‘ರಾಮಾಯಣ’ ಪ್ರಚಾರಕ್ಕೆ ನಮಿತ್ ಮಲ್ಹೋತ್ರಾ ಮಾಸ್ಟರ್ ಸ್ಟ್ರೋಕ್

Ramayana movie: ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಇನ್ನೂ ಮೂರು ತಿಂಗಳು ಇದೆ. ಈಗಿನಿಂದಲೂ ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ಚಿತ್ರತಂಡ ಮಾಡುತ್ತಿದೆ. ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಂತೂ ಬಿಂದಾಸ್ ಆಗಿ ಪ್ರಚಾರಕ್ಕಾಗಿ ಹಣ ಸುರಿಯುತ್ತಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಭಾರತದ ಸಿನಿಮಾ ರೀತಿ ಅಲ್ಲದೆ, ಹಾಲಿವುಡ್ ಸಿನಿಮಾ ರೀತಿ ವಿಶ್ವದಾದ್ಯಂತ ಬಿಡುಗಡೆ ಮಾಡಬೇಕು ಎಂಬುದು ಅವರ ಯೋಜನೆ. ಇದೇ ಕಾರಣಕ್ಕೆ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಮಾಸ್ಟರ್ ಸ್ಟ್ರೋಕ್ ಬಳಸಿದ್ದಾರೆ.

‘ರಾಮಾಯಣ’ ಪ್ರಚಾರಕ್ಕೆ ನಮಿತ್ ಮಲ್ಹೋತ್ರಾ ಮಾಸ್ಟರ್ ಸ್ಟ್ರೋಕ್
Ramayana Movie

Updated on: Jul 29, 2026 | 6:09 PM

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ.
  • ಸಿನಿಮಾದ ಟ್ರೈಲರ್ ಅನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ.
  • ಹಾಲಿವುಡ್ ಸಿನಿಮಾದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ರಾಮಾಯಣ’ (Ramayana) ಸಿನಿಮಾ ಬಿಡುಗಡೆಗೆ ಇನ್ನೂ ಮೂರು ತಿಂಗಳು ಇದೆ. ಈಗಿನಿಂದಲೂ ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ಚಿತ್ರತಂಡ ಮಾಡುತ್ತಿದೆ. ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಂತೂ ಬಿಂದಾಸ್ ಆಗಿ ಪ್ರಚಾರಕ್ಕಾಗಿ ಹಣ ಸುರಿಯುತ್ತಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಭಾರತದ ಸಿನಿಮಾ ರೀತಿ ಅಲ್ಲದೆ, ಹಾಲಿವುಡ್ ಸಿನಿಮಾ ರೀತಿ ವಿಶ್ವದಾದ್ಯಂತ ಬಿಡುಗಡೆ ಮಾಡಬೇಕು ಎಂಬುದು ಅವರ ಯೋಜನೆ. ಇದೇ ಕಾರಣಕ್ಕೆ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಮಾಸ್ಟರ್ ಸ್ಟ್ರೋಕ್ ಬಳಸಿದ್ದಾರೆ.

‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗಷ್ಟೆ ರಣ್​​ಬೀರ್ ಕಪೂರ್, ಯಶ್, ನಿತೀಶ್ ತಿವಾರಿ ಅವರುಗಳು ಸ್ಯಾನ್ ಡಿಯಾಗೋನಲ್ಲಿ ನಡೆದ ಕಾಮಿಕಾನ್​​​ನಲ್ಲಿ ಭಾಗವಹಿಸಿ ಬಂದಿದ್ದಾರೆ. ಅಲ್ಲಿ ಹಲವು ಹಾಲಿವುಡ್ ಮಾಧ್ಯಮಗಳ ಜೊತೆಗೆ ಸಂದರ್ಶನಗಳನ್ನು ನೀಡಿದ್ದಾರೆ. ಅಲ್ಲಿ ಸಿನಿಮಾದ ಟ್ರೈಲರ್ ಪ್ರದರ್ಶಿಸಿದ್ದು, ವಿದೇಶಿ ಸಿನಿಮಾಗಳ ಪ್ರೇಕ್ಷಕರಿಂದ ಟ್ರೈಲರ್​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಿಂದ ಬರುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ ಸಿನಿಮಾ. ಇದೀಗ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ದ ಪ್ರಚಾರಕ್ಕೆ ಮತ್ತೊಂದು ಭಾರಿ ದೊಡ್ಡ ಮತ್ತಿ ದಿಟ್ಟ ಹೆಜ್ಜೆ ಇರಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೈಲರ್ ನಾಳೆ (ಜುಲೈ 30) ಬ್ರಾಹ್ಮಿ ಮುಹೂರ್ತದಲ್ಲಿ ನೆರವೇರಲಿದೆ. ಈ ಸಿನಿಮಾದ ಟ್ರೈಲರ್ ಅನ್ನು ಹಾಲಿವುಡ್​​ನ ಬಹು ನಿರೀಕ್ಷಿತ ಸಿನಿಮಾ ಆಗಿರುವ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಜೊತೆಗೆ ಅಟ್ಯಾಚ್ ಮಾಡಿಸಿದ್ದಾರೆ. ಆ ಸಿನಿಮಾ ಸಹ ನಾಳೆ (ಜುಲೈ 30) ಬಿಡುಗಡೆ ಆಗಲಿದ್ದು, ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಇದೀಗ ‘ರಾಮಾಯಣ’ ಸಿನಿಮಾದ ಟ್ರೈಲರ್ ಅನ್ನು ‘ಸ್ಪೈಡರ್​ ಮ್ಯಾನ್’ ಜೊತೆಗೆ ಅಟ್ಯಾಚ್ ಮಾಡುವ ಮೂಲಕ, ವಿಶ್ವದಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ಒಂದೇ ಬಾರಿಗೆ ಟ್ರೈಲರ್ ಅನ್ನು ತಲುಪಿಸಲಾಗುತ್ತಿದೆ.
ಈಗಿನ ಇತ್ತೀಚಿನ ಬೆಳವಣಿಗೆಯ ಪ್ರಕಾರ, ನಿತೇಶ್ ತಿವಾರಿ ಅವರ ‘ರಾಮಾಯಣ’ ಮತ್ತು ಮಾರ್ವೆಲ್‌ನ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೈಲರ್‌ಗಳನ್ನು ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದೊಂದಿಗೆ ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ:ದಾಖಲೆಯ ಮೊತ್ತಕ್ಕೆ ಮಾರಾಟ ಆಗಲಿದೆ ‘ರಾಮಾಯಣ’ ಆಡಿಯೋ ಹಕ್ಕು

‘ಸಿನಿಮಾ ಮಂದಿರಗಳಲ್ಲಿ ‘ಸ್ಪೈಡರ್ ಮ್ಯಾನ್’ ವೀಕ್ಷಿಸುವ ಸಿನೆಮಾ ಪ್ರೇಮಿಗಳಿಗೆ ಮತ್ತೊಂದು ವಿಶೇಷ ಉಡುಗೊರೆ ಕಾಯುತ್ತಿದೆ. ಚಿತ್ರವು ಪ್ರಾರಂಭವಾಗುವ ಮೊದಲು ‘ಅವೇಂಜರ್ಸ್ ಡೂಮ್ಸ್​​ ಡೇ’ ಮತ್ತು ಹೆಚ್ಚು ನಿರೀಕ್ಷಿತ ‘ರಾಮಾಯಣ’ ಸಿನಿಮಾದ ಹೊಸ ಟ್ರೈಲರ್ ಪ್ರದರ್ಶಿಸಲ್ಪಡಲಿದೆ’ ಎಂದು ಮಾಹಿತಿ ನೀಡಲಾಗಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ, ‘ಸ್ಪೈಡರ್ ಮ್ಯಾನ್’ ಸಿನಿಮಾ ಪ್ರದರ್ಶನಗೊಳ್ಳುವ ಹಲವು ದೇಶಗಳಲ್ಲಿ ‘ರಾಮಾಯಣ’ ಸಿನಿಮಾದ ಟ್ರೈಲರ್ ಅನ್ನು ಅಟ್ಯಾಚ್ ಮಾಡಲಾಗಿದೆಯಂತೆ. ಆ ಮೂಲಕ ಒಂದೇ ಬಾರಿಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ವಿಶೇಷವಾಗಿ ಸಿನಿಮಾ ಆಸಕ್ತರನ್ನು ಈ ಮೂಲಕ ‘ರಾಮಾಯಣ’ ಚಿತ್ರತಂಡ ತಲುಪುತ್ತಿದೆ.

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ‘ರಾಮಾಯಣ’ ಟ್ರೈಲರ್ ಬಿಡುಗಡೆಯಾಗಲು ಕೆಲವೇ ಗಂಟೆಗಳ ಮೊದಲು, ಚಲನಚಿತ್ರದ ಅಂತರರಾಷ್ಟ್ರೀಯ ವಿತರಣೆಗಾಗಿ ತಯಾರಕರು ‘ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಜೊತೆ ಒಪ್ಪಂದ ಮಾಡಿಕೊಂಡ ‘ರಾಮಾಯಣ’ ನಿರ್ಮಾಪಕರು ಟ್ರೈಲರ್​ನ ಆನ್​​ಲೈನ್ ಬಿಡುಗಡೆಯನ್ನು ತಡೆದರು. ಇದನ್ನು ಘೋಷಿಸುತ್ತಾ ನಮಿತ್ ಮಲ್ಹೋತ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ, “ಇವತ್ತು ನಮ್ಮ ರಾಮಾಯಣಕ್ಕೆ ಅತ್ಯಂತ ವಿಶೇಷವಾದ ಕ್ಷಣ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ನಮ್ಮ ಪಾಲುದಾರಿಕೆಯಿಂದಾಗಿ ರಾಮಾಯಣವನ್ನು ಜಗತ್ತಿಗೆ ತಲುಪಿಸುವ ನನ್ನ ಕನಸು ಈಗ ನನಸಾಗಿದೆ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಟ್ರೈಲರ್ ಅನ್ನು ಜಾಗತಿಕವಾಗಿ ನಂತರದ ದಿನಾಂಕದಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದಿದ್ದರು. ಅದರಂತೆಯೇ ಈಗ ಜಾಗತಿಕವಾಗಿ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Wed, 29 July 26

Loading...
Unable to load recommendations.
Follow Us