RRR Movie Collection: ‘ಆರ್ಆರ್ಆರ್’ ಚಿತ್ರ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಭಾರೀ ಬೇಡಿಕೆ ಇತ್ತು. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು, ಸಿನಿಮಾ ಟಿಕೆಟ್ನ ಕನಿಷ್ಠ ಮೊತ್ತ 250 ಇತ್ತು.
ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ಮೊದಲ ದಿನದ ಗಳಿಕೆ ವಿಚಾರದಲ್ಲಿ ಈ ಚಿತ್ರ ‘ಬಾಹುಬಲಿ 2’ಗಿಂತಲೂ (Bahubali 2) ದುಪ್ಪಟ್ಟು ಹಣವನ್ನು ಬಾಚಿಕೊಂಡಿದೆ. ಈ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರುವುದು ಸಹಜವಾಗಿಯೇ ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ. ಇನ್ನು, ಈ ಸಿನಿಮಾ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲೇ ತೆರೆಕಂಡಿದೆ. ಬೆಂಗಳೂರಿನಲ್ಲಿ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ವರ್ಷನ್ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಹಾಗಾದರೆ, ಕರ್ನಾಟಕದಲ್ಲಿ ಈ ಚಿತ್ರದ ಮೊದಲ ದಿನ ಗಳಿಸಿದ್ದೆಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕರ್ನಾಟಕದಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಭಾರೀ ಬೇಡಿಕೆ ಇತ್ತು. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಂಡಿದೆ. ಇನ್ನು, ಸಿನಿಮಾ ಟಿಕೆಟ್ನ ಕನಿಷ್ಠ ಮೊತ್ತ 250 ಇತ್ತು. ಗರಿಷ್ಠ ದರ 1000 ರೂಪಾಯಿಗೂ ಮೀರಿತ್ತು. ಇನ್ನು, ಕರ್ನಾಟಕದ ಹಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಆಗಿದೆ.
ಬಾಕ್ಸ್ ಆಫೀಸ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಅವರ ಪ್ರಕಾರ ‘ಆರ್ಆರ್ಆರ್’ ಸಿನಿಮಾ ಕರ್ನಾಟಕದಲ್ಲಿ 16.48 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಕನ್ನಡ ನಾಡಿನಿಂದಲೂ ಚಿತ್ರಕ್ಕೆ ಒಳ್ಳೆಯ ಕಮಾಯಿ ಆಗಿದೆ. ಡಬ್ ಆಗಿ ತೆರೆಕಂಡ ವರ್ಷನ್ ಕೂಡ ಹೌಸ್ಫುಲ್ ಪ್ರದರ್ಶನ ಕಂಡಿದ್ದು ವಿಶೇಷ.
ಇನ್ನು, ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾ ಅಬ್ಬರಿಸಿದೆ. ಈ ಚಿತ್ರ ಎರಡೂ ರಾಜ್ಯಗಳಿಂದ 120 ಕೋಟಿ ಬಾಚಿಕೊಂಡಿದೆ. ಹಿಂದಿ ವರ್ಷನ್ನಿಂದ ಚಿತ್ರಕ್ಕೆ 25 ಕೋಟಿ ರೂಪಾಯಿ ಹರಿದು ಬಂದಿದೆ. ತಮಿಳುನಾಡು ಹಾಗೂ ಕೇರಳದಿಂದ ಚಿತ್ರಕ್ಕೆ 17 ಕೋಟಿ ಗಳಿಕೆ ಆಗಿದೆ. ವಿದೇಶದಲ್ಲೂ ಈ ಸಿನಿಮಾ ಅಬ್ಬರಿಸಿದ್ದು, ಸುಮಾರು 78 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 257 ಕೋಟಿ ರೂಪಾಯಿ ಆಗಿದೆ.
#RRRMovie creates HISTORY at the WW Box Office.
AP/TS – ₹ 120.19 cr KA – ₹ 16.48 cr TN – ₹ 12.73 cr KL – ₹ 4.36 cr ROI – ₹ 25.14 cr OS – ₹ 78.25 cr [Reported Locs]
Total – ₹ 257.15 cr
FIRST ever Indian movie to achieve this HUMONGOUS figure on the opening day.
— Manobala Vijayabalan (@ManobalaV) March 26, 2022
ಭಾರತೀಯ ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿದ್ದು ಇದೇ ಮೊದಲು. ಈ ಸಿನಿಮಾದಲ್ಲಿ ಬರುವ ಪಾತ್ರಗಳು ನಿಜವಾದವು. ಆದರೆ, ಕಥೆ ಕಾಲ್ಪನಿಕವಾಗಿದೆ. ಈ ಫ್ಯಾಂಟಸಿ ಕಥೆಯನ್ನು ಅಭಿಮಾನಿಗಳು ತುಂಬಾನೇ ಇಷ್ಟಪಟ್ಟಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ದಾಟಿದೆ.
ಇದನ್ನೂ ಓದಿ: RRR Twitter Review: ನಿದ್ದೆ ಬಿಟ್ಟು ‘ಆರ್ಆರ್ಆರ್’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?