‘ಸಲ್ಮಾನ್ ಖಾನ್ ನನ್ನ ದ್ವೇಷಕ್ಕೂ ಅರ್ಹನಲ್ಲ’; ಸಿಟ್ಟಾದ ಖ್ಯಾತ ಗಾಯಕ

ಸಲ್ಮಾನ್ ಪಾಕಿಸ್ತಾನಿ ನಟರನ್ನು ಬೆಂಬಲಿಸುತ್ತಾರೆ ಎಂದು ಹೇಳಿರುವ ಅಭಿಜಿತ್ ಅವರು ಹೆಸರನ್ನು ಹೇಳಲು  ನಿರಾಕರಿಸಿದ್ದಾರೆ. ಈ ಮೂಲಕ ಸಲ್ಮಾನ್ ಅವರೊಂದಿಗಿನ ವಿವಾದವು ಇಂದಿಗೂ ಬಗೆಹರಿದಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.

‘ಸಲ್ಮಾನ್ ಖಾನ್ ನನ್ನ ದ್ವೇಷಕ್ಕೂ ಅರ್ಹನಲ್ಲ’; ಸಿಟ್ಟಾದ ಖ್ಯಾತ ಗಾಯಕ
ಸಲ್ಮಾನ್​ ಖಾನ್​
Edited By:

Updated on: Dec 06, 2023 | 11:50 AM

ಬಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಹಾಗೂ ಸಲ್ಮಾನ್ ಖಾನ್ (Salman Khan) ನಡುವಿನ ವೈಷಮ್ಯ ಬಹಳ. ಈಗ ಅವರು ಮತ್ತೊಮ್ಮೆ ನಟ ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ 2015ರಲ್ಲಿ ಕೋರ್ಟ್ ತೀರ್ಪು ನೀಡಿತ್ತು. ಈ ವೇಳೆ ಅಭಿಜೀತ್ ಟ್ವೀಟ್ ಮಾಡಿದ್ದರು. ‘ನಿರಾಶ್ರಿತರು ಬೀದಿ ಬದಿಯಲ್ಲಿ ಮಲಗಬಾರದು’ ಎಂದು ಹೇಳುವ ಮೂಲಕ ಸಲ್ಮಾನ್ ಖಾನ್ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದರು. ಸಲ್ಮಾನ್ ವಿರುದ್ಧ ಮತ್ತೊಮ್ಮೆ ಸಿಟ್ಟಾಗಿದ್ದಾರೆ.

‘ಸೆಲೆಬ್ರೇನಿಯಾ ಸ್ಟುಡಿಯೋಸ್’ ಹೆಸರಿನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಈ ಸಂದರ್ಶನದಲ್ಲಿ ಅಭಿಜಿತ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆ ಸಲ್ಮಾನ್ ಅವರೊಂದಿಗಿನ ವಿವಾದವು ಇಂದಿಗೂ ಬಗೆಹರಿದಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಸಲ್ಮಾನ್​ ನನ್ನ ದ್ವೇಷಕ್ಕೂ ಅರ್ಹನಲ್ಲ ಎಂದು ನೇರವಾಗಿ ಹೇಳಿದ್ದಾರೆ.

‘ಅವನು ನನ್ನ ದ್ವೇಷಕ್ಕೆ ಅರ್ಹನೆಂದು ನಾನು ಭಾವಿಸುವುದಿಲ್ಲ. ಸಲ್ಮಾನ್ ಯಶಸ್ವಿಯಾಗಿರುವುದು ಅವರ ಅಭಿಮಾನದಿಂದಲೇ. ಅವನು ದೇವರಲ್ಲ ಮತ್ತು ಅವನು ತನ್ನನ್ನು ತಾನು ದೇವರೆಂದು ಪರಿಗಣಿಸಬಾರದು’ ಎಂದು ಅಭಿಜಿತ್ ಹೇಳಿದರು. ಸಲ್ಮಾನ್ ಪಾಕಿಸ್ತಾನಿ ನಟರನ್ನು ಬೆಂಬಲಿಸುತ್ತಾರೆ ಎಂದು ಹೇಳಿರುವ ಅಭಿಜಿತ್ ಅವರು ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಅರಿಜಿತ್ ಸಿಂಗ್ ಮಧ್ಯೆ ವೈಮನಸ್ಸು ಇತ್ತು. ಅರಿಜಿತ್​ನ ಸಲ್ಮಾನ್ ಖಾನ್ ದೂರ ಇಟ್ಟಿದ್ದರು. ಈ ಬಗ್ಗೆ ಅಭಿಜಿತ್ ಮಾತನಾಡಿದ್ದಾರೆ. ಇದು ಸರಿ ಅಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಸಲ್ಮಾನ್ ಖಾನ್ ಮತ್ತು ಗಾಯಕ ಅರಿಜಿತ್ ಸಿಂಗ್ ನಡುವಿನ ವಿವಾದ ತುಂಬಾ ಹಳೆಯದು. ಈ ವಿವಾದದಿಂದಾಗಿ ಸಲ್ಮಾನ್ ಅವರು ತಮ್ಮ ಸಿನಿಮಾಗಳಲ್ಲಿ ಅರಿಜಿತ್​ಗೆ ಹಾಡಲು ಚಾನ್ಸ್ ನೀಡಲೇ ಇಲ್ಲ. ಆದರೆ ಕೆಲ ದಿನಗಳ ಹಿಂದೆ ಇಬ್ಬರ ನಡುವಿನ ವಿವಾದ ಬಗೆಹರಿದಿರುವುದು ಬೆಳಕಿಗೆ ಬಂದಿದೆ. ಸಲ್ಮಾನ್ ಅಭಿನಯದ ‘ಟೈಗರ್ 3′ ಚಿತ್ರದ ಹಾಡೊಂದನ್ನು ಅರಿಜಿತ್ ಹಾಡಿದ್ದಾರೆ. ಈ ಹಾಡನ್ನು ಅರಿಜಿತ್ ಒಪ್ಪಿಕೊಳ್ಳಬಾರದಿತ್ತು ಎಂಬುದು ಅಭಿಜಿತ್ ಅಭಿಪ್ರಾಯ.

ಇದನ್ನೂ ಓದಿ: ಸಲ್ಮಾನ್ ಖಾನ್ ಅವರಿಂದ ಕೆನ್ನೆಗೆ ಏಟು ತಿಂದ ದುರಾದೃಷ್ಟವಂತರು ಇವರು..

ಪಾಕಿಸ್ತಾನಿ ನಟರಿಗೆ ಬಾಲಿವುಡ್‌ನಲ್ಲಿ ಸಿಗುತ್ತಿರುವ ಅವಕಾಶಗಳ ಬಗ್ಗೆ ಅಭಿಜಿತ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಪದೇ ಪದೇ ಕಾಲು ಕೆರೆದುಕೊಂಡು ದಾಳಿಗೆ ಬರುತ್ತಿದೆ. ಹಾಗಿದ್ದರೂ ಪಾಕಿಸ್ತಾನದವರಿಗೆ ಅವಕಾಶ ನೀಡುವ ಕೆಲವು ನಿರ್ಮಾಪಕರನ್ನು ಅವರು ದೇಶದ್ರೋಹಿಗಳು ಎಂದು ಕರೆದಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ದೊಡ್ಡ ಗೆಲುವು ಕಾಣಲಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ಸಿನಿಮಾ ಸಾಮಾನ್ಯ ಹಿಟ್ ಎನಿಸಿಕೊಂಡಿತು. ಈ ಸಿನಿಮಾದ ಅಬ್ಬರ ಒಂದು ವಾರಕ್ಕೆ ಕೊನೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ