ಸ್ವಿಮ್ಮಿಂಗ್ಪೂಲ್ನಲ್ಲಿ ಬಿದ್ದ ಐಶ್ವರ್ಯಾನ ರಕ್ಷಿಸಿದ ತ್ರಿವಿಕ್ರಂ; ಉರಿದು ಹೋದ ಭವ್ಯಾ ಎಕ್ಸ್ಪ್ರೆಷನ್ ನೋಡಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈಗಾಗಲೇ 70 ದಿನಗಳು ಕಳೆದು ಹೋಗಿವೆ. ಇನ್ನು ಉಳಿದಿರೋದು ಕೆಲವೇ ವಾರಗಳು ಮಾತ್ರ. ಹೀಗಿರುವಾಗಲೇ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಈಗ ತ್ರಿವಿಕ್ರಂ ಅವರು ಐಶ್ವರ್ಯಾ ಜೊತೆ ನಡೆದುಕೊಂಡ ರೀತಿಗೆ ಭವ್ಯಾ ಯಾಕಿಷ್ಟು ರಿಯಾಕ್ಟ್ ಮಾಡಿದರು ಎಂಬ ವಿಚಾರ ರಿವೀಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಹಾಗೂ ಐಶ್ವರ್ಯಾ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರಿಬ್ಬರೂ ಆಪ್ತವಾಗಿದ್ದಾರೆ. ತ್ರಿವಿಕ್ರಂ ನೆರಳಲ್ಲಿ ಭವ್ಯಾ ಇದ್ದಾರೆ ಎಂಬ ಮಾತು ಸಾಕಷ್ಟು ಬಾರಿ ಬಂದಿತ್ತು. ಹೀಗಿರುವಾಗಲೇ ಐಶ್ವರ್ಯಾ ಈಜುಕೊಳದಲ್ಲಿ ಬಿದ್ದಾಗ ತ್ರಿವಿಕ್ರಂ ಹೋಗಿ ರಕ್ಷಣೆ ಮಾಡಿದ್ದಾರೆ. ಇದರಿಂದ ಭವ್ಯಾ ಉರಿದುರಿದು ಹೋಗಿದ್ದಾರೆ. ಭವ್ಯಾ ಹೀಗೆ ನಡೆದುಕೊಳ್ಳುವುದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈಗಾಗಲೇ 70 ದಿನಗಳು ಕಳೆದು ಹೋಗಿವೆ. ಇನ್ನು ಉಳಿದಿರೋದು ಕೆಲವೇ ವಾರಗಳು ಮಾತ್ರ. ಹೀಗಿರುವಾಗಲೇ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಈಗ ತ್ರಿವಿಕ್ರಂ ಅವರು ನಡೆದುಕೊಂಡ ರೀತಿಗೆ ಭವ್ಯಾ ಯಾಕಿಷ್ಟು ರಿಯಾಕ್ಟ್ ಮಾಡಿದರು ಎಂಬ ವಿಚಾರ ರಿವೀಲ್ ಆಗಿದೆ.
ಜಿಮ್ನಲ್ಲಿ ತ್ರಿವಿಕ್ರಂ ವರ್ಕೌಟ್ ಮಾಡುತ್ತಿದ್ದರು. ಆಗ ಭವ್ಯಾ ಅವರು ಎಣ್ಣೆ ಸವರೋಕೆ ಬಂದರು. ತ್ರಿವಿಕ್ರಂ ಬೆನ್ನಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಐಶ್ವರ್ಯಾ ಅವರು ಸ್ವಿಮ್ಮಿಂಗ್ಪೂಲ್ಗೆ ಬಿದ್ದಿದ್ದಾರೆ. ಹಿಂದೆ ಮುಂದೆ ನೋಡದೆ ತ್ರಿವಿಕ್ರಂ ಅವರು ಹೋಗಿ ಐಶ್ವರ್ಯಾನ ರಕ್ಷಣೆ ಮಾಡಿದ್ದಾರೆ. ಇದು ಭವ್ಯಾಗೆ ಕೋಪ ತರಿಸಿದೆ. ಅವರು ಉರಿದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಬಿಗ್ ಬಾಸ್ ಮನೆಗೆ ಮರಳಿ ಬಂದ ಚೈತ್ರಾ ಕುಂದಾಪುರ
ಅಂದಹಾಗೆ, ಇದು ನಿಜವಾಗಿಯೂ ನಡೆದಿದ್ದಲ್ಲ. ಪಕ್ಕಾ ಸ್ಕ್ರಿಪ್ಟೆಡ್. ಬಿಗ್ ಬಾಸ್ ದಿನಸಿ ಟಾಸ್ಕ್ ನೀಡಿದ್ದರು. ಈ ಟಾಸ್ಕ್ನಲ್ಲಿ ಗೆಲ್ಲಬೇಕು ಎಂದರೆ ಬಿಗ್ ಬಾಸ್ ಹೇಳಿದ ರೀತಿಯೇ ನಡೆದುಕೊಳ್ಳಬೇಕಿತ್ತು ಮತ್ತು ಅದು ನಿಜ ಎಂಬ ರೀತಿಯಲ್ಲಿ ಕಾಣಿಸಬೇಕಿತ್ತು. ಈ ಕಾರಣಕ್ಕೆ ತ್ರಿವಿಕ್ರಂ ಹಾಗೂ ಭವ್ಯಾ ಅವರು ನಡೆದಯಿಕೊಂಡರು. ಆ ಬಳಿಕ ಎಲ್ಲರೂ ಸಹಜ ಸ್ಥಿತಿಗೆ ಬಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.