ನಟಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಹೆಚ್ಚಾಗಿದೆ. ಏನೇ ಮಾಡಿದರೂ ಅದು ಹೈಲೈಟ್ ಆಗುತ್ತದೆ. ಅವರು ಹೋದಲ್ಲೆಲ್ಲ ಪಾಪರಾಜಿಗಳು ಹಿಂದೆ ಹಿಂದೆ ಬರುತ್ತಾರೆ. ಈಗ ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಗೊತ್ತಿಲ್ಲದೆ ತಪ್ಪೊಂದನ್ನು ಮಾಡಿದ್ದಾರೆ. ಅದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಅಭಿಮಾನಿಗಳು ಫನ್ ಆಗಿ ತೆಗೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಮುಂಬೈ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದಾರೆ. ಅವರು ತರಾತುರಿಯಲ್ಲಿದ್ದರು. ಅವರು ಹೊರ ಬರುತ್ತಿದ್ದಂತೆ ಎದುರು ನಿಂತಿದ್ದ ಕಾರನ್ನು ಏರಲು ಹೊರಟರು. ಆಗ ರಶ್ಮಿಕಾ ತಂಡದವರು ‘ಆ ಕಾರಲ್ಲ’ ಎಂದು ಕೂಗಿದ್ದಾರೆ. ಆಗ ರಶ್ಮಿಕಾ ನಗುತ್ತಲೇ ತಮ್ಮ ಕಾರಿನ ಬಳಿ ಹೋಗಿದ್ದಾರೆ.
ಶನಿವಾರ (ಜನವರಿ 6) ಮುಂಬೈನಲ್ಲಿ ‘ಅನಿಮಲ್’ ಸಿನಿಮಾದ ಸಕ್ಸಸ್ ಮೀಟ್ ನಡೆದಿದೆ. ಇದರಲ್ಲಿ ಭಾಗವಹಿಸಲು ರಶ್ಮಿಕಾ ಅವರು ಮುಂಬೈಗೆ ಆಗಮಿಸಿದ್ದಾರೆ. ಕಾರ್ಯಕ್ರಮಕ್ಕೆ ವಿಳಂಬ ಆಯಿತು ಎನ್ನುವ ಕಾರಣಕ್ಕೆ ಅವರು ತರಾತುರಿಯಲ್ಲಿ ಇದ್ದರು ಎನ್ನಲಾಗಿದೆ.
‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಅನಿಲ್ ಕಪೂರ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಪಡೆದಿದ್ದಾರೆ. ಬಾಲಿವುಡ್ನಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ ಎಷ್ಟು ಗೊತ್ತೆ? ಇರುವ ಕಾರುಗಳ್ಯಾವುವು?
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿ ಇವೆ. ಹಲವು ಸಿನಿಮಾ ಆಫರ್ಗಳು ರಶ್ಮಿಕಾನ ಹುಡುಕಿ ಬರುತ್ತಿವೆ. ಅವರು ಅಳೆದು ತೂಗಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕಂತೂ ಅವರು ಕನ್ನಡಕ್ಕೆ ಮರಳೋದು ಅನುಮಾನ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ