
ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ವಿಷಯ ಇತ್ತೀಚೆಗೆ ಸಾಕಷ್ಟು ಸುದ್ದಿ ಆಗುತ್ತಿದೆ. ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡಿದ್ದು, ಇದಕ್ಕೆ ರಶ್ಮಿಕಾ ಮಂದಣ್ಣ ಕಡೆಯಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದನ್ನು ಅವರು ಪರೋಕ್ಷವಾಗಿ ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ತಾವು ವಿಜಯ್ನ ಮದುವೆ ಆಗೋದಾಗಿ ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಭಾಗಿ ಆಗಿದ್ದಾರೆ. ರಶ್ಮಿಕಾ ಜೊತೆ ಸಹ ನಟ ದೀಕ್ಷಿತ್ ಶೆಟ್ಟಿ ಕೂಡ ಇದ್ದರು. ಈ ವೇಳೆ ರಶ್ಮಿಕಾಗೆ ವಿವಿಧ ಪ್ರಶ್ನೆಗಳು ಎದುರಾಗಿವೆ. ಇದರಲ್ಲಿ ಅವರ ಮದುವೆ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆಗಳು ಎದುರಾಗಿವೆ.
‘ನಿಮ್ಮ ಬಗ್ಗೆ ಒಂದು ವದಂತಿ ಕೇಳಿ ಬಂದಿರುತ್ತದೆ. ಆದರೆ, ಅದು ನಿಜವಾಗಿರುತ್ತದೆ. ಯಾವುದು ಅದು’ ಎಂದು ರಶ್ಮಿಕಾಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ನಗುತ್ತಾ ಉತ್ತರಿಸಿದ ಅವರು, ‘ಏನು ಹೇಳಬಹುದು? ಅದು ಎಲ್ಲರಿಗೂ ಗೊತ್ತಿದೆ’ ಎಂದರು. ಈ ಮೂಲಕ ವಿಜಯ್ ಜೊತೆಗಿನ ನಿಶ್ಚಿತಾರ್ಥ ವಿಚಾರವನ್ನು ಅವರು ಬಹುತೇಕ ಖಚಿತಪಡಿಸಿದರು.
‘ಯಾರನ್ನು ಮದುವೆ ಆಗುತ್ತೀರಿ’ ಎಂದು ಕೂಡ ಕೇಳಲಾಯಿತು. ಇದಕ್ಕೆ ರಶ್ಮಿಕಾ ಮಂದಣ್ಣ ಅವರು, ಹಿಂದೂ ಮುಂದೂ ಯೋಚಿಸದೆ ‘ವಿಜಯ್ ಅವರನ್ನು ಮದುವೆ ಆಗ್ತೀನಿ’ ಎಂದರು. ಸದ್ಯ ರಶ್ಮಿಕಾ-ವಿಜಯ್ ಸುದ್ದಿ ಎಲ್ಲ ಕಡೆಗಳಲ್ಲಿ ಹರಡಿದೆ. ಇದು ಸುಳ್ಳು ಎಂದಾಗಿದ್ದರೆ ಇದನ್ನು ಅವರು ಅಲ್ಲಗಳೆಯುತ್ತಿದ್ದರು. ಆದರೆ, ರಶ್ಮಿಕಾ ಆ ರೀತಿ ಮಾಡುತ್ತಿಲ್ಲ. ಪರೋಕ್ಷವಾಗಿ ಇದನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆ ಇದೆ’: ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ರಶ್ಮಿಕಾ ಮಂದಣ್ಣ ಅವರು ವೃತ್ತಿ ಜಿವನದಲ್ಲಿ ಸಾಕಷ್ಟು ಏಳ್ಗೆ ಕಾಣುತ್ತಿದ್ದಾರೆ. ಆದರೆ, ವಿಜಯ್ ದೇವರಕೊಂಡ ಅವರ ವೃತ್ತಿ ಜೀವನ ಕುಸಿಯುತ್ತಿದೆ. ಅವರ ಸಿನಿಮಾಗಳು ಸತತ ಫ್ಲಾಪ್ ಆಗುತ್ತಿವೆ. ಅವರಿಗೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಎಂಬುದು ಸಿಕ್ಕೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.