RRR ಆಸ್ಕರ್​ ಆಸೆ ಇನ್ನೂ ಜೀವಂತ; ಬೇರೆ ಮಾರ್ಗದಲ್ಲಿ ಸ್ಪರ್ಧೆಗೆ ಇಳಿದ ರಾಜಮೌಳಿ ಸಿನಿಮಾ

| Updated By: ಮದನ್​ ಕುಮಾರ್​

Updated on: Oct 06, 2022 | 8:59 AM

SS Rajamouli | Oscar Award: ‘ಆರ್​ಆರ್​ಆರ್​’ ತಂಡ For Your Consideration ಕ್ಯಾಂಪೇನ್​ ಮೂಲಕ ಆಸ್ಕರ್​ ಸ್ಪರ್ಧೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

RRR ಆಸ್ಕರ್​ ಆಸೆ ಇನ್ನೂ ಜೀವಂತ; ಬೇರೆ ಮಾರ್ಗದಲ್ಲಿ ಸ್ಪರ್ಧೆಗೆ ಇಳಿದ ರಾಜಮೌಳಿ ಸಿನಿಮಾ
ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ಆಸ್ಕರ್​ ಟ್ರೋಫಿ
Follow us on

ಭಾರತೀಯ ಚಿತ್ರರಂಗದಲ್ಲಿ ‘ಆರ್​ಆರ್​ಆರ್​’ (RRR) ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಚಿತ್ರಮಂದಿರದಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಈ ಚಿತ್ರ ಯಶಸ್ವಿ ಆಯಿತು. ರಾಜಮೌಳಿ (SS Rajamouli) ನಿರ್ದೇಶನಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಆದರೆ ಭಾರತದಿಂದ ಅಧಿಕೃತವಾಗಿ ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗುವಲ್ಲಿ ‘ಆರ್​ಆರ್​ಆರ್​’ ಚಿತ್ರ ವಿಫಲವಾಯಿತು. ಇದರಿಂದ ಅಭಿಮಾನಿಗಳಿಗೆ ಸಖತ್​ ಬೇಸರ ಆಗಿತ್ತು. ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಸ್ಕರ್​ ಸ್ಪರ್ಧೆಗೆ ಭಾರತದಿಂದ ಆಯ್ಕೆ ಆಯಿತು. ಆಗ ರಾಜಮೌಳಿ ಅಭಿಮಾನಿಗಳು ಬೇಸರ ಮಾಡಿಕೊಂಡರು. ಆದರೆ ಈಗ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ‘For Your Consideration’ ಎಂಬ ಕ್ಯಾಂಪೇನ್​ ಮೂಲಕ ‘ಆರ್​ಆರ್​ಆರ್​’ ಸಿನಿಮಾವನ್ನು ಆಸ್ಕರ್​ (Oscar Award) ಕಣಕ್ಕೆ ಕಳಿಸಲು ಪ್ರಯತ್ನ ನಡೆದಿದೆ.

‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ಕಡೆಯಿಂದ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್​ ಸ್ಪರ್ಧೆಗೆ ಅರ್ಹತೆ ಪಡೆದಿಲ್ಲ ಎಂದ ಮಾತ್ರಕ್ಕೆ ಈ ಚಿತ್ರ ಸಮರ್ಥವಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಅಭಿಮಾನಿಗಳ ವಾದ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಈ ಸಿನಿಮಾ ಪರವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಧ್ವನಿ ಎತ್ತುತ್ತಲೇ ಇದ್ದಾರೆ. ಅದರ ಬೆನ್ನಲ್ಲೇ ‘ಆರ್​ಆರ್​ಆರ್​’ ತಂಡ For Your Consideration ಕ್ಯಾಂಪೇನ್​ ಮೂಲಕ ಆಸ್ಕರ್​ ಸ್ಪರ್ಧೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದೆ.

ಆಸ್ಕರ್​ ಕಮಿಟಿಯ ಗಮನ ಸೆಳೆಯಲು For Your Consideration ಕಾಂಪೇನ್​ ಮಾಡಲಾಗುತ್ತದೆ. ಇದಕ್ಕೆ ಬಹುಕೋಟಿ ರೂಪಾಯಿ ಹಣ ಖರ್ಚಾಗುತ್ತದೆ. ಎಲ್ಲ ಸಿನಿಮಾಗಳಿಗೂ ಈ ಪರಿ ಹಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ‘ಆರ್​ಆರ್​ಆರ್​’ ನಿರ್ಮಾಪಕರು ಸಾಕಷ್ಟು ಲಾಭ ಕಂಡಿರುವುದರಿಂದ For Your Consideration ಕ್ಯಾಂಪೇನ್​ಗೆ ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?

ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ-ನಟಿ, ಅತ್ಯುತ್ತಮ ಪೋಷಕ ಕಲಾವಿದರು, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಹಾಡು ಮುಂತಾದ ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳಲು ‘ಆರ್​ಆರ್​ಆರ್​’ ಚಿತ್ರ ಪ್ರಯತ್ನಿಸುತ್ತಿದೆ. ಹೀಗೆ ಸ್ವತಂತ್ರವಾಗಿ ಆಸ್ಕರ್​ಗೆ ಎಂಟ್ರಿ ನೀಡುವ ಸಾಹಸಕ್ಕೆ ಮುಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ಆಲಿಯಾ ಭಟ್​, ಅಜಯ್​ ದೇವಗನ್​, ಶ್ರೀಯಾ ಶರಣ್​ ಮುಂತಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬಂದ ಈ ಸಿನಿಮಾದಿಂದ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರ ಚಾರ್ಮ್​ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:59 am, Thu, 6 October 22