Rashmika Mandanna: ‘ವಿಜಯ್ ದೇವರಕೊಂಡ ಜತೆ ರಶ್ಮಿಕಾ ಪ್ರೀತಿಯಲ್ಲಿದ್ದಾರೆ?’; ಸಖತ್ ಚರ್ಚೆಗೆ ಕಾರಣವಾಗಿತ್ತು ಈ ವಿಚಾರ

Rashmika Mandanna: ‘ವಿಜಯ್ ದೇವರಕೊಂಡ ಜತೆ ರಶ್ಮಿಕಾ ಪ್ರೀತಿಯಲ್ಲಿದ್ದಾರೆ?’; ಸಖತ್ ಚರ್ಚೆಗೆ ಕಾರಣವಾಗಿತ್ತು ಈ ವಿಚಾರ
ರಶ್ಮಿಕಾ-ವಿಜಯ್ ದೇವರಕೊಂಡ

Rashmika Mandanna Birthday: ರಶ್ಮಿಕಾ ಹಾಗೂ ವಿಜಯ್​ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು.

TV9kannada Web Team

| Edited By: shivaprasad.hs

Apr 05, 2022 | 7:45 AM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್​ ದೇವರಕೊಂಡ (Vijay Devarakonda) ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ‘ಗೀತ ಗೋವಿಂದಂ’ ಸಿನಿಮಾ ತೆರೆಕಂಡ ನಂತರದಲ್ಲಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಇವರಿಬ್ಬರ ಇಂಟಿಮೇಟ್​ ದೃಶ್ಯಗಳು ಸಖತ್​ ಸೌಂಡ್​ ಮಾಡಿತ್ತು. ಸಾಕಷ್ಟು ಬಾರಿ ರಶ್ಮಿಕಾ ಹಾಗೂ ವಿಜಯ್​ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ‘ವಿಜಯ್ ದೇವರಕೊಂಡ ಜತೆ ರಶ್ಮಿಕಾ ಪ್ರೀತಿಯಲ್ಲಿದ್ದಾರೆ’ ಎನ್ನುವ ಅಭಿಪ್ರಾಯ ಅಭಿಮಾನಿಗಳ ವಲಯದಲ್ಲಿ ವ್ಯಕ್ತವಾಗಿತ್ತು.

ಹೋಟೆಲ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಜೋಡಿ

ರಶ್ಮಿಕಾ ಮಂದಣ್ಣ ‘ಗುಡ್​ಬೈ’ ಹಾಗೂ ‘ಮಿಷನ್​ ಮಜ್ನು’ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದರು. ವಿಜಯ್​ ದೇವರಕೊಂಡ ಅವರು ‘ಲೈಗರ್​’ ಸಿನಿಮಾ ಕೆಲಸ ಹಿನ್ನೆಲೆಯಲ್ಲಿ ಮುಂಬೈನಲ್ಲೇ ಇದ್ದರು. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಒಂದು ಕಡೆ ಸೇರಿದ್ದಾರೆ. ಇಬ್ಬರೂ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಜಿಮ್​ನಲ್ಲಿ ಒಟ್ಟಿಗೆ ವರ್ಕೌಟ್​

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮುಂಬೈ​ನ ಜಿಮ್​ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ್ದರು. ಈ ಫೋಟೋಗಳು ಕೂಡ ವೈರಲ್​ ಆಗಿದ್ದವು. ಈ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದರು.

ವಿಜಯ್​ ಕುಟುಂಬದ ಜತೆ ಹೊಸವರ್ಷ ಆಚರಣೆ

ರಶ್ಮಿಕಾ ಮತ್ತು ವಿಜಯ್​ ಹೊಸ ವರ್ಷವನ್ನು ಒಟ್ಟಾಗಿ ಆಚರಣೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಇದಕ್ಕೆ ಫೋಟೋ ಸಾಕ್ಷ್ಯ ಕೂಡ ಸಿಕ್ಕಿತ್ತು. ಇದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಮೂಡಿತ್ತು. ಹೊಸ ವರ್ಷದ ಸಂದರ್ಭದಲ್ಲಿ ವಿಜಯ್​ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಫೋಟೋ ಒಂದನ್ನು ಪೋಸ್ಟ್​ ಮಾಡಿದ್ದರು. ಈ ಫೋಟೋದಲ್ಲಿ ಹಿಂಭಾಗದಲ್ಲಿ ತೆಂಗಿನ ಮರ, ಆಗಸ ಇತ್ತು. ಇದೇ ಜಾಗದಲ್ಲಿ ನಿಂತು ರಶ್ಮಿಕಾ ಮಂದಣ್ಣ ಕೂಡ ಫೋಟೋ ಹಾಕಿದ್ದರು. ವಿಜಯ್​ ದೇವರಕೊಂಡ ಕೂಡ ಇಲ್ಲಿಯೇ ಇದ್ದರು ಎನ್ನಲಾಗಿತ್ತು. ಇನ್ನು, ವಿಜಯ್​ ಹಾಗೂ ರಶ್ಮಿಕಾ ಕ್ಯಾಪ್ಶನ್​ ಒಂದೇ ರೀಯಲ್ಲಿತ್ತು.

ಮದುವೆ ವಿಚಾರಕ್ಕೆ ಗರಂ ಆಗಿದ್ದ ವಿಜಯ್

ವಿಜಯ್ ಹಾಗೂ ರಶ್ಮಿಕಾ ಮದುವೆ ಆಗುತ್ತಾರೆ ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟ ಮಾಡಿದ್ದವು. ಇದಕ್ಕೆ ವಿಜಯ್​ ದೇವರಕೊಂಡ ಗರಂ ಆಗಿದ್ದರು. ಇದು ಸುಳ್ಳು ಸುದ್ದಿ ಎಂದು ಗರಂ ಆಗಿಯೇ ಉತ್ತರಿಸಿದ್ದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು 

ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ? ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಹೊಸ ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗ

Follow us on

Related Stories

Most Read Stories

Click on your DTH Provider to Add TV9 Kannada