ಕರ್ಣನ ಪಾತ್ರದಲ್ಲಿ ಮಿಂಚಲಿರುವ ಸಲ್ಮಾನ್ ಖಾನ್, ಪ್ರಭಾಸ್​​ರ ಮೀರಿಸಬಲ್ಲರೆ?

Salman Khan movie: ಸಲ್ಮಾನ್ ಖಾನ್ ತಮ್ಮ ಹಾದಿ ಬದಲಿಸುವ ಸೂಚನೆ ನೀಡಿದ್ದು, ‘ಮಾತೃಭೂಮಿ’ ಸಿನಿಮಾ ಮೂಲಕ ದೇಶಪ್ರೇಮದ ಕತೆ ಕೈಗೆತ್ತಿಕೊಂಡಿದ್ದಾರೆ. ಅದರ ಬಳಿಕ ಸೂಪರ್ ಹೀರೋ ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಆಶ್ಚರ್ಯಕರ ರೀತಿಯಲ್ಲಿ ಪೌರಾಣಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಕರ್ಣನ ಪಾತ್ರದಲ್ಲಿ ಮಿಂಚಲಿರುವ ಸಲ್ಮಾನ್ ಖಾನ್, ಪ್ರಭಾಸ್​​ರ ಮೀರಿಸಬಲ್ಲರೆ?
Salman Khan

Updated on: Jun 24, 2026 | 6:10 PM

ಸಲ್ಮಾನ್ ಖಾನ್ (Salman Khan) ಇತ್ತೀಚೆಗೆ ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಎಲ್ಲ ಸಿನಿಮಾಗಳಲ್ಲೂ ಅವರದ್ದು ಒಂದೇ ರೀತಿಯ ನಟನೆ, ಒಂದೇ ರೀತಿಯ ಮ್ಯಾನರಿಸಂ. ಅವರ ವಯಸ್ಸು, ಅವರಿಗಿರುವ ಜನಪ್ರಿಯತೆ ಎಲ್ಲದರ ದೃಷ್ಟಿಯಿಂದ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಒಂದೇ ಟೆಂಪ್ಲೆಟ್​​ನ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಖಾನ್ ತಮ್ಮ ಹಾದಿ ಬದಲಿಸುವ ಸೂಚನೆ ನೀಡಿದ್ದು, ‘ಮಾತೃಭೂಮಿ’ ಸಿನಿಮಾ ಮೂಲಕ ದೇಶಪ್ರೇಮದ ಕತೆ ಕೈಗೆತ್ತಿಕೊಂಡಿದ್ದಾರೆ. ಅದರ ಬಳಿಕ ಸೂಪರ್ ಹೀರೋ ಸಿನಿಮಾ ಒಂದನ್ನು ಸಹ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಆಶ್ಚರ್ಯಕರ ರೀತಿಯಲ್ಲಿ ಪೌರಾಣಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಸಲ್ಮಾನ್ ಖಾನ್​, ಇದೀಗ ಮಹಾಭಾರತದ ಅಪ್ರತಿಮ ಪಾತ್ರ ಕರ್ಣನ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ‘ರಂಗ್ ದೇ ಬಸಂತಿ’ ಅಂಥಹಾ ಬ್ಲಾಕ್ ಬಸ್ಟರ್ ಕಲ್ಟ್ ಸಿನಿಮಾ ನೀಡಿರುವ ನಿರ್ದೇಶಕ ರಾಕೇಶ್ ಓಂಪ್ರಕಾಶ್ ನಿರ್ದೇಶಿಸಲಿರುವ ಪೌರಾಣಿಕ ಸಿನಿಮಾನಲ್ಲಿ ಸಲ್ಮಾನ್ ಖಾನ್ ಕರ್ಣನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಕರ್ಣನ ಕುರಿತಾದ ಕತೆಯನ್ನೇ ಹೊಂದಿದ್ದು, ಸಿನಿಮಾನಲ್ಲಿ ಸಲ್ಮಾನ್ ಖಾನ್ ಅವರದ್ದೇ ಪ್ರಮುಖ ಪಾತ್ರ ಆಗಲಿದೆ.

ಅಸಲಿಗೆ ಕೆಲ ವರ್ಷಗಳ ಮುಂಚೆ ಇದೇ ಕತೆಯನ್ನು ರಾಕೇಶ್ ಓಂಪ್ರಕಾಶ್ ಅವರು ತಮಿಳಿನ ಸ್ಟಾರ್ ನಟ ಸೂರ್ಯಗೆ ಹೇಳಿದ್ದರಂತೆ. ಈ ಸಿನಿಮಾ ಮೂಲಕ ಸೂರ್ಯ ಬಾಲಿವುಡ್​​ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿತ್ತು. ಆದರೆ ಇದೀಗ ರಾಕೇಶ್ ಅವರು ಸಲ್ಮಾನ್ ಖಾನ್ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಕರ್ಣನ ಪಾತ್ರ, ಸಲ್ಮಾನ್ ಖಾನ್ ಅವರಿಗೆ ಸೂಟ್ ಆಗುತ್ತದೆಯೇ ಇಲ್ಲವೇ ಎಂಬ ಬಗ್ಗೆ, ಖುದ್ದು ಸಲ್ಮಾನ್ ಖಾನ್ ಅಭಿಮಾನಿಗಳಿಗೇ ಈ ಬಗ್ಗೆ ಗೊಂದಲ ಇದೆ.

ಇದನ್ನೂ ಓದಿ:ರವಿವರ್ಮಾ ಅನ್ನು ಆತ್ಮೀಯವಾಗಿ ಆಲಿಂಗಿಸಿದ ಸಲ್ಮಾನ್ ಖಾನ್, ಆಮಿರ್ ಖಾನ್

2024ರಲ್ಲಿ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಅವರನ್ನು ಕರ್ಣನ ಪಾತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನಿ ಬಲು ಅದ್ಧೂರಿಯಾಗಿ ತೋರಿಸಿದ್ದಾರೆ. ಕರ್ಣ ಎಂದರೆ ಸಿನಿಮಾ ಪ್ರೇಮಿಗಳಿಗೆ ಪ್ರಭಾಸ್ ಪಾತ್ರವೇ ನೆನಪಾಗುವಂತಾಗಿದೆ. ಹೀಗಿರುವಾಗ ಸಲ್ಮಾನ್ ಖಾನ್ ಅವರು, ಪ್ರಭಾಸ್ ಅವರನ್ನು ಮೀರಿಸುವಂತೆ ಕರ್ಣನ ಪಾತ್ರಕ್ಕೆ ಜೀವ ತುಂಬಬಲ್ಲರೆ ಕಾದು ನೋಡಬೇಕಿದೆ.

ಸಲ್ಮಾನ್ ಖಾನ್ ಪ್ರಸ್ತುತ ‘ಮಾತೃಭೂಮಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ರಾಜ್ ಮತ್ತು ಡಿಕೆ ನಿರ್ದೇಶಿಸಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಜೊತೆಗೆ ಯಶ್ ರಾಜ್ ಫಿಲಮ್ಸ್​​ನವರು ‘ಟೈಗರ್’ ಸರಣಿಯ ಹೊಸ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಸಹ ಸಲ್ಮಾನ್ ಖಾನ್​​ಗೆ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಇವುಗಳ ಜೊತೆಗೆ ಇದೀಗ ಕರ್ಣ ಕತೆ ಆಧರಿತ ಸಿನಿಮಾನಲ್ಲಿ ನಟಿಸಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us