ಮುಖಕ್ಕೆ ರಕ್ತ, ಕಣ್ಣಲ್ಲಿ ಬೆಂಕಿ; ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಬೆಚ್ಚಿಬೀಳಿಸೋ ಅವತಾರ

ರಶ್ಮಿಕಾ ಮಂದಣ್ಣ ಅವರು ‘ಮೈಸಾ’ ಎಂಬ ಹೊಸ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಮತ್ತು ಲುಕ್ ಸಂಪೂರ್ಣವಾಗಿ ಭಿನ್ನವಾಗಿದೆ. ರೊಮ್ಯಾಂಟಿಕ್ ಪಾತ್ರಗಳಿಂದ ದೂರ ಸರಿದು, ಒಂದು ಮಹಿಳಾ ಪ್ರಧಾನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಮುಖಕ್ಕೆ ರಕ್ತ, ಕಣ್ಣಲ್ಲಿ ಬೆಂಕಿ; ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಬೆಚ್ಚಿಬೀಳಿಸೋ ಅವತಾರ
ರಶ್ಮಿಕಾ

Updated on: Jun 27, 2025 | 10:30 AM

ರಶ್ಮಿಕಾ ಮಂದಣ್ಣ (Rashmika Mandanna) ಅಂದಕೂಡಲೇ ನೆನಪಾಗೋದು ಅವರ ಸುಂದರ ನಗು, ಅವರ ಮುದ್ದಾದ ನೋಟ. ಬಹುತೇಕ ಚಿತ್ರಗಳಲ್ಲಿ ಅವರು ಹೀಗೆಯೇ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇರೋ ಫೋಟೋಗಳು ಇದೇ ರೀತಿಯಲ್ಲಿ ಇದೆ. ಆದರೆ, ರಶ್ಮಿಕಾ ಅವರ ಹೊಸ ಅವತಾರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸುವಂತೆ ಇದೆ. ‘ಮೈಸಾ’ ಹೆಸರಿನ ಹೊಸ ಚಿತ್ರವನ್ನು ಅವರು ಘೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಅವರ ಗೆಟಪ್ ಭಿನ್ನವಾಗಿದೆ.

ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಇಷ್ಟ ಆಗುತ್ತಾರೆ. ಅವರು ಇತ್ತೀಚೆಗೆ ನಟನೆಯಲ್ಲಿ ಪಳಗಿದ್ದಾರೆ. ಹೀಗಾಗಿ, ವಿವಿಧ ರೀತಿಯ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಈಗ ಮಹಿಳಾ ಪ್ರಧಾನ ಸಿನಿಮಾ ಒಂದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮೈಸಾ’ ಎಂಬ ಟೈಟಲ್ ಇಡಲಾಗಿದೆ. ಈ ಶೀರ್ಷಿಕೆ ಗಮನ ಸೆಳೆಯುವಂತಿದೆ. ಅವರ ಲುಕ್ ಕೂಡ ಭಿನ್ನವಾಗಿದೆ.

ಇದನ್ನೂ ಓದಿ
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ
ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್


ರಶ್ಮಿಕಾ ಕೈಯಲ್ಲಿ ಆಯುಧ ಇದೆ. ಮುಖಕ್ಕೆ ರಕ್ತ ಅಂಟಿದೆ. ಅವರು ಕಣ್ಣಲ್ಲೇ ಸುಡುತ್ತಿದ್ದಾರೆ. ‘ಮೈಸಾ’ ಪ್ಯಾನ್ ಇಂಡಿಯಾ ಚಿತ್ರ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಎಂಬುವವರು ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಕುಬೇರ’ ಗೆದ್ದ ಖುಷಿಯಲ್ಲಿ ಹೊಸ ಚಿತ್ರ ಘೋಷಿಸಿದ ರಶ್ಮಿಕಾ; ವಾರಿಯರ್ ಅವತಾರ

ರಶ್ಮಿಕಾ ಅವರಿಗೆ ಈ ಪಾತ್ರ ಸಿಕ್ಕಿದ್ದಕ್ಕೆ ಖುಷಿ ಇದೆ. ಅವರು ತಮ್ಮ ಅಭಿನಯ ಸಾಬೀತು ಮಾಡಲು ಒಂದೊಳ್ಳೆಯ ಅವಕಾಶಕ್ಕಾಗಿ ಕಾದಿದ್ದರು. ಈಗ ಆ ಅವಕಾಶ ಅವರಿಗೆ ಸಿಕ್ಕಿದೆ. ಇದಕ್ಕೆ ಅವರು ಖುಷಿಯಾಗಿದ್ದಾರೆ. ಕೆಲವೊಮ್ಮೆ ನಾಯಕಿಯರನ್ನು ಮರ ಸುತ್ತಿಸುವ ಪಾತ್ರಕ್ಕೆ ಮಾತ್ರ ಸೀಮಿತ ಮಾಡುತ್ತಾರೆ. ಆದರೆ, ಈಗ ಈ ರೀತಿ ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಬೇಡಿಕೆ ಇದೆ. ಸಿನಿಮಾ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ‘ಕುಬೇರ’ ಸಿನಿಮಾದಲ್ಲೂ ರಶ್ಮಿಕಾ ನಟನೆಯನ್ನು ಹೊಗಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:29 am, Fri, 27 June 25