AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಟೂ ಬಿರುಗಾಳಿ: ಪ್ರೇಮಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ರೇಪ್​ ಕೇಸ್​ ದಾಖಲು

‘ಹೇಮಾ ಸಮಿತಿ ವರದಿ’ ಪ್ರಕಟವಾದ ನಂತರ ಮಲಯಾಳಂ ಚಿತ್ರರಂಗದ ಹಲವರ ಮೇಲೆ ಮೀಟೂ ಆರೋಪ ಕೇಳಿಬಂದಿದೆ. ನಟ ವಿಲಿನ್ ಪೌಲಿ ವಿರುದ್ಧ ಅತ್ಯಾಚಾರದ ಕೇಸ್ ದಾಖಲಾಗಿದೆ. ಆದರೆ ಈ ಆರೋಪ ಸಂಪೂರ್ಣ ಸುಳ್ಳು ಎಂದು ನಿವಿನ್​ ಪೌಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೀಟೂ ಅಭಿಯಾನಕ್ಕೆ ಮತ್ತೆ ಬಲ ಬಂದಿದ್ದು, ಅನೇಕ ನಟರ ಹೆಸರುಗಳು ಹೊರಬರುತ್ತಿವೆ.

ಮೀಟೂ ಬಿರುಗಾಳಿ: ಪ್ರೇಮಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ರೇಪ್​ ಕೇಸ್​ ದಾಖಲು
ನಿವಿನ್ ಪೌಲಿ
ಮದನ್​ ಕುಮಾರ್​
|

Updated on: Sep 03, 2024 | 9:15 PM

Share

ಮಲಯಾಳಂ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ನಟಿಯೊಬ್ಬರು ಈ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಕೇಸ್​ ಕೂಡ ದಾಖಲಾಗಿದೆ. ಈ ವಿಷಯ ತಿಳಿದು ನಿವಿನ್ ಪೌಲಿ ಅಭಿಮಾನಿಗಳಿಗೆ ಶಾಕ್​ ಆಗಿದೆ. ಮಾಲಿವುಡ್​ನಲ್ಲಿ ಅನೇಕ ನಟರ ವಿರುದ್ಧ ಗಂಭೀರ ಆರೋಪ ಎದುರಾಗುತ್ತಿದೆ. ಅನೇಕ ಮಹಿಳೆಯರು ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ‘ಹೇಮಾ ಸಮಿತಿ ವರದಿ’ ಪ್ರಕಟ ಆದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಬಿರುಗಾಳಿ ಜೋರಾಗಿದೆ.

‘ಹೇಮಾ ಕಮಿಟಿ ವರದಿ’ಯಲ್ಲಿ ಮಲಯಾಳಂ ಚಿತ್ರರಂಗ ಕರಾಳ ಮುಖ ಬಯಲಾಗಿದೆ. ಈಗ ನಟಿಯೊಬ್ಬರು ‘ಪ್ರೇಮಂ’ ಸಿನಿಮಾದ ಖ್ಯಾತಿಯ ಹೀರೋ ನಿವಿನ್​ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾದ ಮಾತುಕಥೆ ಸಲುವಾಗಿ ದುಬೈಗೆ ತೆರಳಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಕೇಸ್​ನಲ್ಲಿ ನಟ ನಿವಿನ್​ ಪೌಲಿ 6ನೇ ಆರೋಪಿ ಆಗಿದ್ದಾರೆ. ಶ್ರೇಯಾ ಎಂಬ ಮಹಿಳೆ ಎ1 ಆಗಿದ್ದಾರೆ. ನಿರ್ಮಾಪಕ ಎ.ಕೆ. ಸುನಿಲ್​ ಎ2 ಆಗಿದ್ದಾರೆ. ದೂರಿನಲ್ಲಿ ಉಲ್ಲೇಖ ಆಗಿರುವ ಪ್ರಕಾರ, ಸಿನಿಮಾದ ಮಾತುಕಥೆಗಾಗಿ ಶ್ರೇಯಾ ಎಂಬಾಕೆಯು ನಟಿಯನ್ನು ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ತಿಳಿಸಲಾಗಿದೆ.

ನಿವಿನ್​ ಪೌಲಿ ಪ್ರತಿಕ್ರಿಯೆ:

ಮಹಿಳೆ ನೀಡಿದ ದೂರಿಗೆ ಸಂಬಂಧಿಸಿದಂತೆ ನಿವಿನ್​ ಪೌಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ‘ಯುವತಿಯೊಬ್ಬಳ ಮೇಲೆ ನಾನು ಲೈಂಗಿಕ ದೌರ್ಜನ್ಯ ಎಸಗಿದ್ದೇನೆ ಎಂದು ಆರೋಪಿಸಿರುವ ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು ಅಂತ ದಯವಿಟ್ಟು ತಿಳಿಯಿರಿ’ ಎಂದಿದ್ದಾರೆ ನಿವಿನ್​ ಪೌಲಿ.

ಇದನ್ನೂ ಓದಿ: ‘ಹೇಮಾ ಸಮಿತಿ ರೀತಿ ಟಾಲಿವುಡ್​ನಲ್ಲೂ ವರದಿ ಪ್ರಕಟವಾಗಲಿ’: ಸಮಂತಾ ಒತ್ತಾಯ

‘ನನ್ನ ಮೇಲೆ ಬಂದಿರುವ ಆರೋಪಗಳು ಆಧಾರ ರಹಿತ ಎಂದು ಸಾಬೀತು ಮಾಡುತ್ತೇನೆ ಹಾಗೂ ಅದಕ್ಕೆ ಕಾರಣ ಆದವರನ್ನು ಪತ್ತೆ ಹಚ್ಚಲು ಎಲ್ಲ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಉಳಿದ ಎಲ್ಲವನ್ನೂ ಕಾನೂನಿನ ಮೂಲಕ ನೋಡಿಕೊಳ್ಳಲಾಗುವುದು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ನಿವಿನ್​ ಪೌಲಿ ಅವರು ಪೋಸ್ಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.