ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarakonda) ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ‘ಗೀತ ಗೋವಿಂದಂ’ ಸಿನಿಮಾ ತೆರೆಕಂಡ ನಂತರದಲ್ಲಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇವರಿಬ್ಬರ ಇಂಟಿಮೇಟ್ ದೃಶ್ಯಗಳು ಸಖತ್ ಸೌಂಡ್ ಮಾಡಿತ್ತು. ಸಾಕಷ್ಟು ಬಾರಿ ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಈಗ ರಶ್ಮಿಕಾ ಮತ್ತು ವಿಜಯ್ ಹೊಸ ವರ್ಷನ್ನು ಒಟ್ಟಾಗಿ ಆಚರಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಫೋಟೋ ಸಾಕ್ಷ್ಯ ಕೂಡ ಸಿಕ್ಕಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದಾದ ಬಳಿಕ ತೆರೆಗೆ ಬಂದ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇಬ್ಬರೂ ಮತ್ತೊಮ್ಮೆ ಜತೆಯಾಗಿ ಕಾಣಿಸಿಕೊಂಡರು. ಈ ಚಿತ್ರ ರಿಲೀಸ್ ಆದ ನಂತರ ಈ ಜೋಡಿ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದೆ.
Celebrating that response to #ligerfirstglimpse ?? #liger
And Happy New Year you all ❤️ pic.twitter.com/Om71259159
— Anand Deverakonda (@ananddeverkonda) January 1, 2022
ರಶ್ಮಿಕಾ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಕೂಡ ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಅನೇಕ ಬಾರಿ ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಹೋಟೆಲ್ನಲ್ಲಿ ಜತೆಯಾಗಿ ಊಟ ಮಾಡಿ, ಮರುದಿನ ಬೆಳಗ್ಗೆ ಒಟ್ಟಾಗಿ ವರ್ಕೌಟ್ ಕೂಡ ಮಾಡಿದ್ದಿದೆ. ಈಗ ಇವರು ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎನ್ನಲಾಗಿದೆ.
Happy 2022 my loves.! ?? pic.twitter.com/oDeajTmYky
— Rashmika Mandanna (@iamRashmika) January 1, 2022
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಹಿಂಭಾಗದಲ್ಲಿ ತೆಂಗಿನ ಮರ, ಆಗಸ ಇದೆ. ಇದೇ ಜಾಗದಲ್ಲಿ ನಿಂತು ರಶ್ಮಿಕಾ ಮಂದಣ್ಣ ಕೂಡ ಫೋಟೋ ಹಾಕಿದ್ದಾರೆ. ವಿಜಯ್ ದೇವರಕೊಂಡ ಕೂಡ ಇಲ್ಲಿಯೇ ಇದ್ದರು ಎನ್ನಲಾಗುತ್ತಿದೆ. ಇನ್ನು, ವಿಜಯ್ ಹಾಗೂ ರಶ್ಮಿಕಾ ಕ್ಯಾಪ್ಶನ್ ಒಂದೇ ತೆರನಾಗಿದೆ. ಈ ಫೋಟೋ ನೋಡಿದ ಅನೇಕರು ಇಬ್ಬರ ಮಧ್ಯೆ ನಡೆಯುತ್ತಿರುವುದೇನು? ಇಬ್ಬರೂ ಲವರ್ಸ್ ಎಂದು ಬರೆದುಕೊಳ್ಳುತ್ತಿದ್ದಾರೆ.
Happy new year my loves ? pic.twitter.com/U6uWax0l2T
— Vijay Deverakonda (@TheDeverakonda) January 1, 2022
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಸಿನಿ ಬದುಕಿಗೆ ಐದು ವರ್ಷ; ತಾವು ಕಲಿತ ಪಾಠದ ಬಗ್ಗೆ ಹೇಳಿಕೊಂಡ ನಟಿ
ಧೂಳೆಬ್ಬಿಸಿದ ‘ಲೈಗರ್’ ಗ್ಲಿಂಪ್ಸ್ ವಿಡಿಯೋ; ವಿಜಯ್ ದೇವರಕೊಂಡಗೆ ಭಾರೀ ಮೆಚ್ಚುಗೆ