ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸಿರೋ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರದಿಂದ ಇಡೀ ತಂಡ ದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ರಿಲೀಸ್ ಆದ ವಾರದ ಒಳಗೆ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲು ರೆಡಿ ಆಗಿದೆ. ಇದು ನಿಜಕ್ಕೂ ದಾಖಲೆಯೇ ಸರಿ. ಈ ಮಧ್ಯೆ ರಶ್ಮಿಕಾ ಅವರನ್ನು ಅಲ್ಲು ಅರ್ಜುನ್ ಹೊಗಳಿರೋ ವಿಡಿಯೋ ವೈರಲ್ ಆಗುತ್ತಿದೆ. ಅವರು ರಶ್ಮಿಕಾನ ಬಾಯ್ತು ಮೆಚ್ಚಿಕೊಂಡಿದ್ದಾರೆ.
‘ಪುಷ್ಪ’ ಸಿನಿಮಾ ಸೆಟ್ಟೇರಿ ಹಲವು ವರ್ಷಗಳು ಕಳೆದಿವೆ. ಅಲ್ಲು ಅರ್ಜುನ್ ಅವರು ಕಳೆದ ಕೆಲ ವರ್ಷ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವ ಏಕೈಕ ಸಿನಿಮಾ ಇದು. ಈ ಕಾರಣಕ್ಕೆ ರಶ್ಮಿಕಾ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ರಶ್ಮಿಕಾನ ಬಾಯ್ತುಂಬ ಹೊಗಳಿದ್ದಾರೆ.
‘ನನ್ನ ಸ್ಪೆಷಲ್ ನಟಿ ಶ್ರೀವಲ್ಲಿ. ಕಳೆದ ನಾಲ್ಕು ವರ್ಷಗಳಲ್ಲಿ ನಟಿಸಿದ ಏಕೈಕ ನಟಿ ಎಂದರೆ ರಶ್ಮಿಕಾ ಮಂದಣ್ಣ. ಅವರು ಕುಟುಂಬದಂತೆ ಆಗಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾಡಿದ ಕೆಲಸಕ್ಕೆ ನನ್ನ ಧನ್ಯವಾದ. ಅವರ ಬೆಂಬಲ ಇಲ್ಲದೆ ಈ ಚಿತ್ರ ಪೂರ್ಣಗೊಳ್ಳುತ್ತಿರಲಿಲ್ಲ’ ಎಂದಿದ್ದಾರೆ ಅಲ್ಲು ಅರ್ಜುನ್.
‘ಅವರು ನಿರಂತರವಾಗಿ ಶೂಟಿಂಗ್ ಮಾಡುತ್ತಾ ಇರುತ್ತಾರೆ. ಅವರು ಅಪರೂಪಕ್ಕೆ ಬರುತ್ತಿದ್ದರು. ಅವರು ಬಂದಾಗ ಒಂದು ಎನರ್ಜಿ ಇರುತ್ತಿತ್ತು. ಅವರು ಹೋದಾಗ ಬೇಸರ ಎನಿಸುತ್ತಿತ್ತು. ಅವರಂತ ನಟಿಯರು ಬೇಕು. ಇಂಥ ನಟಿಯರ ಜೊತೆ ಕೆಲಸ ಮಾಡಬೇಕು. ನಾವು ಈಗಿನ ನಟಿಯರು ಹಾಗೆ ಹೀಗೆ ಎಂದು ದೂರು ನೀಡುತ್ತೇವೆ. ನಟಿತರು ಇದ್ರೆ ಹೀಗೆ ಇರಬೇಕು. ಅವರಿಲ್ಲದೆ, ನಾನು ಹೀಗೆ ಪರ್ಫಾರ್ಮ್ ಮಾಡ್ತಾ ಇರಲ್ಲಿಲ್ಲ. ಥ್ಯಾಂಕ್ ಯೂ ರಶ್’ ಎಂದಿದ್ದಾರೆ ಅಲ್ಲು ಅರ್ಜುನ್.
ಇದನ್ನೂ ಓದಿ: ‘ಪುಷ್ಪ 2’ ಸಿನಿಮಾದ ವಿಶೇಷ ಸೀರೆ ಧರಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ 2’ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಅವರು ಹೀರೋ ಪಾತ್ರಧಾರಿ ರೀತಿಯೇ ಮಿಂಚುತ್ತಾರೆ. ಅವರ ಪಾತ್ರಕ್ಕೆ ಸಿಕ್ಕ ಬೇಡಿಕೆ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Tue, 10 December 24