ನಾಗ ಚೈತನ್ಯ ಜೊತೆ ನಟಿಸೋಕೆ ಸಾಯಿ ಪಲ್ಲವಿ-ಕೀರ್ತಿ ಸುರೇಶ್ ಮಧ್ಯೆ ಮೂಡಿದೆ ಸ್ಪರ್ಧೆ
ಸಾಯಿ ಪಲ್ಲವಿ ನಟನೆಯ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ. ಅವರು ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಚಂದು ಅವರು ನಿರ್ಧಾರ. ಆದರೆ, ತಂಡದ ಇತರರು ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಾಗ ಚೈತನ್ಯ (Naga Chaitanya) ಅವರು ಟಾಲಿವುಡ್ನ ಬೇಡಿಕೆಯ ಹೀರೋ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಸದ್ಯ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ ‘NC23’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಚಂದೂ ಮೊಂಡೇಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರದ ನಾಯಕಿಯ ಆಯ್ಕೆಯಲ್ಲಿ ನಿರ್ದೇಶಕರು ತೊಡಗಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅಥವಾ ಸಾಯಿ ಪಲ್ಲವಿ (Sai Pallavi) ಅವರನ್ನು ಫೈನಲ್ ಮಾಡುವ ಸಾಧ್ಯತೆ ಇದೆಯಂತೆ.
ಸಾಯಿ ಪಲ್ಲವಿ ನಟನೆಯ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ. ಅವರು ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಚಂದು ಅವರು ನಿರ್ಧಾರ. ಆದರೆ, ತಂಡದ ಇತರರು ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇಬ್ಬರಲ್ಲಿ ಯಾರೇ ಆಯ್ಕೆ ಆದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಅನ್ನೋದು ಹಲವರ ಅಭಿಪ್ರಾಯ.
ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಅವರು ಈ ಮೊದಲು ‘ಲವ್ ಸ್ಟೋರಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಆದರೆ, ಇವರ ಕಾಂಬಿನೇಷನ್ನ ಜನರು ಹೆಚ್ಚು ಇಷ್ಟಪಟ್ಟರು. ಇನ್ನು ನಾಗ ಚೈತನ್ಯ ಹಾಗೂ ಕೀರ್ತಿ ಸುರೇಶ್ ‘ಮಹಾನಟಿ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ತಯಾರಿ, ಮೀನುಗಾರರೊಟ್ಟಿಗೆ ಸಮಯ ಕಳೆದ ನಾಗ ಚೈತನ್ಯ
ನಾಗ ಚೈತನ್ಯ ಅವರು ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಈ ಕಾರಣಕ್ಕೆ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ‘ಎನ್ಸಿ23’ ಚಿತ್ರದಿಂದ ಅವರು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ, ತಾಂತ್ರಿಕ ವರ್ಗದಲ್ಲಿ ಯಾರಿರುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




