ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರಶ್ಮಿಕಾ, ಯಾರ ಜೊತೆಗೆ?

|

Updated on: Apr 04, 2025 | 4:39 PM

Rashmika Mandanna: ನಟಿ ರಶ್ಮಿಕಾ ಮಂದಣ್ಣ ನಾಳೆ (ಏಪ್ರಿಲ್ 05) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ಹುಟ್ಟುಹಬ್ಬ ಆಚರಣೆಗಾಗಿ ಚಿತ್ರೀಕರಣದಿಂದ ಬಿಡುವು ಪಡೆದಿದ್ದು, ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಆದರೆ ಯಾರೊಂದಿಗೆ?

ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರಶ್ಮಿಕಾ, ಯಾರ ಜೊತೆಗೆ?
Rashmika Mandanna
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹುಟ್ಟುಹಬ್ಬ (Birthday) ನಾಳೆ (ಏಪ್ರಿಲ್ 05). ಒಂದರ ಮೇಲೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಬಹಳ ಬ್ಯುಸಿಯಾಗಿದ್ದಾರೆ. ಕಾಲಿನ ಮೂಳೆ ಮುರಿದುಕೊಂಡಿದ್ದರು, ಜ್ವರದಿಂದ ಬಳಲಿದ್ದರೂ ಕಳೆದ ಕೆಲ ತಿಂಗಳಿನಿಂದ ಸತತವಾಗಿ ಚಿತ್ರೀಕರಣದಲ್ಲಿ (Shooting) ತೊಡಗಿಕೊಂಡಿದ್ದಾರೆ ನಟಿ. ಆದರೆ ಇದೀಗ ತಮ್ಮ ಹುಟ್ಟುಹಬ್ಬಕ್ಕೆ ಚಿತ್ರೀಕರಣಗಳಿಂದ ಬಿಡುವು ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ‘ಗೆಳೆಯ’ರೊಡನೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರಂತೆ.

ರಶ್ಮಿಕಾ ಮಂದಣ್ಣ ಗಲ್ಫ್ ರಾಷ್ಟ್ರಗಳಲ್ಲಿ ಒಂದಾದ ಒಮನ್​ಗೆ ಹಾರಿದ್ದು ಅಲ್ಲಿನ ಸುಂದರ ಮರಳುಗಾಡಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರಂತೆ. ಅದೂ ಅವರೊಬ್ಬರೇ ಅಲ್ಲ ಅವರೊಟ್ಟಿಗೆ ಅವರ ಗೆಳೆಯರೂ ಇರಲಿದ್ದಾರಂತೆ. ಮೂಲಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರುಗಳು ಈಗಾಗಲೇ ಒಮನ್​ಗೆ ಹಾರಿದ್ದು ಅಲ್ಲಿ ಒಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ.

ಈ ಹಿಂದೆಯೂ ಸಹ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ವಿದೇಶಕ್ಕೆ ಹಾರಿ ಅಲ್ಲಿ ಪಾರ್ಟಿ ಮಾಡಿದ್ದರು. ಪ್ರವಾಸಿ ತಾಣಗಳಲ್ಲಿ ಕೈ-ಕೈ ಹಿಡಿದು ಸುತ್ತಾಡಿದ್ದರು. ಈಗ ಒಮನ್​ಗೆ ಹೋಗಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಾತ್ರವೇ ಅಲ್ಲದೆ ಅವರ ಕೆಲವು ಕಾಮನ್ ಗೆಳೆಯರು ಸಹ ಒಮನ್​ಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅಸಲಿ ವಯಸ್ಸಿಷ್ಟು? ನಟಿ ಇಷ್ಟು ಸಣ್ಣವರಾ ?

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿದ್ದು ಇಬ್ಬರೂ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡುತ್ತಿವೆ. ರಶ್ಮಿಕಾ ಹಾಗೂ ವಿಜಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆದರೆ ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ರಶ್ಮಿಕಾರನ್ನು ಈ ಬಗ್ಗೆ ಪ್ರಶ್ನೆ ಮಾಡಿದಾಗ, ‘ನಿಮಗೆ ಗೊತ್ತಿಲ್ಲದೇ ಇರುವುದು ಏನಿದೆ’ ಎಂದು ಪರೋಕ್ಷವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ಈಗ ಬಹಳ ಬ್ಯುಸಿ ನಟಿ. ರಶ್ಮಿಕಾ ನಟಿಸಿರುವ ‘ಸಿಖಂಧರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅದರ ಜೊತೆಗೆ ತೆಲುಗಿನಲ್ಲಿ ‘ಗರ್ಲ್​ಫ್ರೆಂಡ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ 3’ ಸಿನಿಮಾದಲ್ಲಿಯೂ ರಶ್ಮಿಕಾ ಇರಲಿದ್ದಾರೆ ಎನ್ನಲಾಗುತ್ತಿದೆ. ಧನುಶ್ ಜೊತೆಗೆ ‘ಕುಬೇರ’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ‘ತಮ’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರೈನ್​ಬೋ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ