Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್​ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?

ಮಾಧವನ್​ ಅವರ ಪತ್ನಿ ಸರಿತಾ ಅವರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೊವಿಡ್​ನ ಈ ಕಡುಕಷ್ಟದ ಸಂದರ್ಭದಲ್ಲಿ ಅವರು ಬಡಮಕ್ಕಳಿಗೆ ಆನ್​ಲೈನ್​ ಮೂಲಕ ಪಾಠ ಹೇಳಿಕೊಡುತ್ತಿದ್ದಾರೆ.

Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್​ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?
ಆರ್​. ಮಾಧವನ್​
Edited By:

Updated on: May 01, 2021 | 9:52 AM

ಬಹುಭಾಷಾ ನಟ ಆರ್​. ಮಾಧವನ್​ ಅವರು ಸದ್ಯ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ದೇಶಾದ್ಯಂತ ಹರಡಿರುವ ಕೊರೊನಾ ವೈರಸ್​ನಿಂದಾಗಿ ಅವರು ಎಲ್ಲ ಶೂಟಿಂಗ್ ಚಟುವಟಿಕೆಗಳಿಗೆ ಬ್ರೇಕ್​ ಹಾಕಿದ್ದಾರೆ. ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ವೈರಲ್​ ಆಗುತ್ತಿದೆ. ‘ಹೆಂಡತಿ ಎದುರಿನಲ್ಲಿ ನಾನು ಅಸಮರ್ಥ ಎನಿಸುತ್ತಿದೆ’ ಎಂದು ಮಾಧವನ್​ ಹೇಳಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ.

ವಿಷಯ ಏನೆಂದರೆ, ಮಾಧವನ್​ ಅವರ ಪತ್ನಿ ಸರಿತಾ ಅವರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೊವಿಡ್​ನ ಈ ಕಡುಕಷ್ಟದ ಸಂದರ್ಭದಲ್ಲಿ ಶಾಲೆಗಳು ಬಂದ್​ ಆಗಿವೆ. ಹಾಗಾಗಿ, ಸರಿತಾ ಅವರು ಬಡಮಕ್ಕಳಿಗೆ ಆನ್​ಲೈನ್​ ಮೂಲಕ ಪಾಠ ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವನ್ನು ಮಾಧವನ್​ ಶೆರ್​ ಮಾಡಿಕೊಂಡಿದ್ದು, ಪತ್ನಿ ಮಾಡುತ್ತಿರುವ ಈ ಕೆಲಸದ ಮುಂದೆ ತಾವು ಅಸಮರ್ಥ ಎನಿಸುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದೆ.

ಏಪ್ರಿಲ್​ನಲ್ಲಿ ಮಾಧವನ್​ ಅವರಿಗೆ ಕೊರೊನಾ ವೈರಸ್​ ಪಾಸಿಟಿವ್​ ಆಗಿತ್ತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಮನೆಯಲ್ಲೇ ಇದ್ದಾರೆ. ಅವರ ಕುಟುಂಬದ ಇತರೆ ಸದಸ್ಯರ ಕೊವಿಡ್​ ಪರೀಕ್ಷೆ ಕೂಡ ನೆಗೆಟಿವ್​ ಆಗಿದೆ. ದೇವರ ದಯೆಯಿಂದ ನಾವೆಲ್ಲ ಈಗ ಸದೃಢ ಮತ್ತು ಸುರಕ್ಷತೆಯಿಂದ ಇದ್ದೇವೆ ಎಂದು ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಮಾಧವನ್​ ನಟನೆ ಮತ್ತು ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್​ ಭಾರಿ ಕೌತುಕ ಮೂಡಿಸಿದೆ. ಟ್ರೇಲರ್​ನಲ್ಲಿ​ ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎಂದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ನರೇಂದ್ರ ಮೋದಿ, ಅಮಿತಾಬ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ಹೃತಿಕ್​ ರೋಷನ್​, ಅಭಿಷೇಕ್​ ಬಚ್ಚನ್​ ಮುಂತಾದವರು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗಾಗಿ ಎಲ್ಲರೂ ಕಾದಿದ್ದಾರೆ.

ಇದನ್ನೂ ಓದಿ: Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

Rocketry: ರಾಕೆಟ್ರಿ ಸಿನಿಮಾ, ನಂಬಿ ನಾರಾಯಣನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ

Published On - 8:28 am, Sat, 1 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us