AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮರನ್’ ಸಿನಿಮಾ ಮೂಲಕ ಯಶಸ್ಸು ಕಂಡ ಸಾಯಿ ಪಲ್ಲವಿ, ಶಿವಕಾರ್ತಿಕೇಯನ್

ದಿವಂಗತ ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ಕಥೆಯನ್ನು ಆಧರಿಸಿ ‘ಅಮರನ್’ ಸಿನಿಮಾ ಸಿದ್ಧವಾಗಿದೆ. ಶಿವಕಾರ್ತಿಕೇಯನ್ ಅವರು ಮುಕುಂದ್ ಪಾತ್ರದಲ್ಲಿ ನಟಿಸಿದ್ದು, ಅವರ ಪತ್ನಿಯ ಪಾತ್ರವನ್ನು ಸಾಯಿ ಪಲ್ಲವಿ ಮಾಡಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ಅವರ ನಿರ್ದೇಶನದಲ್ಲಿ ಸಿದ್ಧವಾದ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

‘ಅಮರನ್’ ಸಿನಿಮಾ ಮೂಲಕ ಯಶಸ್ಸು ಕಂಡ ಸಾಯಿ ಪಲ್ಲವಿ, ಶಿವಕಾರ್ತಿಕೇಯನ್
ಶಿವಕಾರ್ತಿಕೇಯನ್, ಸಾಯಿ ಪಲ್ಲವಿ
ಮದನ್​ ಕುಮಾರ್​
|

Updated on: Nov 12, 2024 | 5:30 PM

Share

ನಟಿ ಸಾಯಿ ಪಲ್ಲವಿ ಅವರು ವಿಶೇಷವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ನಟ ಶಿವಕಾರ್ತಿಕೇಯನ್ ಕೂಡ ಭಿನ್ನವಾದ ಸ್ಕ್ರಿಪ್ಟ್​ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಅಮರನ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ‘ಅಮರನ್’ ಸಿನಿಮಾದ ಮೂಲಕ ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಅವರು ಗೆದ್ದು ಬೀಗಿದ್ದಾರೆ. ಉತ್ತಮ ವಿಮರ್ಶೆ ಪಡೆದಿದ್ದು ಮಾತ್ರವಲ್ಲದೇ ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ.

ಪ್ರೇಕ್ಷಕರಿಗೆ ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅವರ ಕಾಂಬಿನೇಷನ್​ ಇಷ್ಟವಾಗಿದೆ. ಅದರ ಪರಿಣಾಮವಾಗಿ ಹಲವು ಕಡೆಗಳಲ್ಲಿ ‘ಅಮರನ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್​ ಆಫೀಸ್ ಕಲೆಕ್ಷನ್​ನಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.

ಹುತಾತ್ಮ ಸೇನಾನಿಯ ಸ್ಫೂರ್ತಿದಾಯಕ ಕಥೆಯನ್ನು ವಿವರಿಸುವ ಈ ಬಯೋಪಿಕ್ ಈ ವರ್ಷ ಸಕ್ಸಸ್​ಫುಲ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಿದೆ. ತಮಿಳಿನ ಈ ಸಿನಿಮಾ ಅಕ್ಟೋಬರ್ 31ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತು. ಎಲ್ಲ ಭಾಷೆಯಲ್ಲೂ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ವಿಶೇಷವಾಗಿ ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ಅವರ ನಟನೆ ಪ್ರಶಂಸೆ ಗಳಿಸಿದೆ.

ಇದನ್ನೂ ಓದಿ: ಆ ಸಿನಿಮಾದಿಂದ ಹೊರ ಹೋಗಿ ಬಿಡುವ ಮನಸ್ಸಾಗಿತ್ತು: ಸಾಯಿ ಪಲ್ಲವಿ

ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ‘ಅಮರನ್’ ಸಿನಿಮಾವನ್ನು ನಿರ್ಮಾಣ ಮಾಡಿದೆ. ಶಿವಕಾರ್ತಿಕೇಯನ್ ಅವರು ಯೋಧನಾಗಿ ನಟಿಸಿದ್ದಾರೆ. ಪತ್ನಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.