
ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ಬಳಿಕ ತೆಲುಗಿ ಹೋದವರು ಮತ್ತೆ ಕನ್ನಡದತ್ತ ಮರಳಲೇ ಇತ್ತು. ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದರು. ಹಲವು ಸ್ಟಾರ್ ನಟರುಗಳೊಟ್ಟಿಗೆ ನಾಯಕಿಯಾಗಿ ನಟಿಸಿದರು. ತೆಲುಗು ರಾಜ್ಯದಲ್ಲೇ ನೆಲೆಗೊಳ್ಳಬೇಕು ಎಂಬ ಉಮೇದಿನಿಂದ ತಾವು ಹೈದರಾಬಾದ್ನವರು ಎಂದು ಸಹ ಹೇಳಿಕೊಂಡರು. ಆ ಬಳಿಕ ಬಾಲಿವುಡ್ಗೆ ಪದಾರ್ಪಣೆ ಮಾಡಿ ಅಲ್ಲಿಯೂ ಯಶಸ್ಸಿನ ಮೇಲೆ ಯಶಸ್ಸು ಗಳಿಸಿದರು. ರಶ್ಮಿಕಾರಿಗೆ ದಕ್ಷಿಣದಲ್ಲಿ ಇರುವ ಜನಪ್ರಿಯತೆ ಪರಿಗಣಿಸಿಯೇ ಕೆಲ ಹಿಂದಿ ಸಿನಿಮಾಗಳಲ್ಲಿ ಅವಕಾಶ ನೀಡಲಾಯ್ತು. ಆದರೆ ಅವರ ಮ್ಯಾಜಿಕ್ ದಕ್ಷಿಣದಲ್ಲಿ ವಿಶೇಷವಾಗಿ ರಶ್ಮಿಕಾರ ಅಪಾರ ಪ್ರೀತಿಯ ತೆಲುಗು ರಾಜ್ಯಗಳಲ್ಲಿಯೇ ನಡೆಯುತ್ತಿಲ್ಲ.
ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಹಿಂದಿ ಸಿನಿಮಾ ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ಇದ್ದಾರೆಂಬ ಕಾರಣಕ್ಕೆ ತೆಲುಗು ರಾಜ್ಯಗಳಲ್ಲಿಯೂ ಸಿನಿಮಾ ಅನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಫಲಿತಾಂಶ ಮಾತ್ರ ಸೊನ್ನೆ. ‘ಥಮ’ ಸಿನಿಮಾಕ್ಕೆ ತೆಲುಗು ರಾಜ್ಯಗಳಲ್ಲಿ ಜನರೇ ಇಲ್ಲ. ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ರಶ್ಮಿಕಾರ ತೆಲುಗು ಅಭಿಮಾನಿಗಳು ಸಹ ಚಿತ್ರಮಂದಿರದತ್ತ ಸುಳಿದಿಲ್ಲ ಎನ್ನುತ್ತಿವೆ ವರದಿಗಳು.
ಇದೇ ಮಂಗಳವಾರ ಬಿಡುಗಡೆ ಆದ ಈ ಸಿನಿಮಾ, ತೆಲುಗು ರಾಜ್ಯಗಳಲ್ಲಿ ಎರಡು ದಿನಗಳಲ್ಲಿ ಕೇವಲ 35 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಹಲವಾರು ಚಿತ್ರಮಂದಿರಗಳಲ್ಲಿ ಕೇವಲ ಒಂದು ದಿನದ ಶೋ ಬಳಿಕ ಸಿನಿಮಾ ಅನ್ನು ತೆಗೆದು ಹಾಕಲಾಗಿದೆ. ರಶ್ಮಿಕಾ ಮೇಲೆ ನಂಬಿಕೆ ಇಟ್ಟು ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿದವರಿಗೆ ಭಾರಿ ದೋಖಾ ಆಗಿದೆ.
ಇದನ್ನೂ ಓದಿ:‘ಥಮ’ ಸಿನಿಮಾ ಶೂಟಿಂಗ್ ಚಿತ್ರಗಳ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಸಾಮಾನ್ಯವಾಗಿ ಬಾಲಿವುಡ್ನ ಸಿನಿಮಾಗಳು ದಕ್ಷಿಣದಲ್ಲಿ ಒಳ್ಳೆಯ ಪ್ರದರ್ಶನ ಕಾಣುವುದಿಲ್ಲ. ಇದೇ ಕಾರಣಕ್ಕೆ ಬಾಲಿವುಡ್ನವರು ದಕ್ಷಿಣದ ಸ್ಟಾರ್ಗಳನ್ನೇ ಹಾಕಿಕೊಂಡು ಹಿಂದಿ ಸಿನಿಮಾ ಮಾಡಿ ಅವನ್ನು ದಕ್ಷಿಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಅದೂ ಸಹ ವರ್ಕ್ ಆಗುತ್ತಿಲ್ಲ. ಇದೇ ಸೂತ್ರದಡಿ ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅನ್ನು ಒಟ್ಟಾಗಿ ಹಾಕಿಕೊಂಡು ‘ವಾರ್ 2’ ಸಿನಿಮಾ ಮಾಡಿದರು. ಜೂ ಎನ್ಟಿಆರ್ ಅಂಥಹಾ ದೊಡ್ಡ ಸ್ಟಾರ್ ಇದ್ದಾಗಿಯೂ ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲ. ಈಗ ರಶ್ಮಿಕಾರ ಸಿನಿಮಾ ಸಹ ಹಿಟ್ ಆಗಿಲ್ಲ.
ಆದರೆ ಇದೇ ‘ಥಮ’ ಸಿನಿಮಾ ಬಾಲಿವುಡ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ‘ಥಮ’ ಸಿನಿಮಾ ಎರಡು ದಿನಗಳಿಗೆ 42 ಕೋಟಿಗೂ ಹೆಚ್ಚಿನ ಮೊತ್ತ ಗಳಿಸಿದೆ. ಇದು ಸಾಧಾರಣ ಮೊತ್ತವೇನಲ್ಲ. ಮೊದಲ ದಿನ ಈ ಸಿನಿಮಾ 24 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಎರಡನೇ ದಿನ 18 ಕೋಟಿ ಗಳಿಸಿದೆ. ‘ಥಮ’ ಸಿನಿಮಾ, ಮ್ಯಾಡ್ಲಾಕ್ ನಿರ್ಮಾಣ ಸಂಸ್ಥೆಯ ಸಿನಿಮಾ ಆಗಿದ್ದು, ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ಧೀನ್ ಸಿದ್ಧಿಖಿ ಸಹ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಿನಿಮಾನಲ್ಲಿ ವರುಣ್ ಧವನ್ ಸೇರಿದಂತೆ ಇನ್ನೂ ಕೆಲವರ ಕ್ಯಾಮಿಯೋ ಸಹ ಇವೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ