RRR Movie Collection: ‘ಆರ್​ಆರ್​ಆರ್​’ ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ

| Updated By: ರಾಜೇಶ್ ದುಗ್ಗುಮನೆ

Updated on: Mar 26, 2022 | 2:33 PM

ಕರ್ನಾಟಕದಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಭಾರೀ ಬೇಡಿಕೆ ಇತ್ತು. ಮಾರ್ಚ್​ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು, ಸಿನಿಮಾ ಟಿಕೆಟ್​ನ ಕನಿಷ್ಠ ಮೊತ್ತ 250 ಇತ್ತು.

RRR Movie Collection: ‘ಆರ್​ಆರ್​ಆರ್​’ ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ
ರಾಮ್​ ಚರಣ್​-ಜ್ಯೂ.ಎನ್​ಟಿಆರ್​
Follow us on

ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಿದೆ. ಮೊದಲ ದಿನದ ಗಳಿಕೆ ವಿಚಾರದಲ್ಲಿ ಈ ಚಿತ್ರ ‘ಬಾಹುಬಲಿ 2’ಗಿಂತಲೂ (Bahubali 2) ದುಪ್ಪಟ್ಟು ಹಣವನ್ನು ಬಾಚಿಕೊಂಡಿದೆ. ಈ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರುವುದು ಸಹಜವಾಗಿಯೇ ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ. ಇನ್ನು, ಈ ಸಿನಿಮಾ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲೇ ತೆರೆಕಂಡಿದೆ. ಬೆಂಗಳೂರಿನಲ್ಲಿ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ವರ್ಷನ್​ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಹಾಗಾದರೆ, ಕರ್ನಾಟಕದಲ್ಲಿ ಈ ಚಿತ್ರದ ಮೊದಲ ದಿನ ಗಳಿಸಿದ್ದೆಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕರ್ನಾಟಕದಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಭಾರೀ ಬೇಡಿಕೆ ಇತ್ತು. ಮಾರ್ಚ್​ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು, ಸಿನಿಮಾ ಟಿಕೆಟ್​ನ ಕನಿಷ್ಠ ಮೊತ್ತ 250 ಇತ್ತು. ಗರಿಷ್ಠ ದರ 1000 ರೂಪಾಯಿಗೂ ಮೀರಿತ್ತು. ಇನ್ನು, ಕರ್ನಾಟಕದ ಹಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಆಗಿದೆ.

ಬಾಕ್ಸ್​ ಆಫೀಸ್​ ವಿಶ್ಲೇಷಕ ಮನೋಬಲ ವಿಜಯಬಾಲನ್​ ಅವರ ಪ್ರಕಾರ ‘ಆರ್​ಆರ್​ಆರ್​’ ಸಿನಿಮಾ ಕರ್ನಾಟಕದಲ್ಲಿ 16.48 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಕನ್ನಡ ನಾಡಿನಿಂದಲೂ ಚಿತ್ರಕ್ಕೆ ಒಳ್ಳೆಯ ಕಮಾಯಿ ಆಗಿದೆ. ಡಬ್​ ಆಗಿ ತೆರೆಕಂಡ ವರ್ಷನ್​ ಕೂಡ ಹೌಸ್​ಫುಲ್​ ಪ್ರದರ್ಶನ ಕಂಡಿದ್ದು ವಿಶೇಷ.

ಇನ್ನು, ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾ ಅಬ್ಬರಿಸಿದೆ. ಈ ಚಿತ್ರ ಎರಡೂ ರಾಜ್ಯಗಳಿಂದ 120 ಕೋಟಿ ಬಾಚಿಕೊಂಡಿದೆ. ಹಿಂದಿ ವರ್ಷನ್​ನಿಂದ ಚಿತ್ರಕ್ಕೆ 25 ಕೋಟಿ ರೂಪಾಯಿ ಹರಿದು ಬಂದಿದೆ. ತಮಿಳುನಾಡು ಹಾಗೂ ಕೇರಳದಿಂದ ಚಿತ್ರಕ್ಕೆ 17 ಕೋಟಿ ಗಳಿಕೆ ಆಗಿದೆ. ವಿದೇಶದಲ್ಲೂ ಈ ಸಿನಿಮಾ ಅಬ್ಬರಿಸಿದ್ದು, ಸುಮಾರು 78 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 257 ಕೋಟಿ ರೂಪಾಯಿ ಆಗಿದೆ.

ಭಾರತೀಯ ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿದ್ದು ಇದೇ ಮೊದಲು. ಈ ಸಿನಿಮಾದಲ್ಲಿ ಬರುವ ಪಾತ್ರಗಳು ನಿಜವಾದವು. ಆದರೆ, ಕಥೆ ಕಾಲ್ಪನಿಕವಾಗಿದೆ. ಈ ಫ್ಯಾಂಟಸಿ ಕಥೆಯನ್ನು ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್​ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾದ ಬಜೆಟ್​ 500 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

RRR Box Office Collection: ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಅಬ್ಬರ; ವಿಶ್ವಾದ್ಯಂತ ಧೂಳೆಬ್ಬಿಸಿತು ರಾಜಮೌಳಿ ಸಿನಿಮಾ