ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚೆನ್ನಾಗಿಡಲು ಸಮಂತಾ ಈ ಅಂಶಗಳನ್ನು ಅನುಸರಿಸುತ್ತಾರಂತೆ; ನೀವೂ ಪ್ರಯತ್ನಿಸಿ

| Updated By: shivaprasad.hs

Updated on: Aug 11, 2021 | 5:57 PM

Samantha Akkineni: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಫಿಟ್​ನೆಸ್ ಬಗ್ಗೆ ಹಂಚಿಕೊಂಡಿರುವ ಮಾಹಿತಿ ನೆಟ್ಟಿಗರ ಗಮನ ಸೆಳೆದಿದೆ. ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯದ ಬಗ್ಗೆ ಸಮಂತಾ ಬರೆದುಕೊಂಡಿದ್ದಾರೆ.

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚೆನ್ನಾಗಿಡಲು ಸಮಂತಾ ಈ ಅಂಶಗಳನ್ನು ಅನುಸರಿಸುತ್ತಾರಂತೆ; ನೀವೂ ಪ್ರಯತ್ನಿಸಿ
ಸಮಂತಾ ಹಂಚಿಕೊಂಡಿರುವ ಚಿತ್ರ
Follow us on

‘ಫಿಟ್​ನೆಸ್ ಅನ್ನೋದು ಒಂದು ಅಂತಿಮ ಗುರಿಯಲ್ಲ. ಅದು ನಮ್ಮನ್ನೇ ನಾವು ಉತ್ತಮಗೊಳಿಸಿಕೊಳ್ಳುವ ಹಾದಿಯ ಒಂದು ಪಯಣ’ ಎನ್ನುತ್ತಾರೆ ಸಮಂತಾ ಅಕ್ಕಿನೇನಿ. ತಾವು ಕಸರತ್ತು ಮಾಡುತ್ತಿರುವ ವಿಡಿಯೊಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಅವರು ಫಿಟ್​ನೆಸ್ ಪ್ರಿಯರ ಹುಬ್ಬೇರಿಸುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಫೊಟೊವೊಂದರಲ್ಲಿ ಒಂದೇ ಕೈಯ ಮೇಲೆ ನಿಂತು ಪ್ಲ್ಯಾಂಕ್ ಮಾಡುತ್ತಿರುವ ಫೊಟೊವನ್ನು ಹಂಚಿಕೊಂಡಿದ್ದಾರೆ. ಇಂತಹ ಪ್ಲ್ಯಾಂಕ್​ ಮಾಡುವುದಕ್ಕೆ ಹೆಚ್ಚಿನ ಸಾಮರ್ಥ್ಯ ಹಾಗೂ ದೈಹಿಕ ದೃಡತೆ ಬೇಕು. ಅದನ್ನು ಮಾಡುತ್ತಿರುವ ಚಿತ್ರ ಹಂಚಿಕೊಂಡಿರುವ ಸಮಂತಾ, ‘ಫಿಟ್​ನೆಸ್​ಗಾಗಿ ವರ್ಕೌಟ್ ಮಾಡುವುದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವಾರು ಪ್ರಯೋಜನಕಾರಿ ಬದಲಾವಣೆಗಳನ್ನು ನಮ್ಮಲ್ಲಿ ತರುತ್ತದೆ. ಈ ಪಯಣ(ಫಿಟ್​ನೆಸ್) ನನಗೆ ಏನನ್ನು ಹೇಳಿಕೊಟ್ಟಿದೆಯೋ ಅದಕ್ಕೆ ನಾನು ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.

ಸಮಂತಾ ಹಂಚಿಕೊಂಡ ಚಿತ್ರ:

ತಮ್ಮ ಡಯಟ್ ಹಾಗೂ ಆಹಾರ ಪದ್ಧತಿಯ ಕುರಿತೂ ಮಾಹಿತಿ ನೀಡಿರುವ ಸಮಂತಾ, ತಾನು ಬಳಸುವುದು ಸಸ್ಯ ಜನ್ಯ ಆಹಾರಗಳನ್ನು. ಅದು ನನ್ನ ದೇಹವನ್ನು ಆರೋಗ್ಯವಾಗಿ ಮತ್ತು ಶಕ್ತಿಯುತವಾಗಿಡಲು ಸಹಕಾರಿಯಾಗಿದೆ ಎಂದಿದ್ದಾರೆ. ಜೊತೆಗೆ ಅವರು ಬಳಸುವುದು ಅವರದ್ದೇ ತೋಟದ ತರಕಾರಿಗಳನ್ನು ಎಂದೂ ಅವರು ಹೇಳಿಕೊಂಡಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಅಪಾರ ಕಾಳಜಿ ವ್ಯಕ್ತಪಡಿಸುವ ಸಮಂತಾ ಅದರ ಕುರಿತೂ ಆಗಾಗ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ‘ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ದೃಢತೆಯೂ ಮುಖ್ಯ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ನಿಮಗೆ ಏನು ಇಷ್ಟವೋ ಅದನ್ನು ಮಾಡಿ ಎಂದು ಅವರು ಹೇಳಿದ್ದಾರೆ.

ಸದ್ಯ ಸಮಂತಾ ಕೈಯಲ್ಲಿ ಹಲವು ಆಫರ್​ಗಳಿವೆ. ವಿಜಯ್​ ಸೇತುಪತಿ, ನಯನತಾರ ಜೊತೆಗಿನ ಹೊಸ ತಮಿಳು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ​ ವಿಘ್ನೇಶ್​ ಶಿವನ್​ ನಿರ್ದೇಶನ ಮಾಡುತ್ತಿದ್ದಾರೆ. ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದಲ್ಲಿ ಸಮಂತಾ ಶಕುಂತಲೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೊಂದು ವಾರದಲ್ಲಿ ಮುಕ್ತಾಯವಾಗಲಿದೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

KGF Chapter 2: ಕೆಜಿಎಫ್​ 2 ಚಿತ್ರಕ್ಕೂ ಮೊದಲೇ ತೆಲುಗು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರಂತೆ ಯಶ್! ಏನಿದು ಸರ್​ಪ್ರೈಸ್?

(Samantha Akkineni shares valuable tips for physical and mental health)

Published On - 5:57 pm, Wed, 11 August 21