ಕ್ರಿಸ್​ಮಸ್​ ದಿನ ‘ಸಲಾರ್’ ಸಿನಿಮಾ ಅಬ್ಬರ; 500 ಕೋಟಿ ರೂಪಾಯಿ ದಾಟಲಿದೆ ಕಲೆಕ್ಷನ್?

Salaar Movie collection: ಈ ಸಿನಿಮಾ ಸೋಮವಾರ ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ಆಗಿದೆ.  

ಕ್ರಿಸ್​ಮಸ್​ ದಿನ ‘ಸಲಾರ್’ ಸಿನಿಮಾ ಅಬ್ಬರ; 500 ಕೋಟಿ ರೂಪಾಯಿ ದಾಟಲಿದೆ ಕಲೆಕ್ಷನ್?
ಸಲಾರ್ ಸಿನಿಮಾ

Updated on: Dec 26, 2023 | 7:04 AM

‘ಸಲಾರ್’ ಸಿನಿಮಾ (Salaar Movie) ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಭಾರತದಲ್ಲಿ 90 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಈಗ ಈ ಚಿತ್ರದ ಗಳಿಕೆ 250 ಕೋಟಿ ರೂಪಾಯಿ ಮೇಲಾಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್ 500 ಕೋಟಿ ರೂಪಾಯಿ ಸಮೀಪಿಸಿದೆ. ವಾರದ ದಿನಗಳಲ್ಲಿ ‘ಸಲಾರ್’ ಚಿತ್ರವನ್ನು ಎಷ್ಟು ಜನರು ವೀಕ್ಷಿಸುತ್ತಾರೆ ಎನ್ನುವ ಆಧಾರದ ಈ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರುತ್ತದೆಯೋ ಅಥವಾ ಇಲ್ಲವೋ ಅನ್ನೋದು ನಿರ್ಧಾರ ಆಗಲಿದೆ.

‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಕೆಜಿಎಫ್ 2’ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪ್ರಭಾಸ್, ಪ್ರಶಾಂತ್ ನೀಲ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಸೋಮವಾರ (ಡಿಸೆಂಬರ್ 25) ಭಾರತದಲ್ಲಿ 41 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ ಆಗಿದೆ.

ಹಿಂದಿ ಭಾಗದಲ್ಲಿ ‘ಸಲಾರ್’ ಸಿನಿಮಾ ಅಂದುಕೊಂಡಷ್ಟು ಗಳಿಕೆ ಮಾಡುತ್ತಿಲ್ಲ. ‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ 50+ ಕೋಟಿ ರೂಪಾಯಿ ಕಲೆ ಹಾಕಿತ್ತು. ಆದರೆ, ‘ಸಲಾರ್’ ಹಿಂದಿ ಬೆಲ್ಟ್​ನಲ್ಲಿ ಮೊದಲ ದಿನ ಕಲೆ ಹಾಕಿದ್ದು ಕೇವಲ 15 ಕೋಟಿ ರೂಪಾಯಿ. ಎರಡನೇ ದಿನ ಈ ಗಳಿಕೆ 16 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಮೂರನೇ ದಿನ 21 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆ ನಿಧಾನವಾಗಿ ಹೆಚ್ಚುತ್ತಿದೆಯಾದರೂ ‘ಕೆಜಿಎಫ್ 2’ ಚಿತ್ರದಷ್ಟು ಕಲೆಕ್ಷನ್ ಆಗುತ್ತಿಲ್ಲ. ಹಿಂದಿ ವಿಭಾಗದಲ್ಲಿ ಸರಿಯಾದ ಪ್ರಚಾರ ನೀಡದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಸಲಾರ್’ ಸಿನಿಮಾದಲ್ಲಿ ಹೈಲೈಟ್ ಆದ ಈ ಪಾತ್ರ ಮಾಡಿದವರು ಯಾರು?

‘ಸಲಾರ್’ ಸಿನಿಮಾ ‘ಉಗ್ರಂ’ ಸಿನಿಮಾದ ರಿಮೇಕ್ ಎಂದು ಕೆಲವರು ಟೀಕೆ ಮಾಡಿದರು. ‘ಕೆಜಿಎಫ್ 2’ ಮೇಕಿಂಗ್​ಗೆ ಹೋಲಿಕೆ ಇದೆ ಎಂದು ಕೆಲವರು ಟೀಕಿಸಿದರು. ಈ ಟೀಕೆಗಳಿಗೆ ಚಿತ್ರತಂಡ ಕಿವಿಕೊಟ್ಟಿಲ್ಲ. ಈ ಚಿತ್ರದಿಂದ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ದೊಡ್ಡ ಗೆಲುವು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:04 am, Tue, 26 December 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us