ಜೂ ಎನ್​​ಟಿಆರ್ ಬಳಿಕ ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾನಲ್ಲಿ ರುಕ್ಮಿಣಿ ವಸಂತ್

Rukmini Vasanth: ರುಕ್ಮಿಣಿ ವಸಂತ್ ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿರುವ ರುಕ್ಮಿಣಿ ವಸಂತ್, ಹಿಂದಿ ಸಿನಿಮಾ ಒಂದರ ಬಗ್ಗೆಯೂ ಮಾತುಕತೆ ಮಾಡಿದ್ದರು. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಸಿನಿಮಾನಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್, ಜೂ ಎನ್​​ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್ ಹೀರೋ ಅವರ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಜೂ ಎನ್​​ಟಿಆರ್ ಬಳಿಕ ಮತ್ತೊಬ್ಬ ಟಾಲಿವುಡ್ ಸ್ಟಾರ್ ಸಿನಿಮಾನಲ್ಲಿ ರುಕ್ಮಿಣಿ ವಸಂತ್
Rukmini Vasanth

Updated on: Jun 13, 2026 | 7:01 PM

ರುಕ್ಮಿಣಿ ವಸಂತ್ (Rukmini Vasanth) ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿರುವ ರುಕ್ಮಿಣಿ ವಸಂತ್, ಹಿಂದಿ ಸಿನಿಮಾ ಒಂದರ ಬಗ್ಗೆಯೂ ಮಾತುಕತೆ ಮಾಡಿದ್ದರು. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಸಿನಿಮಾನಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್, ಜೂ ಎನ್​​ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್ ಹೀರೋ ಅವರ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರುಕ್ಮಿಣಿ ವಸಂತ್ ಅವರು ಇದೀಗ ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ರುಕ್ಮಿಣಿ ವಸಂತ್ ಅವರನ್ನು ಸಿನಿಮಾದ ನಾಯಕಿಯಾಗಿ ಖುದ್ದು ನಾನಿ ಅವರೇ ಆಯ್ಕೆ ಮಾಡಿದ್ದಾರೆ. ರುಕ್ಮಿಣಿ ಅವರಿಗೂ ಕತೆ ಇಷ್ಟವಾಗಿದ್ದು, ಈ ಅವಕಾಶದ ಬಗ್ಗೆ ಉತ್ಸುಕರಾಗಿದ್ದಾರೆ. ರುಕ್ಮಿಣಿ ಅವರು ತಮ್ಮ ಅಭಿನಯಕ್ಕಾಗಿ ಗಮನ ಸೆಳೆಯುತ್ತಿದ್ದು, ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಜನಪ್ರಿಯ ಆಯ್ಕೆ ಆಗಿದ್ದಾರೆ. ಅಂದಹಾಗೆ ಈ ಸಿನಿಮಾನಲ್ಲಿ ನಾನಿ ನಾಯಕನಲ್ಲ, ಬದಲಿಗೆ ಮತ್ತೊಬ್ಬರು ನಾಯಕ ಎನ್ನಲಾಗಿದ್ದು, ಆ ನಾಯಕನ ಹುಡುಕಾಟವನ್ನು ಚಿತ್ರತಂಡ ಮುಂದುವರೆಸಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ವರುಣಾರ್ಭಟ: ನಗರದ ಹಲವೆಡೆ ಧಾರಾಕಾರ ಮಳೆ; ಸಂಚಾರ ಅಸ್ತವ್ಯಸ್ತ

ಈ ಹಿಂದೆ ‘ದಂಡೋರ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದ ಮುರಳಿಕಾಂತ್ ದೇವಸೋತ್ ನಾನಿ-ರುಕ್ಮಿಣಿ ವಸಂತ್ ಅವರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಯಾವ ದೊಡ್ಡ ಸ್ಟಾರ್ ನಟರೂ ಇಲ್ಲದಿದ್ದರೂ ಕೇವಲ ಕಂಟೆಂಟ್​​ನಿಂದ ಆ ಸಿನಿಮಾ ಗಮನ ಸೆಳೆದಿತ್ತು. ಸದ್ಯ ತಂಡವು ಚಿತ್ರಕಥೆ ಮತ್ತು ಇತರ ಪ್ರೀ ಪ್ರೊಡಕ್ಷನ್​​ನಲ್ಲಿ ತೊಡಗಿಕೊಂಡಿದ್ದು, ಮುರಳಿಕಾಂತ್ ಅವರು ಚಿತ್ರಕತೆಗೆ ಅಂತಿಮ ರೂಪ ನೀಡುತ್ತಿದ್ದಾರಂತೆ. ಅದರೊಂದಿಗೆ ಪೋಷಕ ನಟರು ಮತ್ತು ತಾಂತ್ರಿಕ ತಂಡವನ್ನು ಅಂತಿಮಗೊಳಿಸುತ್ತಿದ್ದಾರೆ.

ನಾನಿ ಅವರು ವಾಲ್ ಪೋಸ್ಟರ್ ಸಿನೆಮಾ ಸಂಸ್ಥೆಯ ಮೂಲಕ ಹೊಸ ರೀತಿಯ ಕಥೆಗಳನ್ನು ಹೇಳುತ್ತಾ ಬರುತ್ತಿದ್ದಾರೆ ಜೊತೆಗೆ ಪ್ರತಿಭಾನ್ವಿತ ನಿರ್ದೇಶಕರನ್ನು ಬೆಂಬಲಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಈಗಾಗಲೇ ‘ಹಿಟ್ 3’ ಮತ್ತು ಇತರೆ ಸಿನಿಮಾಗಳನ್ನು ನಿರ್ಮಿಸಿರುವ ನಾನಿ, ಮೆಗಾಸ್ಟಾರ್ ಚಿರಂಜೀವಿ ನಟನೆಯ ಹೊಸ ಸಿನಿಮಾ ಒಂದಕ್ಕೆ ಬಂಡವಾಳ ಹೂಡಿದ್ದಾರೆ. ರುಕ್ಮಿಣಿ ವಸಂತ್ ಅವರ ಈ ಸಿನಿಮಾದ ಚಿತ್ರೀಕರಣವು ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us