‘ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ’ ಎನ್ನುತ್ತಲೇ ಹೊಸ ಫೋಟೋ ಹಂಚಿಕೊಂಡ ರಶ್ಮಿಕಾ; ಏನಿದು ವಿಷಯ?

Rashmika Mandanna: ಸಿನಿಮಾ ಕಲಾವಿದರು ಫಿಟ್​ ಆಗಿರಬೇಕಾದ್ದು ಅನಿವಾರ್ಯ ಮತ್ತು ಅತ್ಯಗತ್ಯ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ವರ್ಕೌಟ್​ ತಪ್ಪಿಸುವಂತಿಲ್ಲ. ಈ ಬಗ್ಗೆ ರಶ್ಮಿಕಾ ಮಂದಣ್ಣ ಒಂದಷ್ಟು ಐಡಿಯಾಗಳನ್ನು ಶೇರ್ ಮಾಡಿಕೊಂಡಿದ್ದಾರೆ.

‘ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ’ ಎನ್ನುತ್ತಲೇ ಹೊಸ ಫೋಟೋ ಹಂಚಿಕೊಂಡ ರಶ್ಮಿಕಾ; ಏನಿದು ವಿಷಯ?
ರಶ್ಮಿಕಾ ಮಂದಣ್ಣ
TV9kannada Web Team

| Edited By: Madan Kumar

Mar 26, 2022 | 1:59 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಅವರ ಕಾಲ್​ಶೀಟ್​ಗಾಗಿ ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ಕಾದು ಕುಳಿತಿವೆ. ದಕ್ಷಿಣ ಭಾರತದ ಅನೇಕ ಸ್ಟಾರ್​ ಹೀರೋಗಳ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ (Rashmika Mandanna Movies) ಮಾಡಿದ್ದಾರೆ. ಈಗ ಬಾಲಿವುಡ್​ಗೂ ಕಾಲಿಟ್ಟು ಹವಾ ಮಾಡುತ್ತಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ, ಅಮಿತಾಭ್​ ಬಚ್ಚನ್​ ಮುಂತಾದ ನಟರ ಜೊತೆಗೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ದಿನದಿಂದ ದಿನಕ್ಕೆ ರಶ್ಮಿಕಾ ಅಭಿಮಾನಿಗಳ (Rashmika Mandanna Fans) ಸಂಖ್ಯೆ ಕೂಡ ಹೆಚ್ಚುತ್ತಿದೆ. ಇಷ್ಟೆಲ್ಲ ಬ್ಯುಸಿ ಆಗಿರುವ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವುದು ತಪ್ಪಿಸಿಲ್ಲ. ಆಗಾಗ ಏನನ್ನಾದರೂ ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ರಶ್ಮಿಕಾ ಮಂದಣ್ಣ ಹಂಚಿಕೊಳ್ಳುವ ವಿಡಿಯೋ ಅಥವಾ ಫೋಟೋಗಳಿಗೆ ಅಭಿಮಾನಿಗಳು ಸಹಜವಾಗಿಯೇ​ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಈ ವಿಚಾರದಲ್ಲಿ ರಶ್ಮಿಕಾ ಅವರಿಗೆ ಯಾಕೋ ಕೊಂಚ ಅನುಮಾನ ಬಂದಂತಿದೆ. ಆ ಕಾರಣದಿಂದ ಅವರು ಇತ್ತೀಚೆಗೆ ಒಂದು ಫೋಟೋ ಶೇರ್​ ಮಾಡುವಾಗ ‘ನಿಮ್ಮಲ್ಲಿ ತುಂಬ ಜನರಿಗೆ ಇದು ಇಷ್ಟ ಆಗಲ್ಲ’ ಎಂದು ಬರೆದುಕೊಂಡಿದ್ದಾರೆ. ಯಾವುದು ಆ ಫೋಟೋ? ರಶ್ಮಿಕಾ ಅದನ್ನು ಹಂಚಿಕೊಂಡಿದ್ದು ಯಾಕೆ? ಆ ಬಗ್ಗೆ ಇಲ್ಲಿದೆ ಮಾಹಿತಿ..

ರಶ್ಮಿಕಾ ಮಂದಣ್ಣ ಅವರಿಗೆ ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ಇದೆ. ಬಣ್ಣದ ಲೋಕದಲ್ಲಿ ನಟಿಯರು ಫಿಟ್​ ಆಗಿರಬೇಕಾದ್ದು ಅನಿವಾರ್ಯ ಮತ್ತು ಅತ್ಯಗತ್ಯ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ವರ್ಕೌಟ್​ ತಪ್ಪಿಸುವಂತಿಲ್ಲ. ಊಟ-ತಿಂಡಿಯ ಮೇಲೂ ಹಿಡಿತ ಇರಲೇಬೇಕು. ಈ ವಿಚಾರಗಳ ಬಗ್ಗೆಯೇ ರಶ್ಮಿಕಾ ಮಂದಣ್ಣ ಅವರು ಒಂದಷ್ಟು ಐಡಿಯಾಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಫಿಟ್ನೆಸ್​ ರಹಸ್ಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹೊಸ ಫೋಟೋ ಹಂಚಿಕೊಂಡಿರುವ ಅವರು ಈ ಕ್ಯಾಪ್ಷನ್​ ಬರೆದಿದ್ದಾರೆ. ‘ಈ ಫೋಟೋವನ್ನು ನಾನು ಪೋಸ್ಟ್​ ಮಾಡಬಹುದೋ ಇಲ್ಲವೋ ಗೊತ್ತಿಲ್ಲ. ನಿಮ್ಮಲ್ಲಿ ತುಂಬ ಜನರು ಇದನ್ನು ಇಷ್ಟಪಡುವುದಿಲ್ಲ. ನಿರಂತರ ಪ್ರಯತ್ನವೇ ನಿಮ್ಮ ಫಿಟ್ನೆಸ್​ ಗೋಲ್​ಗೆ ತುಂಬ ಮುಖ್ಯವಾದ ಅಂಶ. ವರ್ಕೌಟ್​, ಡಯೆಟ್​, ಆಲೋಚನೆಗಳು ಮತ್ತು ಜರ್ನಿ ನಿರಂತರವಾಗಿ ಇರಲಿ ಹಾಗೂ ಅದನ್ನು ಎಂಜಾಯ್ ಮಾಡಿ. ಸ್ವಲ್ಪ ಸಮಯದವರೆಗೆ ಅದು ಖುಷಿ ನೀಡದೇ ಇರಬಹುದು. ಆದರೆ ಅಭ್ಯಾಸವಾದ ಬಳಿಕ ನಿಮಗೆ ಅರ್ಥವಾಗುತ್ತದೆ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ರಶ್ಮಿಕಾ ಮಂದಣ್ಣ ಅವರು ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದರಲ್ಲಿ ಅವರ ಫಿಟ್ನೆಸ್​ ಎದ್ದು ಕಾಣುತ್ತದೆ. ಫಿಟ್ನೆಸ್​ ಪ್ರಿಯರಿಗೆ ಸ್ಫೂರ್ತಿ ನೀಡುವಂತಿರುವ ಈ ಫೋಟೋ ಈಗ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿದೆ. ಬಾಲಿವುಡ್​ಗೆ ಕಾಲಿಟ್ಟ ಬಳಿಕ ರಶ್ಮಿಕಾ ಅವರು ಫಿಟ್ನೆಸ್​ ಬಗ್ಗೆ ಇನ್ನಷ್ಟು ಕಾಳಜಿ ವಹಿಸುತ್ತಿದ್ದಾರೆ.

ಯೂಟ್ಯೂಬ್​ ಚಾನೆಲ್​ ಆರಂಭಿಸಿದ ರಶ್ಮಿಕಾ ಮಂದಣ್ಣ:

ಎಲ್ಲರಿಗೂ ಯೂಟ್ಯೂಬ್​ ಎಂಬುದು ಹೊಸ ವೇದಿಕೆ ಆಗಿದೆ. ಜನಸಾಮಾನ್ಯರು ಕೂಡ ತಮ್ಮದೇ ಯೂಟ್ಯೂಬ್​ ಚಾನೆಲ್ ಆರಂಭಿಸಿ, ಅದರಿಂದ ಹಣ ಗಳಿಸುತ್ತಾರೆ. ಸೆಲೆಬ್ರಿಟಿಗಳು ಸಹ ಈ ವಿಚಾರದಲ್ಲಿ ಹಿಂದಿ ಬಿದ್ದಿಲ್ಲ. ಅನೇಕ ನಟ-ನಟಿಯರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅದರಿಂದಲೂ ಅವರು ಹಣ ಗಳಿಸುತ್ತಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಕೂಡ ಇದೇ ಹಾದಿಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಷ್ಟು ದಿನ ಕೇವಲ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ ಮುಂತಾದ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಯೂಟ್ಯೂಬ್​ ಲೋಕಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಗೆ ಕಾಲಿಡುತ್ತಿದ್ದಂತೆಯೇ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಕೆಲವೇ ದಿನಗಳಲ್ಲಿ 47 ಸಾವಿರಕ್ಕೂ ಅಧಿಕ ಮಂದಿ ಚಂದಾದಾರರು ಸಿಕ್ಕಿದ್ದಾರೆ. ‘ರಶ್ಮಿಕಾ ಮಂದಣ್ಣ’ ಎಂಬ ಈ ವೇರಿಫೈಯ್ಡ್​ ಯೂಟ್ಯೂಬ್​ ಚಾನೆಲ್​ನಲ್ಲಿ ತಮ್ಮ ವೈಯಕ್ತಿಕ ಇಷ್ಟ-ಕಷ್ಟಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ:

​ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್​ ಕಂಡು ಹೌಹಾರಿದ ವರುಣ್​ ಧವನ್​; ವೈರಲ್​ ಆಗಿದೆ ಈ ವಿಡಿಯೋ

ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada