Salman Khan: ‘ಕಿಕ್ 2’ ಚಿತ್ರಕ್ಕೆ ನಡೆದಿದೆ ಸಿದ್ಧತೆ; ಸೋಲಿನ ಸುಳಿಯಲ್ಲಿರುವ ಸಲ್ಲುಗೆ ಸಹಾಯ ಮಾಡುತ್ತಾ ಸೀಕ್ವೆಲ್?

‘ಕಿಕ್’ ಸಿನಿಮಾ ಮೂಲಕ ನಿರ್ಮಾಪಕ ಸಾಜಿದ್ ನಿರ್ದೇಶಕರಾಗಿ ಬಡ್ತಿ ಪಡೆದರು. ಈಗ 10 ವರ್ಷಗಳ ಬಳಿಕ ಇದಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಈ ಬಗ್ಗೆ ಸಾಜಿದ್ ಮಾಹಿತಿ ನೀಡಿದ್ದಾರೆ.

Salman Khan: ‘ಕಿಕ್ 2’ ಚಿತ್ರಕ್ಕೆ ನಡೆದಿದೆ ಸಿದ್ಧತೆ; ಸೋಲಿನ ಸುಳಿಯಲ್ಲಿರುವ ಸಲ್ಲುಗೆ ಸಹಾಯ ಮಾಡುತ್ತಾ ಸೀಕ್ವೆಲ್?
Follow us
ರಾಜೇಶ್ ದುಗ್ಗುಮನೆ
|

Updated on: Jul 14, 2023 | 2:39 PM

ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಮಿನಿಮಮ್ ಬಿಸ್ನೆಸ್ ಮಾಡುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಅದು ಬದಲಾಗಿದೆ. ಸಲ್ಮಾನ್ ಖಾನ್ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಸದ್ಯ ‘ಟೈಗರ್ 3’ ಚಿತ್ರದ (Tiger 3) ಮೂಲಕ ಅವರು ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಮಧ್ಯೆ ‘ಕಿಕ್​ 2’ ಚಿತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಿರ್ದೇಶಕ ಹಾಗೂ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಅವರಿಂದ ಘೋಷಣೆ ಆಗಿದೆ.

‘ಕಿಕ್’ ಸಿನಿಮಾ ಮೂಲಕ ನಿರ್ಮಾಪಕ ಸಾಜಿದ್ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ನಟಿಸಿದ್ದರು. 2014ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈಗ 10 ವರ್ಷಗಳ ಬಳಿಕ ಇದಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಈ ಬಗ್ಗೆ ಸಾಜಿದ್ ಮಾಹಿತಿ ನೀಡಿದ್ದಾರೆ.

‘ಕಿಕ್ 2 ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣವಾಗಿ ರೆಡಿ ಇದೆ. ಆದರೆ ಇದಕ್ಕೆ ಮತ್ತಷ್ಟು ಸಮಯ ಬೇಕು. ಜನರು ಥಿಯೇಟರ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೋಕೆ ಆರಂಭಿಸಿದ ಮೇಲೆ ನಾವು ಈ ಸಿನಿಮಾ ಮಾಡುತ್ತೇವೆ’ ಎಂದು ಸಾಜಿದ್ ಹೇಳಿದ್ದಾರೆ.

ಕೊವಿಡ್ ಕಾಣಿಸಿಕೊಂಡ ಬಳಿಕ ಜನರು ಒಟಿಟಿಯತ್ತ ಹೆಚ್ಚು ವಾಲಿದರು. ಸ್ಟಾರ್ ಸಿನಿಮಾಗಳ ಬಗ್ಗೆ ಸ್ವಲ್ಪ ನೆಗೆಟಿವ್ ವಿಮರ್ಶೆ ಸಿಕ್ಕರೂ ಜನರು ಥಿಯೇಟರ್​ಗೆ ಹೋಗದೆ ಒಟಿಟಿಯಲ್ಲಿ ಸಿನಿಮಾ ಬರಲಿ ಎಂದು ಕಾದು ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಟ್ರೆಂಡ್ ಬದಲಾಗುವುದು ಸದ್ಯಕ್ಕಂತೂ ಅನುಮಾನ. ಹೀಗಿರುವಾಗ ‘ಕಿಕ್ 2’ ಸಿನಿಮಾ ಯಾವಾಗ ಸಿದ್ಧವಾಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ

‘ಸಾಜಿದ್’ ಅವರು ‘ಕಿಕ್’ ಬಳಿಕ ‘ಹೌಸ್​ಫುಲ್ 5’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಸೇರಿ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಹೌಸ್​ಫುಲ್’ ಫ್ರಾಂಚೈಸ್​ನ ಐದನೇ ಸಿನಿಮಾ ಇದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ