AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬರೋ ವ್ಯಕ್ತಿ ಯಾರು? ರಿವೀಲ್ ಆಯ್ತು ಹೀರೋ ಹೆಸರು

‘ಪುಷ್ಪ 2’ ಕ್ಲೈಮ್ಯಾಕ್ಸ್ ಸಾಕಷ್ಟು ಚರ್ಚೆ ಆಗಿದೆ. ಕ್ಲೈಮ್ಯಾಕ್ಸ್ ವೇಳೆ ಓರ್ವ ವ್ಯಕ್ತಿಯ ಆಗಮನ ಆಗುತ್ತದೆ. ಅದು ಯಾರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಈ ವ್ಯಕ್ತಿ ವಿಜಯ್ ದೇವರಕೊಂಡ ಎಂದು ಹೇಳುತ್ತಿದ್ದಾರೆ. ಆದರೆ, ಅದು ನಿಜ ಅಲ್ಲ ಎನ್ನಲಾಗುತ್ತಿದೆ.

‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬರೋ ವ್ಯಕ್ತಿ ಯಾರು? ರಿವೀಲ್ ಆಯ್ತು ಹೀರೋ ಹೆಸರು
ಪುಷ್ಪ 2
ರಾಜೇಶ್ ದುಗ್ಗುಮನೆ
|

Updated on:Dec 09, 2024 | 2:55 PM

Share

‘ಪುಷ್ಪ 2’ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಈ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳೂ ತೆರೆಮೆಲೆ ಗಮನ ಸೆಳೆದಿವೆ. ‘ಪುಷ್ಪ 2’ ಕ್ಲೈಮ್ಯಾಕ್ಸ್​ನಲ್ಲಿ ಓರ್ವ ಪಾತ್ರಧಾರಿಯ ಆಗಮನ ಆಗುತ್ತದೆ. ಅನೇಕರು ಈ ಪಾತ್ರವನ್ನು ವಿಜಯ್ ದೇವರಕೊಂಡು ಎಂದು ಹೇಳುತ್ತಿದ್ದಾರೆ. ಈಗ ಈ ಪಾತ್ರ ಯಾವುದು ಎಂಬ ವಿಚಾರ ರಿವೀಲ್ ಆಗಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ. (Spoilor Alert: ಈ ಪಾತ್ರದ ಬಗ್ಗೆ ಹೇಳಬೇಕಾದರೆ ಕೆಲವು ವಿಚಾರಗಳನ್ನು ಹೇಳಲೇಬೇಕಿದೆ. ಹೀಗಾಗಿ, ನೀವಿನ್ನೂ ಸಿನಿಮಾ ನೋಡದೇ ಇದ್ದರೆ ಚಿತ್ರ ವೀಕ್ಷಿಸಿದ ಬಳಿಕ ಸ್ಟೋರಿ ಓದಿ. )

‘ಪುಷ್ಪ 2’ ಕ್ಲೈಮ್ಯಾಕ್ಸ್ ಸಾಕಷ್ಟು ಚರ್ಚೆ ಆಗಿದೆ. ಕ್ಲೈಮ್ಯಾಕ್ಸ್ ವೇಳೆ ಓರ್ವ ವ್ಯಕ್ತಿಯ ಆಗಮನ ಆಗುತ್ತದೆ. ಅದು ಯಾರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ‘ಪುಷ್ಪ 3’ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ ಎಂಬ ಮಾತಿದೆ. ಈ ಕಾರಣಕ್ಕೆ ಅನೇಕರು ಇದು ವಿಜಯ್ ದೇವರಕೊಂಡ ಎಂದು ಹೇಳುತ್ತಿದ್ದಾರೆ. ಆದರೆ, ಅದು ನಿಜ ಅಲ್ಲ ಎನ್ನಲಾಗುತ್ತಿದೆ. ಆ ವ್ಯಕ್ತಿ ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಪುಷ್ಪರಾಜ್ ಹಾಗೂ ಶ್ರೀವಲ್ಲಿ ಕುಟುಂಬ ಸಂತೋಷದಿಂದ ಕಾಲ ಕಳೆಯುತ್ತಾ ಇರುತ್ತದೆ. ಶ್ರೀವಲ್ಲಿ ಪ್ರೆಗ್ನೆಂಟ್ ಕೂಡ ಆಗಿದ್ದಾಳೆ. ಕ್ಲೈಮ್ಯಾಕ್ಸ್​ನಲ್ಲಿ ಇವರು ಕುಟುಂಬದ ಮದುವೆಯಲ್ಲಿ ಇರುವಾಗ ಬಾಂಬ್ ಸ್ಫೋಟ ಆಗುತ್ತದೆ. ದೂರದಲ್ಲಿ ನಿಂತು ಇದನ್ನು ಮಾಡಿದ್ದು ಓರ್ವ ವ್ಯಕ್ತಿ. ಆ ವ್ಯಕ್ತಿಯ ಮುಖವನ್ನು ತೋರಿಸಿಲ್ಲ. ಕೆಲವು ವರದಿಗಳ ಪ್ರಕಾರ ಇದು ಬೇರೆ ಯಾರೂ ಅಲ್ಲ, ಫಹಾದ್ ಫಾಸಿಲ್ ಅವರೇ ಎಂದು ಹೇಳಲಾಗಿದೆ.

ಫಹಾದ್ ಫಾಸಿಲ್ ಅವರು ಎಸ್​ಪಿ ಬನ್ವರ್ ಸಿಂಗ್ ಶೇಖಾವತ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್​​ನಿಂದ ಸಾಕಷ್ಟು ಹಿನ್ನಡೆ ಅನುಭವಿಸುವ ಈತ ತನ್ನನ್ನು ತಾನೇ ಸುಟ್ಟುಕೊಳ್ಳುತ್ತಾನೆ. ಆದರೆ, ಈ ಘಟನೆಯಲ್ಲಿ ಆತ ಸತ್ತಿರೋದಿಲ್ಲ ಎನ್ನಲಾಗುತ್ತಿದೆ. ಕೊನೆಯಲ್ಲಿ ಪುಷ್ಪರಾಜ್ ಕುಟುಂಬದ ಖುಷಿಯನ್ನು ಹಾಳು ಮಾಡೋದು ಇದೇ ವ್ಯಕ್ತಿ ಎನ್ನಲಾಗಿದೆ.

ಇದನ್ನೂ ಓದಿ: ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್

ಕೊನೆಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಕೈ ತೆಳ್ಳಗಿದೆ. ಕೈಮೇಲೆ ಸುಟ್ಟಗಾಯಗಳಿವೆ. ಈ ಎಲ್ಲಾ ಕಾರಣದಿಂದ ಶೇಖಾವತ್ ಬದುಕಿ ಬಂದು ಪುಷ್ಪರಾಜ್ ಕುಟುಂಬವನ್ನು ನಾಶ ಮಾಡಲು ಪ್ರಯತ್ನಿಸುತ್ತಾನೆ ಎನ್ನಲಾಗಿದೆ. ಈ ಮೂಲಕ ಹಗೆ ತೀರಿಸಿಕೊಳ್ಳುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:41 pm, Mon, 9 December 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More