ಗುಟ್ಟಾಗಿ 2ನೇ ಮದುವೆ ಆಗಿದ್ದಾರಾ ರವಿ ಕಿಶನ್​? ನಟ, ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಆರೋಪ

|

Updated on: Apr 18, 2024 | 3:10 PM

ಹಿಂದಿ, ಭೋಜ್​ಪುರಿ, ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ರವಿ ಕಿಶನ್​ ಫೇಮಸ್​ ಆಗಿದ್ದಾರೆ. ರಾಜಕಾರಣಿ ಆಗಿಯೂ ಅವರು ಯಶಸ್ಸು ಕಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೋರಕ್​ಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ ಅವರ ಮೇಲೆ ಆರೋಪ ಕೇಳಿಬಂದಿದೆ.

ಗುಟ್ಟಾಗಿ 2ನೇ ಮದುವೆ ಆಗಿದ್ದಾರಾ ರವಿ ಕಿಶನ್​? ನಟ, ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಆರೋಪ
ಶೆನೋವಾ, ಅಪರ್ಣಾ ಠಾಕೂರ್​, ರವಿ ಕಿಶನ್​
Follow us on

ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್​ (Ravi Kishan) ವಿರುದ್ಧ ಒಂದು ಗಂಭೀರ ಆರೋಪ ಕೇಳಿಬಂದಿದೆ. ಅಪರ್ಣಾ ಠಾಕೂರ್​ (Aparna Thakur) ಎಂಬ ಮಹಿಳೆ ಸುದ್ದಿಗೋಷ್ಠಿ ನಡೆಸಿ, ‘ರವಿ ಕಿಶನ್​ ನನ್ನ ಗಂಡ. ನಾನು ಅವರ 2ನೇ ಹೆಂಡತಿ’ ಎಂದು ಹೇಳಿದ್ದಾರೆ. ತಮಗೆ 25 ವರ್ಷದ ಮಗಳು ಇದ್ದು, ಆಕೆಯನ್ನು ಪುತ್ರಿ ಎಂದು ರವಿ ಕಿಶನ್​ ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದ ತಾವು ಕಾನೂನಿನ ಮೊರೆ ಹೋಗಿರುವುದಾಗಿ ಅಪರ್ಣಾ ರಾಕೂರ್​ ತಿಳಿಸಿದ್ದಾರೆ. ಇದರಿಂದಾಗಿ ವಿವಾದ ಸೃಷ್ಟಿ ಆಗಿದೆ. ಅಪರ್ಣಾ ಠಾಕೂರ್​ ವಿರುದ್ಧ ರವಿ ಕಿಶನ್​ ಪತ್ನಿ ಪ್ರೀತಿ ಶುಕ್ಲಾ (Preeti Shukla) ದೂರು ನೀಡಿದ್ದಾರೆ.

ಲಖನೌನಲ್ಲಿ ಅಪರ್ಣಾ ಮತ್ತು ಅವರ ಪುತ್ರಿ ಶೆನೋವಾ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ನನ್ನ ಮಗಳ ಹಕ್ಕಿಗಾಗಿ ನಾನು ಈ ಸುದ್ದಿಗೋಷ್ಠಿ ಕರೆದಿದ್ದೇನೆ. ನಾನು ನ್ಯಾಯಾಲದ ಮೆಟ್ಟಿಲು ಏರುತ್ತಿದ್ದೇನೆ. ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ನನ್ನ ಜೊತೆ ಇದ್ದಾಗ ಮಗಳು ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಸಾರ್ವಜನಿಕವಾಗಿ ಅವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅಪರ್ಣಾ ಠಾಕೂರ್​ ಆರೋಪಿಸಿದ್ದಾರೆ.

‘ಕುಟುಂಬದವರು ಮತ್ತು ಸ್ನೇಹಿತರ ಎದುರಿನಲ್ಲಿ ರವಿ ಕಿಶನ್​ ನನಗೆ ಸಿಂಧೂರ ಇಟ್ಟಿದ್ದಾರೆ ಹಾಗೂ ತಾಳಿ ಕಟ್ಟಿದ್ದಾರೆ. ಮುಂಬೈನಲ್ಲಿ 1996ರಲ್ಲೇ ನಮ್ಮ ಮದುವೆ ಆಗಿತ್ತು. ನಾನು, ಅವರು ಮತ್ತು ಮಗಳು ಜೊತೆಯಾಗಿ ಇರುವ ಫೋಟೋಗಳು ಇವೆ. ಅವರ ತಂದೆ-ತಾಯಿ ಜೊತೆಗಿನ ವಿಡಿಯೋ ಕೂಡ ಇದೆ. ಮಗಳನ್ನು ಈಗ ಅವರು ದೂರ ಇಟ್ಟಿದ್ದಾರೆ. ಅವರಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಜಗತ್ತಿನ ಮುಂದೆ ಮಗಳು ಎಂದು ಒಪ್ಪಿಕೊಳ್ಳಬೇಕು ಅಥವಾ ಕಾನೂನಿನ ಪ್ರಕಾರ ದತ್ತು ಪಡೆಯಬೇಕು’ ಎಂದು ಅಪರ್ಣಾ ಠಾಕೂರ್​ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಾನು ನಾಲ್ಕು ಮಕ್ಕಳನ್ನು ಹೊಂದಿರುವುದಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಸಂಸದ ರವಿ ಕಿಶನ್ ನೀಡಿದ ವಿವರಣೆ, ಕಾರಣ ಇಲ್ಲಿದೆ

ದೂರು ನೀಡಿದ ರವಿ ಕಿಶನ್​ ಪತ್ನಿ:

2ನೇ ಹೆಂಡತಿ ಎಂದು ಹೇಳಿಕೊಂಡು ಬಂದಿರುವ ಅಪರ್ಣಾ ಠಾಕೂರ್​ ವಿರುದ್ಧ ರವಿ ಕಿಶನ್​ ಪತ್ನಿ ಪ್ರೀತಿ ಶುಕ್ಲಾ ಅವರು ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ್ಣಾ ಮಾತ್ರವಲ್ಲದೇ ಅವರ ಕುಟುಂಬದ ಕೆಲವು ಸದಸ್ಯರು, ಸಮಾಜವಾದಿ ಪಕ್ಷದ ಮುಖಂಡ ವಿವೇಕ್​ ಕುಮಾರ್​, ಪತ್ರಕರ್ತ ಖುರ್ಷಿದ್​ ಖಾನ್​ ಅವರ ವಿರುದ್ಧವೂ ದೂರು ನೀಡಲಾಗಿದೆ. ‘ಅಪರ್ಣಾ ಅವರು 20 ಕೋಟಿ ರೂಪಾಯಿ ಸುಲಿಗೆ ಮಾಡುವ ಉದ್ದೇಶ ಹೊಂದಿದ್ದಾರೆ. ರವಿ ಕಿಶನ್​ ಅವರ ವಿರುದ್ಧ ಸುಳ್ಳು ರೇಪ್​ ಕೇಸ್​ ಹಾಕುವುದಾಗಿ ಬೆದರಿಸಿದ್ದಾರೆ’ ಎಂದು ದೂರಿನಲ್ಲಿ ಪ್ರೀತಿ ಶುಕ್ಲಾ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Thu, 18 April 24