Peddi Movie
ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ (Shiva Rajkumar), ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ಆರ್ಆರ್ಆರ್’ ಬಳಿಕ ಸತತ ಸೋಲು ಕಂಡಿರುವ ರಾಮ್ ಚರಣ್ ಪಾಲಿಗೆ ಇದು ಬಲು ಮಹತ್ವದ ಸಿನಿಮಾ ಆಗಿದೆ. ಬುಚ್ಚಿಬಾಬು ಸನಾ ನಿರ್ದೇಶಿಸಿರುವ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಕ್ರೀಡಾಪಟು ಯುವಕನೊಬ್ಬನ ಸುತ್ತ ಕತೆ ಸುತ್ತುತ್ತದೆ.
‘ಪೆದ್ದಿ’ ಸಿನಿಮಾದ ಮೊದಲಾರ್ಧ ಏನಿದೆ? ಏನಿಲ್ಲ?
- ‘ಪೆದ್ದಿ’ ಆಟದ ಕತೆಯ ಜೊತೆಗೆ ಐಡೆಂಟಿಟಿಯ ಕತೆ
- ಮೊದಲಾರ್ಧ ನಾಯಕನ ಎಂಟ್ರಿ, ನಾಯಕಿಯ ಗ್ಲಾಮರ್, ಇತರೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲು.
- ಗುರುತೂ, ಇಲ್ಲದ ರಸ್ತೆಯೂ ಇಲ್ಲದ ಬೆಟ್ಟದ ಬುಡದ ಊರಿನ ಯುವಕ ಪೆದ್ದಿಯ ಕತೆ ಆರಂಭವಾಗುವುದು ಕ್ರಿಕೆಟ್ ಆಟದ ಜೊತೆ
- ಜಾನ್ಹವಿಯ ಎಂಟ್ರಿ ಸೂಪರ್, ಮೊದಲಾರ್ಧದಲ್ಲಿ ನಾಯಕಿ ಕೇವಲ ಗ್ಲಾಮರ್ ಗಷ್ಟೆ ಸೀಮಿತ.
- ಶಿವಣ್ಣನಿಗೆ ಮೊದಲಾರ್ಧದಲ್ಲಿ ಹೆಚ್ಚು ದೃಶ್ಯಗಳಿಲ್ಲ ಆದರೆ ಕತೆಗೆ ತಿರುವು ನೀಡುವುದು ಶಿವಣ್ಣನ ಪಾತ್ರ
ಮೊದಲಾರ್ಧದ ಅಂತ್ಯಕ್ಕೆ ನಾಯಕನಿಗೆ ತನ್ನ ಗುರಿ ಏನೆಂಬುದು ತಿಳಿಯುತ್ತದೆ, ದ್ವಿತೀಯಾರ್ಧ ನಿಜವಾದ ಕತೆ ತೆರೆದುಕೊಳ್ಳಲಿದೆ
- ಮೊದಲಾರ್ಧದಲ್ಲಿ ಎರಡು ಹಾಡುಗಳಿದ್ದು ಎರಡೂ ಚೆನ್ನಾಗಿವೆ, ಅಲ್ಲಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
- ರಾಮ್ ಚರಣ್ ಆಕ್ಷನ್, ಡ್ಯಾನ್ಸ್ ಹಾಗೂ ಎಮೋಷನಲ್ ದೃಶ್ಯದಲ್ಲಿ ಗಮನ ಸೆಳೆಯುತ್ತಾರೆ
- ಮೊದಲಾರ್ಧ ಕೂಲಿಗಾಗಿ ಕ್ರಿಕೆಟ್ ಆಡುವ ನಾಯಕ, ಇಂಟರ್ವೆಲ್ ವೇಳೆಗೆ ಕುಸ್ತಿ ಅಖಾಡಕ್ಕೆ ಕಾಲಿಟ್ಟಿದ್ದಾನೆ.
- ಮೊದಲಾರ್ಧದಲ್ಲಿ ವಿಲನ್ ದಿವ್ಯೇಂದು ಗಮನ ಸೆಳೆಯುತ್ತಾರೆ. ಜಗಪತಿ ಬಾಬು ಪೋಷಕ ಪಾತ್ರ ಭಾವುಕವಾಗಿದೆ. ಬೊಮನ್ ಇರಾನಿಗೆ ಹೆಚ್ಚು ಕೆಲಸವಿಲ್ಲ.
- ಮೊದಲಾರ್ಧದಲ್ಲಿ ನಾಯಕಿ, ನಾಯಕನ ಭೇಟಿಯೇ ಆಗಿಲ್ಲ, ಪೆದ್ದಿ ಎಂಬ ವ್ಯಕ್ತಿ ಇದ್ದಾನೆಂಬುದು ಸಹ ನಾಯಕಿಗೆ ತಿಳಿಯದು
‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿಯ ಹೊರತಾಗಿ ಬಾಲಿವುಡ್ ನಟ ದಿವ್ಯೇಂದು, ಬೊಮನ್ ಇರಾನಿ ಸಹ ನಟಿಸಿದ್ದಾರೆ. ಜಗಪತಿ ಬಾಬು ಸೇರಿದಂತೆ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಶಿವಣ್ಣನ ಪಾತ್ರ ಸಹ ಸಿನಿಮಾನಲ್ಲಿ ಹೈಲೆಟ್, ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ