ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ

‘ಮೈಸಾ’ ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣ ಮುವಥಾಯ್ ಸೇರಿದಂತೆ ಕೆಲವು ಸರ ಕಲೆಗಳನ್ನು ಕಲಿತಿದ್ದರು. ಹಲವು ಸ್ಟಂಟ್​​ಗಳನ್ನು ಡ್ಯೂಪ್ ಇಲ್ಲದೆ ನಿರ್ವಹಿಸಿದ್ದಾರೆ. ಇದೆಲ್ಲದರ ಬಳಿಕ ಇದೀಗ ನಟಿ ರಶ್ಮಿಕಾ ಸಂಗೀತ ಕಲಿಯಲು ಮುಂದಾಗಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ.

ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ
Rashmika Mandanna Mss

Updated on: Nov 23, 2026 | 7:51 AM

ಮುಖ್ಯಾಂಶಗಳು

  • ಸಂಗೀತ ಕಲಿಯಲು ಮುಂದಾದ ರಶ್ಮಿಕಾ ಮಂದಣ್ಣ
  • ಸಿನಿಮಾಕ್ಕಾಗಿ ಈ ಪ್ರಯತ್ನ ಮಾಡುತ್ತಿದ್ದಾರೆ ರಶ್ಮಿಕಾ
  • ಎಂಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ

ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ ಮುಂಬರುವ ಸಿನಿಮಾ ‘ಮೈಸಾ’ದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ‘ಮೈಸಾ’ ಸಿನಿಮಾಕ್ಕಾಗಿ ಭರ್ಜರಿ ಆಕ್ಷನ್ ದೃಶ್ಯಗಳನ್ನು ರಶ್ಮಿಕಾ ಮಾಡಿದ್ದಾರೆ. ಮುವಥಾಯ್ ಸೇರಿದಂತೆ ಕೆಲವು ಸರ ಕಲೆಗಳನ್ನು ಸಹ ‘ಮೈಸಾ’ ಸಿನಿಮಾಕ್ಕಾಗಿ ರಶ್ಮಿಕಾ ಕಲಿತಿದ್ದರು. ಹಲವು ಸ್ಟಂಟ್​​ಗಳನ್ನು ಡ್ಯೂಪ್ ಇಲ್ಲದೆ ನಿರ್ವಹಿಸಿದ್ದಾರೆ. ಇದೆಲ್ಲದರ ಬಳಿಕ ಇದೀಗ ನಟಿ ರಶ್ಮಿಕಾ ಸಂಗೀತ ಕಲಿಯಲು ಮುಂದಾಗಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ.

‘ಮೈಸಾ’ ಸಿನಿಮಾ ಇದೇ ನವೆಂಬರ್ 27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ಹಾಗಾಗಿ ರಶ್ಮಿಕಾ ಅವರಿಗೆ ಸಾಕಷ್ಟು ಕಾಲಾವಕಾಶ ದೊರೆತಿದ್ದು, ಈ ಸಮಯದಲ್ಲಿ ಅವರು ಕರ್ನಾಟಕ ಸಂಗೀತ ಕಲಿಯಲು ಮುಂದಾಗಿದ್ದಾರೆ. ಆದರೆ ರಶ್ಮಿಕಾರ ಈ ಹೊಸ ಪ್ರಯತ್ನಕ್ಕೆ ಸಂಗೀತದ ಮೇಲಿರುವ ಪ್ರೀತಿ ಮಾತ್ರ ಕಾರಣವಲ್ಲ. ರಶ್ಮಿಕಾ ಮಂದಣ್ಣ ಅವರು ಲಿಜೆಂಡರಿ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ. ಆ ಪಾತ್ರದ ತಯಾರಿಗಾಗಿ ರಶ್ಮಿಕಾ ಅವರು ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ.

Loading...

ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಹಾಗೂ ಭಾರತ ರತ್ನ ಪುರಸ್ಕೃತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಚರಿತ್ರೆಯಲ್ಲಿ ನಟಿಸಲು ರಶ್ಮಿಕಾ ಉತ್ಸುಕರಾಗಿದ್ದಾರೆ. ಈ ಪಾತ್ರವನ್ನು ನಿರ್ವಹಿಸಲು ಎಂ.ಎಸ್. ಸುಬ್ಬುಲಕ್ಷ್ಮಿ ಅವರೇ ತಮ್ಮನ್ನು ‘ಆಯ್ಕೆ’ ಮಾಡಿದ್ದಾರೆ ಎಂದು ರಶ್ಮಿಕಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಇದು ತುಂಬಾ ವಿಶೇಷವಾದ ಸಿನಿಮಾ. ಈ ಚಿತ್ರದ ಬಗ್ಗೆ ಎಷ್ಟು ಮಾತನಾಡಬೇಕು ಎನ್ನುವುದೇ ಗೊತ್ತಾಗದೆ ನನಗೆ ಆತಂಕವಾಗುತ್ತಿದೆ. ಇದನ್ನು ನಮ್ಮ ಕೈಲಾದಷ್ಟು ಚೆನ್ನಾಗಿ ಕಾಪಾಡಿಕೊಳ್ಳಬೇಕಿದೆ. ನಾನು ಕರ್ನಾಟಕ ಸಂಗೀತ ಕಲಿಯಲೇಬೇಕು, ಸುಮ್ಮನೆ ನಟಿಸಲು ಸಾಧ್ಯವಿಲ್ಲ. ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ ಭಾವನೆಗಳನ್ನು ತಲುಪಿಸಬಹುದು. ಆದರೆ ಹಾಡುವುದು ಮಾತ್ರ ನನ್ನ ಜೀವನದಲ್ಲಿ ನಾನು ಎಂದಿಗೂ ಮಾಡದ ಸಂಗತಿ. ಮನೆಯಲ್ಲಿಯೂ ನಾನು ಗುನುಗುವುದಿಲ್ಲ. ಈಗ ಈ ಚಿತ್ರದ ಮೂಲಕ ನನಗೆ ಗುನುಗಬೇಕು, ಹಾಡಬೇಕು ಅನಿಸುತ್ತಿದೆ. ನನ್ನಿಂದ ಎಂದಿಗೂ ಅದು ಸಾಧ್ಯವಿಲ್ಲವಾದರೂ ಎಂ.ಎಸ್. ಅಮ್ಮ ಅವರ ಪಾತ್ರ ಮಾಡುವ ಅವಕಾಶ ಸಿಕ್ಕಿದೆ’ ಎಂದರು.

ಇದನ್ನೂ ಓದಿ:ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು

ಮುಂದುವರಿದು ಮಾತನಾಡಿದ ಅವರು, ‘ಮೊದಲು ಈ ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ, ಇದು ನಾನು ಮುಟ್ಟಲು ಸಾಧ್ಯವಾಗದಷ್ಟು ಶಕ್ತಿಶಾಲಿಯಾದ ಪಾತ್ರ ಎಂದು ಅವರಿಗೆ ಹೇಳಿದ್ದೆ. ಅವರ ಬದುಕು ತುಂಬಾ ಸುಂದರವಾಗಿದ್ದು, ಮುಂದಿನ ಪೀಳಿಗೆಗೆ ಅದರ ಬಗ್ಗೆ ತಿಳಿಯುವುದು ಮುಖ್ಯ. ನನ್ನೊಳಗಿನ ಮಹತ್ವಾಕಾಂಕ್ಷೆ ‘ನೀನು ಇದನ್ನು ಮಾಡಲೇಬೇಕು’ ಎಂದಿತು. ಈಗ ನಾನು ಹಾಡುಗಾರಿಕೆಯ ಈ ಸಂಪೂರ್ಣ ಹೊಸ ಜಗತ್ತಿಗೆ ಕಾಲಿಡಬೇಕು. ನನಗೆ ತುಂಬಾ ಕುತೂಹಲವಿದೆ. ಏನಾಗುತ್ತದೋ ಗೊತ್ತಿಲ್ಲ. ಇದು ಅದ್ಭುತವಾಗಿ ಮೂಡಿಬರಬಹುದು ಅಥವಾ ಸರಿಹೋಗದಿರಲೂಬಹುದು. ಆದರೆ ನನ್ನ ಸಂಪೂರ್ಣ ಶಕ್ತಿಯನ್ನು ಇದಕ್ಕೆ ಹಾಕುತ್ತೇನೆ’ ಎಂದು ತಿಳಿಸಿದರು.

ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್‌ಡಮ್’ ಮತ್ತು ನಾನಿ ಅಭಿನಯದ ‘ಜರ್ಸಿ’ ಚಿತ್ರಗಳನ್ನು ನೀಡಿರುವ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us