AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ನಲ್ಲಿ ಪೂರ್ಣಗೊಳ್ಳಲಿದೆ ಸಲಾರ್ ಶೂಟಿಂಗ್; ವರ್ಷಾಂತ್ಯಕ್ಕೆ ಬರಲಿದೆ ಪ್ರಶಾಂತ್ ನೀಲ್ ಸಿನಿಮಾ?

‘ಸಲಾರ್’ ಸಿನಿಮಾ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಈ ಚಿತ್ರ ವಿಳಂಬ ಆಗೋಕೆ ಅನೇಕ ಕಾರಣಗಳಿವೆ. ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಕೆಲಸಗಳಲ್ಲಿ ಬ್ಯುಸಿ ಆದರು. ಇದರಿಂದ ‘ಸಲಾರ್​’ ಬಗ್ಗೆ ಗಮನ ಹರಿಸೋಕೆ ಸಾಧ್ಯವಾಗಿರಲಿಲ್ಲ.

ಏಪ್ರಿಲ್​ನಲ್ಲಿ ಪೂರ್ಣಗೊಳ್ಳಲಿದೆ ಸಲಾರ್ ಶೂಟಿಂಗ್; ವರ್ಷಾಂತ್ಯಕ್ಕೆ ಬರಲಿದೆ ಪ್ರಶಾಂತ್ ನೀಲ್ ಸಿನಿಮಾ?
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: Mar 24, 2023 | 6:30 AM

Share

ಪ್ರಶಾಂತ್ ನೀಲ್ (Prashanth Neel) ಅವರು ಸದ್ಯ ಟಾಲಿವುಡ್ ಅಂಗಳದಲ್ಲಿ ಬ್ಯುಸಿ ಇದ್ದಾರೆ. ಅವರ ನಿರ್ದೇಶನದ ‘ಸಲಾರ್’ ಸಿನಿಮಾ (Salaar Movie) ಶೂಟಿಂಗ್ ಭರದಿಂದ ಸಾಗುತ್ತಿದೆ. ‘ಕೆಜಿಎಫ್ 2’ ಹಿಟ್ ಆದ ಬಳಿಕ ಅವರ ಖ್ಯಾತಿ ಹೆಚ್ಚಿದ್ದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. ಈಗ ‘ಸಲಾರ್’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ. ಏಪ್ರಿಲ್ ವೇಳೆಗೆ ‘ಸಲಾರ್​’ ಶೂಟಿಂಗ್ ಸಂಪೂರ್ಣವಾಗಿ ಮುಗಿಯಲಿದೆ. ಕುಂಬಳಕಾಯಿ ಒಡೆದ ನಂತರದಲ್ಲಿ ಭರದಿಂದ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ನಡೆಯಲಿವೆ.

‘ಸಲಾರ್’ ಸಿನಿಮಾ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಈ ಚಿತ್ರ ವಿಳಂಬ ಆಗೋಕೆ ಅನೇಕ ಕಾರಣಗಳಿವೆ. ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಕೆಲಸಗಳಲ್ಲಿ ಬ್ಯುಸಿ ಆದರು. ಇದರಿಂದ ‘ಸಲಾರ್​’ ಬಗ್ಗೆ ಗಮನ ಹರಿಸೋಕೆ ಸಾಧ್ಯವಾಗಿರಲಿಲ್ಲ. ‘ಕೆಜಿಎಫ್ 2’ ರಿಲೀಸ್ ಆದ ಬಳಿಕ ಅವರು ಮತ್ತೆ ‘ಸಲಾರ್​’ ಕೆಲಸಗಳಲ್ಲಿ ಭಾಗಿ ಆಗಬೇಕು ಎನ್ನುವಾಗ ಪ್ರಭಾಸ್​ಗೆ ಸೆಟ್​ನಲ್ಲಿ ಗಾಯ ಆಯಿತು. ಇದರಿಂದ ಅವರು ವಿಶ್ರಾಂತಿ ಪಡೆಯಬೇಕಾಯಿತು. ಅವರು ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದಲೂ ‘ಸಲಾರ್’ ಕೆಲಸ ವಿಳಂಬ ಆಯಿತು.

ಇದನ್ನೂ ಓದಿ: Shruti Haasan: ‘ಸಲಾರ್’ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ನಟಿ ಶ್ರುತಿ ಹಾಸನ್ ಏನಂದ್ರು ನೋಡಿ

ಇತ್ತೀಚೆಗೆ ಪ್ರಶಾಂತ್ ನೀಲ್ ಅವರು ‘ಸಲಾರ್​’ ಕೆಲಸದ ವೇಗ ಹೆಚ್ಚಿಸಿದ್ದಾರೆ. ಏಪ್ರಿಲ್ ವೇಳೆಗೆ ‘ಸಲಾರ್’ ಚಿತ್ರದ ಕೆಲಸಗಳು ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ನಾಲ್ಕೈದು ತಿಂಗಳು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದರೆ, ಆಗಸ್ಟ್ ವೇಳೆಗೆ ಸಿನಿಮಾ ಸಂಪೂರ್ಣವಾಗಿ ರೆಡಿ ಆಗಲಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Salaar: ‘ಸಲಾರ್’​ ಚಿತ್ರದಲ್ಲಿ ಪ್ರಭಾಸ್​ ಅವರೊಂದಿಗಿನ ಒಡನಾಟ ಬಿಚ್ಚಿಟ್ಟ ನಟ ಪ್ರಮೋದ್  

‘ಸಲಾರ್​’ ಸಿನಿಮಾದಲ್ಲಿ ಬಹುತೇಕ ತಂತ್ರಜ್ಞರು ‘ಕೆಜಿಎಫ್ 2’ ತಂಡದವರೇ ಇದ್ದಾರೆ. ಪ್ರಭಾಸ್​ಗೆ ಜೊತೆಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಪೃಥ್ವಿರಾಜ್​ ಸುಕುಮಾರನ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ರವಿ ಬಸ್ರೂರ್ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 200 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇತ್ತೀಚೆಗೆ ಶ್ರುತಿ ಹಾಸನ್ ಅವರು ತಮ್ಮ ಭಾಗದ ಶೂಟಿಂಗ್ ಮುಗಿಸಿದ್ದರು. ಈ ವೇಳೆ ಅವರು ಸಂತಸ ವ್ಯಕ್ತಪಡಿಸಿದ್ದರು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಅವರಲ್ಲಿ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ