‘ಸಲಾರ್’ ಸಿನಿಮಾ (Salaar Movie) ರಿಲೀಸ್ಗೆ ಇನ್ನು ಬಾಕಿ ಉಳಿದಿರುವುದು ಕೇವಲ ಒಂದು ವಾರ ಮಾತ್ರ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿ ದೊಡ್ಡ ಪಾತ್ರವರ್ಗ ಇದೆ. ತಾಂತ್ರಿಕ ವರ್ಗದಲ್ಲಿ ಕನ್ನಡದ ಅನೇಕರಿದ್ದಾರೆ. ಈ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಬಗ್ಗೆ ಮಾಹಿತಿ ನೀಡಲಾಗಿದೆ. ಕರ್ನಾಟಕದಲ್ಲಿ ಇಂದಿನಿಂದ (ಡಿಸೆಂಬರ್ 15) ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ.
‘ಕೆಜಿಎಫ್ 2’ ಬಳಿಕ ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ‘ಸಲಾರ್’ಗೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹೀಗಾಗಿ, ಚಿತ್ರದಲ್ಲಿ ಭರ್ಜರಿ ವೈಲೆನ್ಸ್ ಇದೆ ಅನ್ನೋದು ಸ್ಪಷ್ಟವಾಗಿದೆ. ಈ ಚಿತ್ರಕ್ಕೆ ಒಂದು ವಾರ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ.
ಕರ್ನಾಟಕದಲ್ಲಿ ‘ಸಲಾರ್’ ಚಿತ್ರದ ಅಡ್ವಾನ್ಸ್ ಬುಕಿಂಗ್ ಇಂದು ಸಂಜೆ 6:49ಕ್ಕೆ ಆರಂಭ ಆಗಲಿದೆ. ಕೆಲವೇ ಸ್ಕ್ರೀನ್ಗಳಿಗೆ ಮಾತ್ರ ಬುಕಿಂಗ್ ಓಪನ್ ಆಗಲಿದೆ. ಮುಂದಿನ ದಿನಗಳಲ್ಲಿ ಪರದೆ ಹೆಚ್ಚಿಸಲು ನಿರ್ಧರಿಸಲಾಗಿದೆ. ‘ಸಲಾರ್’ ಚಿತ್ರಕ್ಕೆ ಮೊದಲ ದಿನ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಶೋಗಳು ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
#SalaarCeaseFire 𝐊𝐚𝐫𝐧𝐚𝐭𝐚𝐤𝐚 Bookings Open From Today at 6:49 PM in Limited Screens 💥#SalaarCeaseFireOnDec22 ⚡️#Salaar #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/Hle5rxTRxr
— Hombale Films (@hombalefilms) December 15, 2023
ಇದನ್ನೂ ಓದಿ: ‘ಸಲಾರ್ನಲ್ಲಿ ಯಶ್ ಜೊತೆ ಕೆಲಸ ಮಾಡಿದ್ದು ಖುಷಿ ಇದೆ’; ಬಾಯ್ತಪ್ಪಿ ಸತ್ಯ ಹೇಳಿದ್ರಾ ‘ಸಲಾರ್’ ಗಾಯಕಿ?
‘ಅನಿಮಲ್’ ಸಿನಿಮಾ ಇನ್ನೂ ಅಬ್ಬರಿಸುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗಲಿದೆ. ಡಿಸೆಂಬರ್ 29ರಂದು ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆ ಆಗಲಿದೆ. ಈ ಕಾರಣಕ್ಕೆ ‘ಸಲಾರ್’ ಚಿತ್ರಕ್ಕೆ ಸ್ಪರ್ಧೆ ಜೋರಾಗಿಯೇ ಇದೆ. ಇವುಗಳ ಮಧ್ಯೆ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ