯರ್ಥಿಯನ್ನು ನಮ್ಮಣ್ಣ ಪಠಾಣ ಒಬ್ಬ ಪೈಲ್ವಾನ ಎಂದ ಹೆಬ್ಬಾಳ್ಕರ್
ಶಿಗ್ಗಾವಿ ಅಭ್ಯರ್ಥಿಯನ್ನು ನಮ್ಮಣ್ಣ ಪಠಾಣ ಒಬ್ಬ ಪೈಲ್ವಾನ ಎಂದ ಹೆಬ್ಬಾಳ್ಕರ್
ಇಬ್ಬರು ಮುತ್ಸದ್ದಿಗಳಿಂದ ಪ್ರಚಾರ ಮಾಡಿಸಿಕೊಳ್ಳುತ್ತಿರುವ ನಿಖಿಲ್ ಅದೃಷ್ಟವಂತ
ಇಬ್ಬರು ಮುತ್ಸದ್ದಿಗಳಿಂದ ಪ್ರಚಾರ ಮಾಡಿಸಿಕೊಳ್ಳುತ್ತಿರುವ ನಿಖಿಲ್ ಅದೃಷ್ಟವಂತ
ಡಿಕೆ ಬ್ರದರ್ಸ್ ಸಿಡಿ ಪ್ಲೇಯರ್ಸ್, ಹಾಸನದಲ್ಲಿ ಗೊತ್ತಾಗಿದೆ; ಕುಮಾರಸ್ವಾಮಿ
ಡಿಕೆ ಬ್ರದರ್ಸ್ ಸಿಡಿ ಪ್ಲೇಯರ್ಸ್, ಹಾಸನದಲ್ಲಿ ಗೊತ್ತಾಗಿದೆ; ಕುಮಾರಸ್ವಾಮಿ
ತುಂಗಾ, ಭದ್ರಾ ನದಿಗಳ ಉಳಿವಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ಪಾದಯಾತ್ರೆ
ತುಂಗಾ, ಭದ್ರಾ ನದಿಗಳ ಉಳಿವಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ಪಾದಯಾತ್ರೆ
ಚುನಾವಣೆ ಗೆಲ್ಲಲು ತಂತ್ರಗಾರಿಕೆ ಸಾಕೆಂದು ಆಡಿಯೋದಲ್ಲಿ ಹೇಳಿರುವ ಹೆಚ್​ಡಿಕೆ
ಚುನಾವಣೆ ಗೆಲ್ಲಲು ತಂತ್ರಗಾರಿಕೆ ಸಾಕೆಂದು ಆಡಿಯೋದಲ್ಲಿ ಹೇಳಿರುವ ಹೆಚ್​ಡಿಕೆ
ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಹೆಬ್ಬಾವು ಹಿಡಿದ ಧೀರ ಮಹಿಳೆ!
ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಹೆಬ್ಬಾವು ಹಿಡಿದ ಧೀರ ಮಹಿಳೆ!