Rashmika Mandanna: ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್

Rakshith Shetty - Rashmika Mandanna Relationship: ರಶ್ಮಿಕಾ ಮಂದಣ್ಣ ತಮ್ಮ ಹಳೆಯ ಸಂಬಂಧವನ್ನು 'ಟಾಕ್ಸಿಕ್' ಎಂದು ಪರೋಕ್ಷವಾಗಿ ಹೇಳಿ, ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದ್ದಾರೆ. 'ಗರ್ಲ್​ಫ್ರೆಂಡ್' ಸಿನಿಮಾ ಈವೆಂಟ್‌ನಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದು, ತಮ್ಮ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಕ್ಷಿತ್ ಬ್ರೇಕಪ್ ಕುರಿತು ಪ್ರಬುದ್ಧವಾಗಿ ಮಾತನಾಡಿದ ಹಳೆಯ ವಿಡಿಯೋಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. 

Rashmika Mandanna: ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್
ರಕ್ಷಿತ್-ರಶ್ಮಿಕಾ
Updated By: Digi Tech Desk

Updated on: Nov 14, 2025 | 2:57 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ರಕ್ಷಿತ್ ಶೆಟ್ಟಿ (Rakshith Shetty) ಲವ್ ಮಾಡಿದ್ದರು ಎಂಬುದು ಹಳೆಯ ಕಥೆ. ಅದು ಮುಗಿದು ಹೋಗಿ ಹಲವು ವರ್ಷಗಳು ಕಳೆದಿವೆ. ಈ ಘಟನೆಯನ್ನು ಮರೆತು ರಕ್ಷಿತ್ ಮುಂದಕ್ಕೆ ಸಾಗಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಇನ್ನೂ ಅಲ್ಲಿಯೇ ಸಿಕ್ಕಿ ಬಿದ್ದಂತೆ ಇದೆ. ‘ಗರ್ಲ್​ಫ್ರೆಂಡ್’ ಸಿನಿಮಾದ ಈವೆಂಟ್ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಟಾಕ್ಸಿಕ್ ರಿಲೇಶನ್​ಶಿಪ್​ನಲ್ಲಿ ಇದ್ದೆ’ ಎಂಬ ಪರೋಕ್ಷ ಸ್ಟೇಟ್​ಮೆಂಟ್ ಅವರ ಕಡೆಯಿಂದ ಬಂದಿದೆ. ಇದನ್ನು ಸುಳ್ಳು ಎಂದು ಸಾಬೀತು ಮಾಡಲು ರಕ್ಷಿತ್ ಫ್ಯಾನ್ಸ್ ಸಾಕ್ಷಿ ಸಮೇತ ಬಂದಿದ್ದಾರೆ.

‘ಗರ್ಲ್​​ಫ್ರೆಂಡ್’ ಸಿನಿಮಾದಲ್ಲಿ ಟಾಕ್ಸಿಕ್ ಸಂಬಂಧದ ಬಗ್ಗೆ ಇದೆ. ಕಥಾ ನಾಯಕಿಯು ಹುಡಗನೊಬ್ಬನ ಪ್ರೀತಿಸುತ್ತಾಳೆ. ಆತನಿಗೆ ಪುರಷ ಅಹಂ ಹೆಚ್ಚಿರುತ್ತದೆ. ನಂತರ ಈ ಸಂಬಂಧ ವಿಷಕಾರಿಯಾಗಿ ಬದಲಾಗುತ್ತದೆ. ಆಗ ಪ್ರೊಫೆಸರ್ ಒಬ್ಬರು ಸಹಾಯಕ್ಕೆ ಬರುತ್ತಾರೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ರಶ್ಮಿಕಾ ಹಳೆಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.

‘ಈ ಸಿನಿಮಾದ ಕಥೆ ಕೇಳಿದಾಗ ಮೊದಲು ಈ ಚಿತ್ರವನ್ನು ಮಾಡಬೇಕು ಎಂದು ಎನಿಸಿತು. ಕಥಾ ನಾಯಕಿಯ ಜೀವನದಲ್ಲಿ ಏನೆಲ್ಲ ಜರುಗಿದೆಯೋ ಅದರಲ್ಲಿ ಕೆಲವು ಪರಿಸ್ಥಿತಿಗಳು ನನ್ನ ಜೀವನದಲ್ಲೂ ಸಂಭವಿಸಿದೆ. ಆಗ ನನ್ನ ಜೀವನದಲ್ಲಿ ಯಾರೂ ಇರಲಿಲ್ಲ. ಇದೆಲ್ಲ ನನ್ನದೇ ಮಿಸ್ಟೇಕ್ ಎಂದು ಎನಿಸಿತು’ ಎಂದು ರಶ್ಮಿಕಾ ಹೇಳಿದ್ದಾರೆ.

‘ಶೂಟ್ ಶುರುವಾದ ಬಳಿಕ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಶೂಟಿಂಗ್ ಮಾಡುವಾಗ 30-40 ನಿಮಿಷ ನನಗೆ ಸುಧಾರಿಸಿಕೊಳ್ಳಲು ಬೇಕಾಗುತ್ತಿತ್ತು. ಈ ಸಿನಿಮಾ ರಿಲೀಸ್ ಆಗಿ ಎಲ್ಲರೂ ನೋಡುತ್ತಿದ್ದಾರೆ ಎಂದಾಗ ಖುಷಿ ಆಗ್ತಿದೆ. ಮತ್ತೊಂದು ಕಡೆ ಜಗತ್ತಿನಲ್ಲಿ ಎಷ್ಟೆಲ್ಲ ನೋವಿದೆ ಎಂದು ಅನಿಸುತ್ತಿದೆ. ನಿಮ್ಮೆಲ್ಲರಿಗೂ ದೊಡ್ಡ ಅಪ್ಪುಗೆ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ: ‘ಎಲ್ಲರಿಗೂ ವಿಜಯ್ ಅಂತಹ ಹುಡುಗ ಸಿಗಲಿ’; ರಶ್ಮಿಕಾ ಮನದ ಬಯಕೆ

ಇದು ರಕ್ಷಿತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ರಕ್ಷಿತ್ ಶೆಟ್ಟಿ ಅವರು ಬ್ರೇಕಪ್ ಆದ ಬಳಿಕ ಯಾವ ರೀತಿ ನಡೆದುಕೊಂಡರು ಎಂಬ ವಿಡಿಯೋನ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಕ್ಷಿತ್ ಅವರು ಸಂಬಂಧದ ಬಗ್ಗೆ ತುಂಬಾನೇ ಪ್ರಬುದ್ಧವಾಗಿ ಮಾತನಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:05 pm, Fri, 14 November 25