AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರ ಬಾಕ್ಸ್ ಆಫೀಸ್​ನಲ್ಲಿ ‘ಪುಷ್ಪ 2’ ಪವಾಡ; ತೆಲುಗಿಗಿಂತ ಹಿಂದಿಯಲ್ಲಿ ಮೂರು ಪಟ್ಟು ಹೆಚ್ಚು ಕಲೆಕ್ಷನ್

‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನದಿಂದಲೂ ಅಬ್ಬರದ ಗಳಿಕೆ ಮಾಡುತ್ತಾ ಬಂದಿದೆ. ಈ ಚಿತ್ರ ವೀಕೆಂಡ್​ನಲ್ಲಿ ಅಭೂತಪೂರ್ವ ಕಲೆಕ್ಷನ್ ಮಾಡಿತು. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಸೋಮವಾರ ಬಾಕ್ಸ್ ಆಫೀಸ್​ನಲ್ಲಿ ‘ಪುಷ್ಪ 2’ ಪವಾಡ; ತೆಲುಗಿಗಿಂತ ಹಿಂದಿಯಲ್ಲಿ ಮೂರು ಪಟ್ಟು ಹೆಚ್ಚು ಕಲೆಕ್ಷನ್
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Dec 10, 2024 | 10:52 AM

Share

‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರವನ್ನು ನೋಡಿದವರು ಕೆಲವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಚಿತ್ರ ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಪಡೆದಿದೆ. ಈ ಸಿನಿಮಾದ ಗಳಿಕೆ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ಸೋಮವಾರದ ಗಳಿಕೆ ವಿಚಾರದಲ್ಲಿ ಪಾಸ್ ಆಗಿದೆ. ಈ ಸಿನಿಮಾದ ಹಿಂದಿ ಕಲೆಕ್ಷನ್ ಲೆಕ್ಕ ಅನೇಕರಿಗೆ ಅಚ್ಚರಿ ಮೂಡಿಸಿದೆ.

‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನದಿಂದಲೂ ಅಬ್ಬರದ ಗಳಿಕೆ ಮಾಡುತ್ತಾ ಬಂದಿದೆ. ಈ ಚಿತ್ರ ವೀಕೆಂಡ್​ನಲ್ಲಿ ಅಭೂತಪೂರ್ವ ಕಲೆಕ್ಷನ್ ಮಾಡಿತು. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಸೋಮವಾರ (ಡಿಸೆಂಬರ್ 9) ಈ ಸಿನಿಮಾ ಭಾರತದಲ್ಲಿ ಒಟ್ಟೂ 46 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ವರ್ಷನ್​ನಿಂದ 14 ಕೋಟಿ ರೂಪಾಯಿ ಗಳಿಕೆ ಆಗಿದೆ. ಕನ್ನಡ ಹಾಗೂ ಮಲಯಾಳಂ ಸೇರಿ 1 ಕೋಟಿ ರೂಪಾಯಿ ಆಗಿದೆ. ತಮಿಳು ವರ್ಷನ್ 3 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ವರ್ಷನ್​ನಿಂದ ಒಂದೇ 46 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆ ಅನೇಕರಿಗೆ ಅಚ್ಚರಿ ತಂದಿದೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬರೋ ವ್ಯಕ್ತಿ ಯಾರು? ರಿವೀಲ್ ಆಯ್ತು ಹೀರೋ ಹೆಸರು

‘ಪುಷ್ಪ 2’ ಸಿನಿಮಾದ ಒಟ್ಟಾರೆ ಗಳಿಕೆ 593 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಲ್ಲಿ ತೆಲುಗು ವರ್ಷನ್​ನಿಂದ 211 ಕೋಟಿ ರೂಪಾಯಿ, ಹಿಂದಿ ವರ್ಷನ್​ನಿಂದ 331 ಕೋಟಿ ರೂಪಾಯಿ, ತಮಿಳಿನಿಂದ 34 ಕೋಟಿ ರೂಪಾಯಿ, ಮಲಯಾಳಂನಿಂದ 11 ಕೋಟಿ ರೂಪಾಯಿ, ಕನ್ನಡದಿಂದ 4 ಕೋಟಿ ರೂಪಾಯಿ ಗಳಿಕೆ ಆಗಿದೆ.

ಭಾನುವಾರ (ಡಿಸೆಂಬರ್ 8) ಲೆಕ್ಕಾಚಾರದಲ್ಲೂ ‘ಪುಷ್ಪ 2’ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಹಿಂದಿ ವರ್ಷನ್​ನಿಂದ ಭಾನುವಾರ 85 ಕೋಟಿ ರೂಪಾಯಿ ಹರಿದು ಬಂದಿದೆ. ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಭಾನುವಾರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ. ಡಬ್ ಆಗಿ ತೆರೆಕಂಡು ಈ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ ಎಂದರೆ ನಿಜಕ್ಕೂ ಅದು ದಾಖಲೆಯೇ ಸರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More