Rashmika Mandanna: ಸಾಲುಮರದ ತಿಮ್ಮಕ್ಕ ಬಗ್ಗೆ ಮಾತಾಡಲು ಒದ್ದಾಡಿದ್ದ ರಶ್ಮಿಕಾ; ನಂತರ ಆಗಿದ್ದೇನು?

Saalumarada Thimmakka: ಪರಿಸರಕ್ಕೆ ಗಣನೀಯ ಕೊಡುಗೆ ನೀಡಿದ ಸಾಲು ಮರದ ತಿಮ್ಮಕ್ಕ 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಸಿ ನೆಡುವ ಕಾರ್ಯಕ್ಕೆ ಅನೇಕ ವೇದಿಕೆಗಳಲ್ಲಿ ಗೌರವ ಸಂದಿತ್ತು. ಜೆಎಫ್‌ಡಬ್ಲ್ಯೂ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಿಮ್ಮಕ್ಕರ ಬಗ್ಗೆ ಅರಿವಿಲ್ಲದಿದ್ದಾಗ, ಪರಭಾಷಾ ನಟ ವಿವೇಕ್ ಅವರು ತಿಮ್ಮಕ್ಕರ ಸಾಧನೆಯನ್ನು ಕೊಂಡಾಡಿದ್ದರು.

Rashmika Mandanna: ಸಾಲುಮರದ ತಿಮ್ಮಕ್ಕ ಬಗ್ಗೆ ಮಾತಾಡಲು ಒದ್ದಾಡಿದ್ದ ರಶ್ಮಿಕಾ; ನಂತರ ಆಗಿದ್ದೇನು?
ಸಾಲುಮರದ ತಿಮ್ಮಕ್ಕ ಬಗ್ಗೆ ಮಾತಾಡಲು ಒದ್ದಾಡಿದ್ದ ರಶ್ಮಿಕಾ; ನಂತರ ಆಗಿದ್ದೇನು?
Updated By: Digi Tech Desk

Updated on: Nov 14, 2025 | 3:06 PM

ವೃಕ್ಷಮಾತೆ ಎಂದೇ ಜನಪ್ರಿಯತೆ ಪಡೆದಿದ್ದ ಸಾಲು ಮರದ ತಿಮ್ಮಕ್ಕ ಇಂದು (ನವೆಂಬರ್ 14) ನಿಧನರಾಗಿದ್ದಾರೆ. ಅವರಿಗೆ ಬರೋಬ್ಬರಿ 114 ವರ್ಷ ವಯಸ್ಸಾಗಿತ್ತು. 1911ರಲ್ಲಿ ಜನಿಸಿದ ಅವರು ಅದೆಷ್ಟೋ ಸಸಿಗಳನ್ನು ನೆಟ್ಟು ನಮ್ಮ ಪರಿಸರಕ್ಕೆ ಕೊಡುಗೆ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಪರಭಾಷೆಯ ವೇದಿಕೆ ಮೇಲೆ ಅವರನ್ನು ಗೌರವಿಸಲಾಗಿತ್ತು. ಒಮ್ಮೆ ತಮಿಳು ವೇದಿಕೆ ಮೇಲೆ ಸಾಲು ಮರದ ತಿಮ್ಮಕ್ಕ (Timmakka) ಅವರನ್ನು ಗೌರವಿಸಲಾಯಿತು. ಆಗ ನಡೆದ ಘಟನೆಯನ್ನು ನೆನಪಿಸಿಕೊಳ್ಳಲೇಬೇಕು.

ಜೆಎಫ್​ಡಬ್ಲ್ಯೂ ಅಚೀವರ್ಸ್ ಅವಾರ್ಡ್​ 2019 ವೇದಿಕೆ ಮೇಲೆ ಸಾಲು ಮರದ ತಿಮ್ಮಕ್ಕ ಅವರನ್ನು ಗೌರವಿಸಲಾಯಿತು. ಆಗ ತಿಮ್ಮಕ್ಕ ಅವರು ಕನ್ನಡದಲ್ಲಿ ಮಾತನಾಡಿ ತಮ್ಮ ಬಗ್ಗೆ ಹೇಳಿಕೊಂಡರು. ಈ ವೇಳೆ ಅದನ್ನು ತಮಿಳು ಅಥವಾ ಇಂಗ್ಲಿಷ್​ಗೆ ಟ್ರಾನ್ಸಲೇಟ್ ಮಾಡಬೇಕಿತ್ತು. ಆಗ ವೇದಿಕೆ ಮೇಲೆ ರಶ್ಮಿಕಾ ಅವರನ್ನು ಕರೆಸಲಾಯಿತು.

ವಿವೇಕ್ ವಿಡಿಯೋ

ತಿಮ್ಮಕ್ಕ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದರು. ರಶ್ಮಿಕಾ ಅವರು ಪ್ರತಿ ಶಬ್ದ ಕೇಳಿಸಿಕೊಂಡು ಟ್ರಾನ್ಸ್​ಲೇಟ್ ಮಾಡುತ್ತಿದ್ದರು. ಈ ಕೆಲಸ ಮಾಡಲು ಅವರು ಸಾಕಷ್ಟು ಒದ್ದಾಟ ನಡೆಸಿದರು. ಈ ವೇಳೆ ವೇದಿಕೆ ಮೇಲಿದ್ದ ತಮಿಳು ನಟ ವಿವೇಕ್ ಅವರು, ಸಾಲು ಮರದ ತಿಮ್ಮಕ್ಕ ಬಗ್ಗೆ, ಅವರ ಕಾರ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ತಿಮ್ಮಕ್ಕ ಮಾಡಿದ ಸಾಧನೆ ಅವರ ಬಾಯಲ್ಲೇ ಇತ್ತು.

ಇದನ್ನೂ ಓದಿ: ಟಾಕ್ಸಿಕ್ ಸಂಬಂಧದಲ್ಲಿ ಇದ್ದೆ ಎಂದ ರಶ್ಮಿಕಾ; ಸುಳ್ಳು ಎನ್ನಲು ಸಾಕ್ಷಿ ಸಮೇತ ಬಂದ ರಕ್ಷಿತ್ ಫ್ಯಾನ್ಸ್

ರಶ್ಮಿಕಾ ಮಂದಣ್ಣ ಕರ್ನಾಟಕದವರು. ಆದಾಗ್ಯೂ ಅವರಿಗೆ ತಿಮ್ಮಕ್ಕನ ಬಗ್ಗೆ ತಿಳಿದಿರಲೇ ಇಲ್ಲ. ಆದರೆ, ಪರಭಾಷಾ ನಟ ವಿವೇಕ್ ಮಾತ್ರ ತಿಮ್ಮಕ್ಕನ ಬಗ್ಗೆ ಮೊದಲೇ ತಿಳಿದುಕೊಂಡು ವಿವರಿಸಿದ್ದರು. ಆ ಬಳಿಕ ವಿವೇಕ್ ಅವರು ತಿಮ್ಮಕ್ಕ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಮೌನವಾಗಿ ನೋಡುತ್ತಿದ್ದರು. ಆ ಸಂದರ್ಭದಲ್ಲಿ ವಿವೇಕ್ ನಡೆದುಕೊಂಡ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 3:02 pm, Fri, 14 November 25