ಸಾಯಿ ಪಲ್ಲವಿ ಜನ್ಮದಿನ: ನಟಿಯ ಆಸ್ತಿ ಎಷ್ಟು? ಎಷ್ಟೊಂದು ಓದಿಕೊಂಡಿದ್ದಾರೆ ನೋಡಿ

ಸಾಯಿ ಪಲ್ಲವಿ ಅವರ 33ನೇ ಜನ್ಮದಿನದಂದು, ಅವರ ಯಶಸ್ವಿ ವೃತ್ತಿಜೀವನ, ಆಸ್ತಿ ಮತ್ತು ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಳ್ಳೋಣ. ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅವರು ಓದಿದ್ದರು. ಅವರು ಚಲನಚಿತ್ರರಂಗದಲ್ಲಿ ತಮ್ಮನ್ನು ಸ್ಥಾಪಿಸಿಕೊಂಡಿದ್ದಾರೆ. 'ಪ್ರೇಮಂ', 'ಫಿದಾ', 'ಶ್ಯಾಮ ಸಿಂಘ ರಾಯ್' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಾಯಿ ಪಲ್ಲವಿ ಜನ್ಮದಿನ: ನಟಿಯ ಆಸ್ತಿ ಎಷ್ಟು? ಎಷ್ಟೊಂದು ಓದಿಕೊಂಡಿದ್ದಾರೆ ನೋಡಿ
ಸಾಯಿ ಪಲ್ಲವಿ
Edited By:

Updated on: May 09, 2025 | 9:01 AM

ನಟಿ ಸಾಯಿ ಪಲ್ಲವಿ (Sai Pallavi) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ಇಂದು (ಮೇ 9) ಜನ್ಮದಿನ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ. ಸಾಯಿ ಪಲ್ಲವಿ ಅವರು ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದವರು. ಅವರಿಗೆ ಸೈಮಾ ಅವಾರ್ಡ್ಸ್, ಫಿಲ್ಮ್​ಫೇರ್ ಅವಾರ್ಡ್​ಗಳು ಸಿಕ್ಕಿವೆ. ಅವರಿಗೆ ಈಗ 33ನೇ ವರ್ಷದ ಬರ್ತ್​ಡೇ. ಅವರ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳೋಣ.

ತಮಿಳುನಾಡಿನ ಕೊಯಿಮತ್ತೂರಿನ ಬಡಗ ಕುಟುಂಬದಲ್ಲಿ ಸಾಯಿ ಪಲ್ಲವಿ ಜನಿಸಿದರು. ಕನ್ನಡ ಹಾಗೂ ತಮಿಳು ಮಿಶ್ರಿತವಾಗಿ ಬಡಗ ಭಾಷೆ ಇದೆ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕೊಯಿಮತ್ತೂರಿನಲ್ಲಿ ಪಡೆದರು. ಜಾರ್ಜಿಯಾ ವಿಶ್ವ ವಿದ್ಯಾಲಯದಲ್ಲಿ ಅವರು ವೈದ್ಯಕೀಯ ಶಿಕ್ಷಣ ಪಡೆದರು. ಆದರೆ, ಅವರು ಮೆಡಿಕಲ್ ಪ್ರ್ಯಾಕ್ಟಿಸ್ ಮಾಡಿಲ್ಲ.

2014ರಲ್ಲಿ ರಿಲೀಸ್ ಆದ ಮಲಯಾಳಂನ ‘ಪ್ರೇಮಂ’ ಸಿನಿಮಾದಲ್ಲಿ ಮಲರ್ ಟೀಚರ್ ಪಾತ್ರ ಮಾಡಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದು ಸಾಯಿ ಪಲ್ಲವಿ ಅವರ ಜೀವನ ಬದಲಿಸಿತು. ಅವರಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿ ಕೊಟ್ಟಿತು. ಅವರ ಆಸ್ತಿ 47 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಇದನ್ನೂ ಓದಿ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ
ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ಸಾಯಿ ಪಲ್ಲವಿ ಅವರು ಎಂದಿಗೂ ಮೇಕಪ್ ಮಾಡುವದೇ ಇಲ್ಲ. ಇದು ಅವರ ಹೆಚ್ಚುಗಾರಿಕೆ ಆಗಿದೆ. ‘ಕಾಳಿ’, ‘ಫಿದಾ’, ‘ಅಧಿರನ್’, ‘ಲವ್​ ಸ್ಟೋರಿ’ ಅವರ ನಟನೆಯ ಉತ್ತಮ ಸಿನಿಮಾಗಳು. ಇತ್ತೀಚೆಗೆ ರಿಲೀಸ್ ಆದ ಅವರ ನಟನೆಯ ‘ತಂಡೇಲ್’ ಹಾಗೂ ‘ಅಮರನ್’ ಅವರಿಗೆ ಬ್ಯಾಕ್ ಟು ಬ್ಯಾಕ್ ಹಿಟ್​ಗಳನ್ನು ನೀಡಿತು. ‘ಶ್ಯಾಮ ಸಿಂಘ ರಾಯ್’ ಚಿತ್ರ ಕೂಡ ಸೂಪರ್ ಹಿಟ್ ಆಯಿತು.

ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರಾಕರಿಸಿದ್ದೇಕೆ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಸಿನಿಮಾ ಆಯ್ಕೆ ಭಿನ್ನವಾಗಿದೆ. ಅವರು ಈ ಕಾರಣಕ್ಕೆ ಹೆಚ್ಚು ಗಮನ ಸೆಳೆಯುತ್ತಾರೆ. ಅವರು ಬಾಲಿವುಡ್​ನಲ್ಲಿ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರ ಮಾಡಿದ್ದಾರೆ. ರಣಬೀರ್ ಕಪೂರ್ ಅವರು ಈ ಚಿತ್ರಕ್ಕೆ ಹೀರೋ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಇದು ಅವರ ಮೊದಲ ಹಿಂದಿ ಸಿನಿಮಾ. ಆಮಿರ್ ಖಾನ್ ನಿರ್ಮಾಣದ ‘ಏಕ್ ದಿನ್’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.