Rocketry: ರಾಕೆಟ್ರಿ ಸಿನಿಮಾ, ನಂಬಿ ನಾರಾಯಣನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ
ನಟ ಆರ್. ಮಾಧವನ್, ವಿಜ್ಞಾನಿ ನಂಬಿ ನಾರಾಯಣನ್ ಭೇಟಿಯ ವೇಳೆ, ನಂಬಿ ನಾರಾಯಣನ್ ಎದುರಿಸಿದ್ದ ಸಂಕಷ್ಟಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ಸೂಚಿಸಿದ್ದಾರೆ.
ದೆಹಲಿ: ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಹಾಗೂ ನಟ ಮಾಧವನ್ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಭಾರತದ ಮಾಜಿ ವಿಜ್ಞಾನಿ, ಇಸ್ರೋದ ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಬದುಕಿನ ಕುರಿತಾದ ಚಿತ್ರ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾದ ತುಣುಕುಗಳನ್ನು ಮೋದಿ ವೀಕ್ಷಿಸಿದ್ದಾರೆ. ಬಳಿಕ, ಆರ್. ಮಾಧವನ್ ಮತ್ತು ನಂಬಿ ನಾರಾಯಣನ್ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಭೇಟಿಯ ವೇಳೆ, ವಿಜ್ಞಾನಿ ನಂಬಿ ನಾರಾಯಣನ್ ಎದುರಿಸಿದ್ದ ಸಂಕಷ್ಟಗಳ ಬಗ್ಗೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ಸೂಚಿಸಿದ್ದಾರೆ. ಪ್ರಧಾನಿ ಭೇಟಿಯ ಚಿತ್ರಗಳನ್ನು ಮಾಧವನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ನಂಬಿ ನಾರಾಯಣನ್ ಹಾಗೂ ನನಗೆ ಮೋದಿ ಭೇಟಿ ಆಗುವ ಅವಕಾಶ ಸಿಕ್ಕಿತು. ನಾವು ರಾಕೆಟ್ರಿ ಚಿತ್ರದ ಬಗ್ಗೆ ಮಾತನಾಡಿದೆವು. ಪ್ರಧಾನಿ ಮೋದಿ ಮಾತು ಮತ್ತು ಪ್ರಶಂಸೆಯಿಂದ ಸಂತೋಷವಾಯಿತು. ಈ ಅವಕಾಶಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
A few weeks ago, @NambiNOfficial and I had the honour of calling on PM @narendramodi. We spoke on the upcoming film #Rocketrythefilm and were touched and honored by PM’s reaction to the clips and concern for Nambi ji & the wrong done to him. Thank you for the privilege sir. pic.twitter.com/KPfvX8Pm8u
— Ranganathan Madhavan (@ActorMadhavan) April 5, 2021
ಬಹುಭಾಷಾ ನಟ ಆರ್. ಮಾಧವನ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಇಟ್ಟುಕೊಂಡು ಈಗ ಅವರು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಮಾಧವನ್ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್ ಮುಂತಾದವರು ಫಿದಾ ಆಗಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮಾಧವನ್ ಯಾವುದೋ ಕಾಲ್ಪನಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಒಂದು ನೈಜ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಸ್ರೋದ ಮಾಜಿ ರಾಕೆಟ್ ಸೈನ್ಸ್ ವಿಜ್ಞಾನಿ ನಂಬಿ ನಾರಾಯಣ್ ಅವರ ಬಯೋಪಿಕ್ ಆಗಿ ಈ ಸಿನಿಮಾ ಮೂಡಿಬಂದಿದೆ. ಕಮರ್ಷಿಯಲ್ ಸ್ಯಾಟಲೈಟ್ ಮಾರುಕಟ್ಟೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಪ್ರಯತ್ನಿಸಿದ ವ್ಯಕ್ತಿಯೇ ನಂಬಿ ನಾರಾಯಣ್. ಆದರೆ ಅಂಥ ವಿಜ್ಞಾನಿ ಜೈಲು ಸೇರಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ!
ಇದನ್ನೂ ಓದಿ: Narendra Modi: ಎಲ್ಲಾ ಚುನಾವಣೆಗಳಲ್ಲೂ ಗೆಲ್ಲುತ್ತಾ ಹೋಗಲು ಬಿಜೆಪಿ ಯಂತ್ರವಲ್ಲ – ಪ್ರಧಾನಿ ನರೇಂದ್ರ ಮೋದಿ
Published On - 6:40 pm, Tue, 6 April 21