
ರಶ್ಮಿಕಾ ಮಂದಣ್ಣ (Rashmika Mandanna) ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ (Bollywood) ಸಾಕಷ್ಟು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ರಶ್ಮಿಕಾ ಕಾಲ್ಶೀಟ್ ಪಡೆಯೋಕೆ ಸ್ಟಾರ್ ನಿರ್ಮಾಪಕರು ಕಾದು ಕೂತಿದ್ದಾರೆ. ಈ ಮಧ್ಯೆ ರಶ್ಮಿಕಾ ಹಲವು ಸ್ಕ್ರಿಪ್ಟ್ಗಳನ್ನು ಕೇಳುತ್ತಿದ್ದಾರೆ. ತುಂಬಾನೇ ಲೆಕ್ಕಾಚಾರ ಹಾಕಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ಹೊಸಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ದಳಪತಿ ವಿಜಯ್ (Thalapathy Vijay) ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನುವ ವಿಚಾರ ಇತ್ತೀಚೆಗೆ ಹರಿದಾಡಿತ್ತು. ಅದು ನಿಜವಾಗಿದೆ. ರಶ್ಮಿಕಾ ಬರ್ತ್ಡೇ ದಿನ ಈ ಬಗ್ಗೆ ಘೋಷಣೆ ಆಗಿದೆ.
ವಿಜಯ್ ಸದ್ಯ ‘ಬೀಸ್ಟ್’ ಸಿನಿಮಾದ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ಈ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ. ಹೀಗಿರುವಾಗಲೇ ಅವರ 66ನೇ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಬಂದಿದೆ. ಚಿತ್ರಕ್ಕೆ ರಶ್ಮಿಕಾ ನಾಯಕಿ ಆಗಿ ಆಯ್ಕೆ ಆಗಿರುವ ವಿಚಾರ ಅಧಿಕೃತವಾಗಿದೆ.
‘ದಳಪತಿ 66’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ರಶ್ಮಿಕಾಗೆ ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ರಶ್ಮಿಕಾಗೆ ಮಣೆ ಹಾಕಲಾಗಿದೆ.
ರಶ್ಮಿಕಾ ಅವರು ಈ ಮೊದಲಿನಿಂದಲೂ ವಿಜಯ್ ಅಭಿಮಾನಿಗಳಿಗೆ ಹತ್ತಿರ ಆಗೋಕೆ ಸಾಕಷ್ಟು ಪ್ರಯತ್ನಿಸಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ತಾವು ವಿಜಯ್ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಕೊನೆಗೂ ಅವರ ಆಸೆ ಈಡೇರುತ್ತಿದೆ.
ಹಿಂದಿಯ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್ನಲ್ಲೂ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿಲ್ಲ. ಇನ್ನು, ದುಲ್ಖರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಕಾಶ್ಮೀರಿ ಹುಡುಗಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹೊಸ ಗೆಟಪ್ನಲ್ಲಿ ರಶ್ಮಿಕಾ ಮಂದಣ್ಣ; ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಿರಿಕ್ ಬೆಡಗಿ
ಹಿಜಾಬ್ ಧರಿಸಿ ಬಂದ ರಶ್ಮಿಕಾ ಮಂದಣ್ಣ; ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕೊಡಗಿನ ಬೆಡಗಿ