ಮೊದಲ ಕಾರು ಖರೀದಿಸಿ ಭಾವುಕರಾದ ನಟಿ ಶ್ರುತಿ, ಬೆಲೆ ಎಷ್ಟು?
Actress Shruti Prakash: ಬೆಳಗಾವಿ ಮೂಲದ ಶ್ರುತಿ ಪ್ರಕಾಶ್, ಹಿಂದಿ, ಕನ್ನಡ ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಇದೀಗ ಶ್ರುತಿ ಪ್ರಕಾಶ್ ಅವರು ಸ್ಕೋಡಾದ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಖರೀದಿ ಮಾಡಿರುವುದು ಸ್ಕೋಡಾದ ಸ್ಲಾವಿಯಾ ಮಾಂಟೆ ಕಾರ್ಲೊ ಹೆಸರಿನ 1.5 ಲೀಟರ್ ಎಂಜಿನ್ನ ಹೊಸ ಕಾರು. ಇದು ಮಿಡ್ ರೇಂಜ್ ಐಶಾರಾಮಿ ಕಾರಾಗಿದೆ. ಕಾರಿನ ಬೆಲೆ ಇನ್ನಿತರೆ ಮಾಹಿತಿಗಳು ಇಲ್ಲಿವೆ...

ಮೊದಲ ಕಾರು, ಮೊದಲ ಮನೆ ಬಹಲ ಅಮೂಲ್ಯವಾದುದು. ಇವುಗಳು ಸಾಕಾರಗೊಂಡಾಗ ಭಾವುಕರಾಗುವುದು ಸಹಜ. ಸ್ಟಾರ್ ನಟ-ನಟಿಯರಿಗೆ ಹೊಸ ಕಾರು, ಹೊಸ ಮನೆಗಳ ಖರೀದಿ ಎಂಬುದು ಬಹಳ ಸುಲಭ, ಅಷ್ಟೇನೂ ಮಹತ್ವದ ವಿಷಯ ಅಲ್ಲದೇ ಇರಬಹುದು ಆದರೆ ಚಿತ್ರರಂಗ, ಟಿವಿ ಲೋಕದಲ್ಲಿ ಬಹಳ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿರುವ ಹಲವಾರು ನಟ-ನಟಿಯರಿಗೆ ಈಗಲೂ ಮೊದಲ ಕಾರು ಬಹಳ ಅಮೂಲ್ಯ ಮತ್ತು ಬಹಳ ಭಾವುಕವಾದುದು. ಇದೀಗ ಕನ್ನಡದ ನಟಿ ಶ್ರುತಿ ಪ್ರಕಾಶ್ ಹೊಸ ಕಾರು ಖರೀದಿ ಮಾಡಿದ್ದು, ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಬೆಳಗಾವಿ ಮೂಲದ ಶ್ರುತಿ ಪ್ರಕಾಶ್, ಹಿಂದಿ, ಕನ್ನಡ ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಇದೀಗ ಶ್ರುತಿ ಪ್ರಕಾಶ್ ಅವರು ಸ್ಕೋಡಾದ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಖರೀದಿ ಮಾಡಿರುವುದು ಸ್ಕೋಡಾದ ಸ್ಲಾವಿಯಾ ಮಾಂಟೆ ಕಾರ್ಲೊ ಹೆಸರಿನ 1.5 ಲೀಟರ್ ಎಂಜಿನ್ನ ಹೊಸ ಕಾರು. ಇದು ಮಿಡ್ ರೇಂಜ್ ಐಶಾರಾಮಿ ಕಾರಾಗಿದೆ.
ಕಾರು ಖರೀದಿ ವಿಡಿಯೋ ಹಂಚಿಕೊಂಡಿರುವ ಶ್ರುತಿ ಪ್ರಕಾಶ್, ‘10 ವರ್ಷ ಬಾಂಬೆಯಲ್ಲಿ ಕಳೆದಿರುವ ಸಮಯ ನನಗೆ ಒಳ್ಳೆಯ ತಾಳ್ಮೆ, ಸಹಿಷ್ಣುತೆ, ನಂಬಿಕೆ, ಧೈರ್ಯವನ್ನು ಕಲಿಸಿಕೊಟ್ಟಿದೆ. ನೀಡಿದ ಪ್ರತಿ ಆಡಿಷನ್, ಪ್ರತಿ ಕಾಯುವಿಕೆ, ನಾನು ಕೆಲಸವಿಲ್ಲದೆ ಕಳೆದ ಪ್ರತಿ ದಿನವೂ ನನ್ನನ್ನು ಇಲ್ಲಿಗೆ, ಈ ಸ್ಥಿತಿಗೆ ಕರೆದು ತಂದಿವೆ. ನಿನ್ನಿಂದ ಸಾಧ್ಯವಿಲ್ಲ ಎಂದು ಜಗತ್ತು ಹೇಳಿದಾಗಲೂ, ನಾನು ಮಾಡಬಹುದು ಎಂದು ಹೇಳುವ ಒಳಗಿನ ಸಣ್ಣ ಧ್ವನಿಯನ್ನು ಕಾಪಾಡಿಕೊಂಡಿದ್ದೆ. ಭಯಕ್ಕಿಂತ ನಂಬಿಕೆಯನ್ನು ಆರಿಸಿಕೊಂಡಿದ್ದಕ್ಕಾಗಿ ದೇವರಿಗೆ, ನನ್ನ ಹೆತ್ತವರಿಗೆ, ವಿಶ್ವಕ್ಕೆ ಮತ್ತು ನಾನು ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ ಶ್ರುತಿ ಪ್ರಕಾಶ್.
View this post on Instagram
ನಟಿ ಶ್ರುತಿ ಪ್ರಕಾಶ್ ಖರೀದಿ ಮಾಡಿರುವ ಸ್ಕೋಡಾ ಮಾಂಟೆ ಕಾರ್ಲೊ 1.5 ಡಿಜಿಐ ಕಾರು ಸುಮಾರು 21 ರಿಂದ 22 ಲಕ್ಷ ರೂಪಾಯಿ ಬೆಲೆಯದ್ದಾಗಿದೆ. ಅತ್ಯುತ್ತಮ ಪರ್ಮಾಮೆನ್ಸ್ನ ಜೊತೆಗೆ ಐಶಾರಾಮಿ ಅನುಭೂತಿಯನ್ನು ಈ ಕಾರು ನೀಡುತ್ತದೆ. ಕಪ್ಪು ಬಣ್ಣದ ಕಾರನ್ನು ನಟಿ ಖರೀದಿ ಮಾಡಿದ್ದು, ಶೋರೂಂನಲ್ಲಿ ತಾವೇ ಪೂಜೆ ಮಾಡಿ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರೆ ನಟಿ.
ಬೆಳಗಾವಿಯ ಮೂಲದ ಶ್ರುತಿ ಪ್ರಕಾಶ್ ಅವರು ಕೆಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಬಿಗ್ಬಾಸ್ ಕನ್ನಡ ಸೀಸನ್ 05 ರಲ್ಲಿ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




