
‘ಸಲಾರ್’ ಸಿನಿಮಾ (Salaar Movie) ರಿಲೀಸ್ ಡಿಸೆಂಬರ್ 1ರಂದು ಆಗಲಿದೆ ಎಂದು ವರದಿ ಆಗಿತ್ತು. ತಂಡದ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಿರಲಿಲ್ಲ. ಈ ಮಧ್ಯೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಲಿದೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ, ಹಾಗಾಗುತ್ತಿಲ್ಲ. ಡಿಸೆಂಬರ್ 1ರಂದು ‘ಸಲಾರ್’ ಟ್ರೇಲರ್ ರಿಲೀಸ್ ಆಗಲಿದ್ದು, ಡಿಸೆಂಬರ್ 22ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸದ್ಯ ಚಿತ್ರತಂಡ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್’ಗೂ ಕನೆಕ್ಷನ್ ಇದೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಟ್ರೇಲರ್ನಲ್ಲಿ ಈ ಬಗ್ಗೆ ಮಾಹಿತಿ ಸಿಗೋ ನಿರೀಕ್ಷೆ ಇದೆ. ‘ಸಲಾರ್’ ಚಿತ್ರದಲ್ಲಿ ಯಶ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ನಿಜವಾಗಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.
ಐದು ಭಾಷೆಯಲ್ಲಿ ಒಂದೇ ಟ್ರೇಲರ್ ಬಿಡುಗಡೆ ಮಾಡಲು ತಂಡ ಪ್ಲಾನ್ ಮಾಡಿದೆ. ಡೈಲಾಗ್ ಇಲ್ಲದೆ ಕೇವಲ ಬಿಜಿಎಂ ಮೂಲಕ ದೃಶ್ಯಗಳನ್ನು ತೋರಿಸಬಹುದು ಅಥವಾ ಇಂಗ್ಲಿಷ್ ಡೈಲಾಗ್ ಮೂಲಕ ಟ್ರೇಲರ್ನ ಪ್ರಸ್ತುತಪಡಿಸಬಹುದು ಎಂದು ಹೇಳಲಾಗುತ್ತಿದೆ. ಐದು ಭಾಷೆಗಳಲ್ಲಿ ಒಂದೇ ಟ್ರೇಲರ್ ರಿಲೀಸ್ ಆದರೆ ಯೂಟ್ಯೂಬ್ನಲ್ಲಿ ಹಲವು ದಾಖಲೆ ನಿರ್ಮಾಣ ಆಗಬಹುದು.
‘ಸಲಾರ್’ ಸಿನಿಮಾ ಪೋಸ್ಟರ್ ಹಾಗೂ ಟೀಸರ್ ಗಮನ ಸೆಳೆಯುತ್ತಿದೆ. ಇದು ಪ್ರಶಾಂತ್ ನೀಲ್ ಯೂನಿವರ್ಸ್ನ ಸಿನಿಮಾ. ‘ಕೆಜಿಎಫ್’, ‘ಕೆಜಿಎಫ್ 2’ ರೀತಿಯಲ್ಲೇ ‘ಸಲಾರ್’ ಸಿನಿಮಾ ಕೂಡ ಡಾರ್ಕ್ ಶೇಡ್ನಲ್ಲಿ ಮೂಡಿಬರುತ್ತಿದೆ. ‘ಸಲಾರ್’ನ ಮೊದಲ ಭಾಗ ಇದಾಗಿದ್ದು, ಎರಡನೇ ಭಾಗವೂ ಬರಲಿದೆ.
PRABHAS: ‘SALAAR’ NO POSTPONEMENT… TRAILER ON 1 DEC… #Salaar arrives in *cinemas* on 22 Dec 2023 #Christmas2023… Get ready for #SalaarTrailer.#Prabhas #PrithvirajSukumaran #PrashanthNeel #VijayKiragandur pic.twitter.com/L6KhQw8Tzk
— taran adarsh (@taran_adarsh) November 9, 2023
ಇದನ್ನೂ ಓದಿ: Prabhas: ಭಾರತಕ್ಕೆ ವಾಪಸ್ ಬಂದ ಪ್ರಭಾಸ್; ‘ಸಲಾರ್’ ಬಗ್ಗೆ ಚಿಂತೆ ಹೊಂದಿದ್ದ ಅಭಿಮಾನಿಗಳಿಗೆ ಈಗ ಖುಷಿ
‘ಸಲಾರ್’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ‘ಕೆಜಿಎಫ್ 2’ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ