AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕೂವರೆ ಕೋಟಿ ಕೊಟ್ಟು ಎಲೆಕ್ಟ್ರಿಕ್ ಹಮ್ಮರ್ ಖರೀದಿಸಿದ ರಣವೀರ್; ಇದು ಅಂತಿಂಥ ಕಾರಲ್ಲ

ರಣವೀರ್ ಸಿಂಗ್ ಅವರು 4.5 ಕೋಟಿ ರೂಪಾಯಿ ಬೆಲೆಯ ಹಮ್ಮರ್ EV 3X ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಎಲೆಕ್ಟ್ರಿಕ್ ಕಾರು 830 ಹಾರ್ಸ್ ಪವರ್ ಮತ್ತು 500 ಕಿ.ಮೀ ರೇಂಜ್ ಹೊಂದಿದೆ.ಇದು ರಣವೀರ್ ಅವರ ಕಾರು ಸಂಗ್ರಹಕ್ಕೆ ಇದು ಒಂದು ಅಮೂಲ್ಯ ಸೇರ್ಪಡೆಯಾಗಿದೆ.

ನಾಲ್ಕೂವರೆ ಕೋಟಿ ಕೊಟ್ಟು ಎಲೆಕ್ಟ್ರಿಕ್ ಹಮ್ಮರ್ ಖರೀದಿಸಿದ ರಣವೀರ್; ಇದು ಅಂತಿಂಥ ಕಾರಲ್ಲ
ಹಮ್ಮರ್
ರಾಜೇಶ್ ದುಗ್ಗುಮನೆ
|

Updated on:Jul 10, 2025 | 12:32 PM

Share

ರಣವೀರ್ ಸಿಂಗ್ (Ranveer Sinhgh) ಅವರು ಕಾರಿನ ಬಗ್ಗೆ ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಆಗಾಗ ಹೊಸ ಕಾರುಗಳನ್ನು ಖರೀದಿ ಮಾಡುತ್ತಾರೆ. ಅವರ ಬಳಿ ಬೆಂಟ್ಲಿ, ರೇಂಜ್ ರೋವರ್ ರೀತಿಯ ಕಾರುಗಳು ಇವೆ. ಈಗ ಅವರ ಗ್ಯಾರೇಜ್​ಗೆ ಹೊಸ ಕಾರೊಂದು ಸೇರ್ಪಡೆ ಆಗಿದೆ. ಲಕ್ಷುರಿ ಹಾಗೂ ಪವರ್ ಫುಲ್ ಹಮ್ಮರ್ ಇವಿ 3ಎಕ್ಸ್ ಕಾರನ್ನು ರಣವೀರ್ ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ.  ಮುಂದಿನ ದಿನಗಳಲ್ಲಿ ಅವರು ಮುಂಬೈ ರಸ್ತೆಗಳಲ್ಲಿ ಈ ಕಾರಿನಲ್ಲಿ ಸುತ್ತಾಟ ನಡೆಸಿದರೂ ಅಚ್ಚರಿ ಏನಿಲ್ಲ.

ರಣವೀರ್ ಬಳಿ ಇಷ್ಟು ವಿವಿಧ ರೀತಿಯ ಕಾರುಗಳು ಇವೆ ನಿಜ. ಆದರೆ, ಅವರು ಈವರೆಗೆ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿರಲಿಲ್ಲ. ಈಗ ಅವರು ತಮ್ಮ ಹೆಸರಲ್ಲಿ ಹಮ್ಮರ ಖರೀದಿ ಮಾಡಿದ್ದಾರೆ. ಈ ಕಾರನ್ನು ಅವರ ಮುಂಬೈ ನಿವಾಸಕ್ಕೆ ಡೆಲಿವರಿ ನೀಡಲಾಗಿದೆ. ಈ ಕಾರು ಹಲವು ಫೀಚರ್​ಗಳನ್ನು ಹೊಂದಿದೆ.

ರಣವೀರ್ ಖರೀದಿಸಿದ ಹಮ್ಮರ್ ಹೈ ಎಂಡ್ ಕಾರಾಗಿದ್ದು, ಇದರ ಎಕ್ಸ್ ಶೋ ರೂಂ. ಬೆಲೆ 3.85 ಕೋಟಿ ರೂಪಾಯಿ. ಟ್ಯಾಕ್ಸ್ ಹಾಗೂ ಇತರ ವಿಚಾರ ಸೇರಿದರೆ ಇದರ ಬೆಲೆ 4.57 ಕೋಟಿ ರೂಪಾಯಿ ಆಗಲಿದೆ. ರಣವೀರ್ ಸಿಂಗ್ ಬರ್ತ್​ಡೇ ವಾರದಲ್ಲಿ ಈ ಕಾರು ಬಂದಿದೆ ಅನ್ನೋದು ವಿಶೇಷ. ಈ ಕಾರನ್ನು ಅವರು ಬರ್ತ್​ಡೇ ದಿನವೇ ಪಡೆಯುವ ಆಲೋಚನೆಯಲ್ಲಿ ಇದ್ದರು. ಆದರೆ, ಸ್ವಲ್ಪ ತಡವಾಗಿದೆ.

ಇದನ್ನೂ ಓದಿ
Image
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
Image
ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
Image
ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಹಮ್ಮರ್ ಇವಿ 3ಎಕ್ಸ್ ಸಾಮಾನ್ಯ ಕಾರಲ್ಲ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ ಸುಮಾರು 500 ಕಿ.ಮೀ ಚಲಿಸಬಹುದು. 830 ಹಾರ್ಸ್​ ಪವರ್ ಹೊಂದಿದೆ. 11,500 ಟಾರ್ಕ್ ಕಾರಿನಲ್ಲಿ ಇದೆ. ಎಲೆಕ್ಟ್ರಿಕ್ ಕಾರಿನಲ್ಲಿ ಇಷ್ಟೊಂದು ಫೀಚರ್ ಎಲ್ಲಿಯೂ ಸಿಗೋದಿಲ್ಲ. ಸೂಪರ್ ಕ್ರ್ಯೂಸ್ ಮೊದಲಾದ ತಂತ್ರಜ್ಞಾನವನ್ನು ಇದು ಹೊಂದಿದೆ.  ಈ ಕಾರು ಬಿಳಿ, ಕೆಂಪು, ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯ.

ಇದನ್ನೂ ಓದಿ: 20 ವರ್ಷ ಕಿರಿಯ ನಟಿಯ ಜೊತೆ ರಣವೀರ್ ಸಿಂಗ್ ರೊಮ್ಯಾನ್ಸ್; ಕೇಳಿಬಂತು ಟೀಕೆ

ಇದು ಉದ್ದನೆಯ ಕಾರು ಎನಿಸಿಕೊಂಡರು ಐವರು ಮಾತ್ರ ಇದರಲ್ಲಿ ಕೂರಬಹುದು. ಲಕ್ಷುರಿ ಫೀಲ್ ಬರಲಿ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಆರು ಏರ್​ಬ್ಯಾಗ್​ಗಳನ್ನು ಕಾರು ಹೊಂದಿದೆ. 14 ಸ್ಪೀಕರ್​ಗಳನ್ನು ಈ ಕಾರು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Thu, 10 July 25

Follow Us
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ