ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ

Sai Pallavi-Prabhas:ದಕ್ಷಿಣದ ಕೆಲ ದೊಡ್ಡ ಸ್ಟಾರ್ ನಟರುಗಳಿಗೆ ಇರುವಂತೆಯೇ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ತಮ್ಮ ಅದ್ಭುತ ನಟನೆ, ಅಂದ ಮತ್ತು ನೃತ್ಯ ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸಾಯಿ ಪಲ್ಲವಿ, ಸಿನಿಮಾ ಮಾತ್ರವಲ್ಲದೆ ಪರದೆಯ ಹಿಂದೆಯೂ ತಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಯಾವುದೇ ಸಿನಿಮಾನಲ್ಲಿ ನಟಿಸಲು ಸಿನಿಮಾದ ಕತೆಯೇ ಮುಖ್ಯ, ಸ್ಟಾರ್ ನಟ ಇದ್ದಾರೆಂಬ ಕಾರಣಕ್ಕೆ ಸಿನಿಮಾನಲ್ಲಿ ನಟಿಸುವುದಿಲ್ಲ ಅವರು. ಇದೀಗ ಅವರು ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಪ್ರಭಾಸ್​​ಗೆ ಜೋಡಿ ಆಗಿ ಅಲ್ಲ.

ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ
Sai Pallavi Prabhas

Updated on: Jan 28, 2026 | 4:30 PM

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸ್ಟಾರ್ ನಟಿ. ದಕ್ಷಿಣದ ಕೆಲ ದೊಡ್ಡ ಸ್ಟಾರ್ ನಟರುಗಳಿಗೆ ಇರುವಂತೆಯೇ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ತಮ್ಮ ಅದ್ಭುತ ನಟನೆ, ಅಂದ ಮತ್ತು ನೃತ್ಯ ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸಾಯಿ ಪಲ್ಲವಿ, ಸಿನಿಮಾ ಮಾತ್ರವಲ್ಲದೆ ಪರದೆಯ ಹಿಂದೆಯೂ ತಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಯಾವುದೇ ಸಿನಿಮಾನಲ್ಲಿ ನಟಿಸಲು ಸಿನಿಮಾದ ಕತೆಯೇ ಮುಖ್ಯ, ಸ್ಟಾರ್ ನಟ ಇದ್ದಾರೆಂಬ ಕಾರಣಕ್ಕೆ ಸಿನಿಮಾನಲ್ಲಿ ನಟಿಸುವುದಿಲ್ಲ ಅವರು. ಇದೀಗ ಅವರು ಪ್ರಭಾಸ್ ಜೊತೆಗೆ ನಟಿಸುತ್ತಿದ್ದಾರೆ. ಆದರೆ ಪ್ರಭಾಸ್​​ಗೆ ಜೋಡಿ ಆಗಿ ಅಲ್ಲ.

ಹೌದು, ಪ್ರಭಾಸ್ ಜೊತೆಗೆ ನಾಯಕಿಯಾಗಿ ನಟಿಸಲು ಭಾರತದ ಟಾಪ್ ನಟಿಯರೇ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಸಾಯಿ ಪಲ್ಲವಿ ಆ ಸಾಲಿನಲ್ಲಿಲ್ಲ. ಆದರೂ ಅವರಿಗೆ ಪ್ರಭಾಸ್ ಸಿನಿಮಾನಲ್ಲಿ ನಟಿಸುವ ಅವಕಾಶ ದೊರೆತಿದೆ. ವಿಶೇಷವೆಂದರೆ ಇಬ್ಬರೂ ಒಟ್ಟಿಗೆ ನಟಿಸಲಿರುವ ಈ ಸಿನಿಮಾನಲ್ಲಿ ಪ್ರಭಾಸ್ ಹಾಗೂ ಸಾಯಿ ಪಲ್ಲವಿ ಜೋಡಿಯಾಗಿ ನಟಿಸುತ್ತಿಲ್ಲ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಗೊತ್ತೇ ಇದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಶೀಘ್ರ ಆರಂಭ ಆಗಲಿದೆ. ಆದರೆ ಸಿನಿಮಾದ ಮೊದಲ ಭಾಗದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ ಎರಡನೇ ಭಾಗದಿಂದ ಹೊರಗೆ ನಡೆದಿದ್ದಾರೆ, ಅಥವಾ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ. ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದ ಪಾತ್ರದಲ್ಲಿ ಈಗ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?

ಕೆಲಸದ ಅವಧಿಗೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾ ತಂಡದ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಇದೇ ಕಾರಣಕ್ಕೆ ದೀಪಿಕಾರನ್ನು ಚಿತ್ರತಂಡದಿಂದ ಕೈಬಿಡಲಾಗಿದೆ. ಇದೀಗ ದೀಪಿಕಾ ಪಡುಕೋಣೆ ಸ್ಥಾನವನ್ನು ಸಾಯಿ ಪಲ್ಲವಿ ತುಂಬಲಿದ್ದಾರೆ ಎನ್ನಲಾಗುತ್ತಿದೆ. ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನಿ ಈಗಾಗಲೇ ಸಾಯಿ ಪಲ್ಲವಿ ಜೊತೆ ಮಾತುಕತೆ ನಡೆಸಿದ್ದು ನಟಿ ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಇನ್ನೂ ಹಲವು ದೊಡ್ಡ ಕಲಾವಿದರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗ 2024ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಎರಡನೇ ಭಾಗದ ಚಿತ್ರೀಕರಣ ಇದೇ ವರ್ಷ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ