ಅಕ್ಟೋಬರ್​ನಲ್ಲಿ ರಿಲೀಸ್ ಆಗಲಿದೆ ‘ಗೇಮ್ ಚೇಂಜರ್’? ನಡೆಯಲಿದೆ ಬಿಗ್ ಕ್ಲ್ಯಾಶ್

‘ಗೇಮ್ ಚೇಂಜರ್’ ಸಿನಿಮಾಗೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ‘ದಿಲ್ ರಾಜು’ ಅವರು ಬಂಡವಾಳ ಹೂಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್. ಶಂಕರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶಂಕರ್ ಅವರು ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿರುವುದರಿಂದ ಈ ಚಿತ್ರದ ಕೆಲಸ ವಿಳಂಬ ಆಗುತ್ತಿದೆ.

ಅಕ್ಟೋಬರ್​ನಲ್ಲಿ ರಿಲೀಸ್ ಆಗಲಿದೆ ‘ಗೇಮ್ ಚೇಂಜರ್’? ನಡೆಯಲಿದೆ ಬಿಗ್ ಕ್ಲ್ಯಾಶ್
ರಾಮ್ ಚರಣ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 29, 2024 | 8:01 AM

‘ಗೇಮ್ ಚೇಂಜರ್’ ಸಿನಿಮಾ (Game Changer Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಆದಾಗ್ಯೂ ಚಿತ್ರತಂಡ ಶೂಟಿಂಗ್​ ಮಾತ್ರ ಪೂರ್ಣಗೊಳಿಸಿಲ್ಲ. ಒಂದಾದಮೇಲೆ ಒಂದರಂತೆ ಈ ಸಿನಿಮಾದ ಶೂಟಿಂಗ್ ಶೆಡ್ಯೂಲ್ ನಡೆಯುತ್ತಲೇ ಇದ್ದು ಫ್ಯಾನ್ಸ್ ಬೇಸರಗೊಂಡಿದ್ದಾರೆ. ‘ಗೇಮ್ ಚೇಂಜರ್’ ಥಿಯೇಟರ್​ಗೆ ಯಾವಾಗ ಬರಲಿದೆ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳಿಕೊಳ್ಳುತ್ತಲೇ ಇದ್ದಾರೆ. ಇದಕ್ಕೆ ಅಕ್ಟೋಬರ್ ಎನ್ನುವ ಉತ್ತರ ಮೂಲಗಳಿಂದ ಸಿಕ್ಕಿದೆ. ಈ ಮೂಲಕ ದೊಡ್ಡ ಸಿನಿಮಾಗಳ ಮಧ್ಯೆ ಫೈಟ್ ಏರ್ಪಡೋ ಸಾಧ್ಯತೆ ದಟ್ಟವಾಗಿದೆ.

‘ಗೇಮ್ ಚೇಂಜರ್’ ಸಿನಿಮಾಗೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ‘ದಿಲ್ ರಾಜು’ ಅವರು ಬಂಡವಾಳ ಹೂಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್. ಶಂಕರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶಂಕರ್ ಅವರು ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿರುವುದರಿಂದ ಈ ಚಿತ್ರದ ಕೆಲಸ ವಿಳಂಬ ಆಗುತ್ತಿದೆ. ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಈ ಸಿನಿಮಾ ಅಕ್ಟೋಬರ್​ನಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ.

ಇತ್ತೀಚೆಗೆ ದಿಲ್ ರಾಜು ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ಈ ವರ್ಷದ ದೀಪಾವಳಿಗೆ ಸಿನಿಮಾ ರಿಲೀಸ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದ್ದಾರೆ. ಈ ವರ್ಷ ಅಕ್ಟೋಬರ್ ಅಂತ್ಯಕ್ಕೆ ದೀಪಾವಳಿ ಬಂದಿದೆ. ಅಕ್ಟೋಬರ್ ಆರಂಭದಲ್ಲೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತದೆಯೇ ಅಥವಾ ಅಕ್ಟೋಬರ್ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

ಅಕ್ಟೋಬರ್ ಆರಂಭದಲ್ಲಿ ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಹಾಗೂ ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ ‘ಗೇಮ್ ಚೇಂಜರ್’ ಫೈಟ್​ಗೆ ಇಳಿಯೋದು ಅನುಮಾನ. ಹೀಗಾಗಿ, ಅಕ್ಟೋಬರ್ ಅಂತ್ಯಕ್ಕೆ ಈ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.

‘ಗೇಮ್ ಚೇಂಜರ್’ ಸಿನಿಮಾದ ಬಜೆಟ್ 300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದನ್ನು ರಿಕವರಿ ಮಾಡಿಕೊಳ್ಳಬೇಕು ಎಂದರೆ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಬೇಕು. ಹೀಗಾಗಿ, ಸಿನಿಮಾ ರಿಲೀಸ್ ಮಾಡಲು ತಂಡದವರು ತರಾತುರಿ ಮಾಡುವಂತಿಲ್ಲ.

ಇದನ್ನೂ ಓದಿ: ರಾಮ್​ ಚರಣ್ ನಟನೆಯ ‘ಗೇಮ್ ಚೇಂಜರ್’: ಹಾಡು ಚಿತ್ರೀಕರಣಕ್ಕೆ 60 ಕೋಟಿಗೂ ಹೆಚ್ಚು ಖರ್ಚು

‘ಗೇಮ್ ಚೇಂಜರ್​’ಗೆ ಇನ್ನೂ 50 ದಿನಗಳ ಶೂಟ್ ಬಾಕಿ ಇದೆಯಂತೆ. ಈ ಸಿನಿಮಾನ ರೀಶೂಟ್ ಮಾಡಲಾಗುತ್ತಿದೆಯೇ ಎನ್ನುವ ಅನುಮಾನ ಇದೆ. ಹಿಂದಿಯ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. 2023ರಲ್ಲಿ ಈ ಸಿನಿಮಾನ ರಿಲೀಸ್ ಮಾಡೋ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.