ರಶ್ಮಿಕಾ To ಸಮಂತಾ: ಪ್ರತಿ ಇನ್ಸ್​ಟಾಗ್ರಾಮ್ ಪೋಸ್ಟ್​ಗೆ ಈ ಸೆಲೆಬ್ರಿಟಿಗಳು ಪಡೆಯೋ ಹಣ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Dec 19, 2023 | 8:43 AM

ಹಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಈ ರೀತಿ ಪ್ರಚಾರ ಮಾಡುವ ಸೆಲೆಬ್ರಿಟಿಗಳು ಪ್ರತಿ ಪೋಸ್ಟ್​ಗೆ ಪಡೆಯೋ ಸಂಭಾವನೆ ಎಷ್ಟು ಕೋಟಿ ರೂಪಾಯಿ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.  

ರಶ್ಮಿಕಾ To ಸಮಂತಾ: ಪ್ರತಿ ಇನ್ಸ್​ಟಾಗ್ರಾಮ್ ಪೋಸ್ಟ್​ಗೆ ಈ ಸೆಲೆಬ್ರಿಟಿಗಳು ಪಡೆಯೋ ಹಣ ಎಷ್ಟು?
ರಶ್ಮಿಕಾ To ಸಮಂತಾ: ಪ್ರತಿ ಇನ್ಸ್​ಟಾಗ್ರಾಮ್ ಪೋಸ್ಟ್​ಗೆ ಈ ಸೆಲೆಬ್ರಿಟಿಗಳು ಪಡೆಯೋ ಹಣ ಎಷ್ಟು?
Follow us on

ಬಾಲಿವುಡ್ ರೀತಿಯೇ ದಕ್ಷಿಣ ಭಾರತದ ಚಿತ್ರರಂಗ ಕೂಡ ಬೆಳೆದು ನಿಂತಿದೆ. ದಕ್ಷಿಣ ಭಾರತದಲ್ಲಿ ಯಶ್, ರಿಷಬ್ ಶೆಟ್ಟಿ, ಅಲ್ಲು ಅರ್ಜುನ್, ಜೂನಿಯರ್ ಎನ್​ಟಿಆರ್ (Jr NTR) ಸೇರಿ ಹಲವು ಪ್ಯಾನ್ ಇಂಡಿಯಾ ಸ್ಟಾರ್​ಗಳಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು ಹಲವು ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಈ ರೀತಿ ಪ್ರಚಾರ ಮಾಡುವ ಸೆಲೆಬ್ರಿಟಿಗಳು ಪ್ರತಿ ಪೋಸ್ಟ್​ಗೆ ಪಡೆಯೋ ಸಂಭಾವನೆ ಎಷ್ಟು ಕೋಟಿ ರೂಪಾಯಿ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಅಲ್ಲು ಅರ್ಜುನ್

‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಅಲ್ಲು ಅರ್ಜುನ್ ಬ್ಯುಸಿ ಇದ್ದಾರೆ. ಟಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ. ಅವರು ಇನ್​ಸ್ಟಾಗ್ರಾಮ್​ನಲ್ಲಿ ಪ್ರತಿ ಪೋಸ್ಟ್​​ಗೆ 5-7 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಜೊತೆ ಅವರು ಕೊಲಾಬರೇಷನ್ ಮಾಡಿಕೊಂಡಿದ್ದರು.

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರು ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ‘ಅನಿಮಲ್’ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. 4 ಕೋಟಿ ಜನರು ಅವರನ್ನು ಹಿಂಬಾಲಿಸುತ್ತಿದ್ದಾರೆ. ಪ್ರತಿ ಪೋಸ್ಟ್​ಗೆ 20-30 ಲಕ್ಷ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಅವರು ಹಲವು ಬ್ರ್ಯಾಂಡ್​ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರು ಟಾಲಿವುಡ್​ನ ಬೇಡಿಕೆಯ ಹೀರೋ. ಅವರು ಹಲವು ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಪ್ರತಿ ಪೋಸ್ಟ್​ಗೆ 1-2 ಕೋಟಿ ರೂಪಾಯಿ ಪಡೆಯುತ್ತಾರೆ. ಸದ್ಯ ಅವರು ‘ಖುಷಿ’ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ.

ಸಮಂತಾ

ಸಮಂತಾ ಅವರು ನಟನೆಯಿಂದ ಒಂದು ಬ್ರೇಕ್ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ಅವರು ಗಮನ ಹರಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 2.6 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಅವರು ಪ್ರತಿ ಪೋಸ್ಟ್​ಗೆ 15-25 ಲಕ್ಷ ರೂಪಾಯಿ ಪಡೆಯುತ್ತಾರೆ. ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ಹಲವು ಪೋಸ್ಟ್​​ಗಳು ಇನ್​​ಸ್ಟಾಗ್ರಾಮ್​ನಲ್ಲಿದ್ದವು. ಅದನ್ನು ಅವರು ಡಿಲೀಟ್ ಮಾಡಿದ್ದಾರೆ.

ಮಹೇಶ್ ಬಾಬು

ಮಹೇಶ್ ಬಾಬು ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್​ ಬೇಸ್ ಹೊಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಬ್ರ್ಯಾಂಡ್​ನ ಪ್ರಚಾರ ಮಾಡುತ್ತಾರೆ. ಇದಕ್ಕೆ ಅವರು ಪಡೆಯೋದು 1-2 ಕೋಟಿ ರೂಪಾಯಿ. ‘ಸರ್ಕಾರು ವಾರಿ ಪಾಟ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ.

ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಅವರು ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೂಲಕ ಮತ್ತೊಂದು ಸೋಲು ಕಂಡರು. ವೃತ್ತಿ ಜೀವನದಲ್ಲಿ ಅವರಿಗೆ ಸಾಲು ಸಾಲು ಸೋಲು ಉಂಟಾಗುತ್ತಿದೆ. ಆದರೆ, ಅವರ ಪ್ರತಿ ಪೋಸ್ಟ್​ಗೆ 30 ಲಕ್ಷ ರೂಪಾಯಿ ಪಡೆಯುತ್ತಾರೆ.

ಇದನ್ನೂ ಓದಿ: ‘ಈ ರೀತಿ ಬದುಕಿರೋಕಾಗಲ್ಲ, ಮನೆಗೆ ಕಳುಹಿಸಿ’; ಬಿಗ್ ಬಾಸ್ ಎದುರು ವಿನಯ್ ಹೊಸ ಬೇಡಿಕೆ

ಕಾಜಲ್ ಅಗರ್​ವಾಲ್

ಕಾಜಲ್ ಅಗರ್​ವಾಲ್ ಅವರು ಕುಟುಂಬದ ಜೊತೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 2.6 ಕೋಟಿ ಹಿಂಬಾಲಕರಿದ್ದಾರೆ. ಅವರು ಬ್ರ್ಯಾಂಡ್ ಪ್ರಚಾರಕ್ಕೆ ಪೋಸ್ಟ್ ಹಾಕಿದರೆ 50 ಲಕ್ಷ ರೂಪಾಯಿ ಪಡೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:42 am, Tue, 19 December 23