ಇತ್ತೀಚೆಗೆ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಖುಷಿ’ (Kushi Movie) ಚಿತ್ರದ ಫಸ್ಟ್ ಲುಕ್ ಹಂಚಿಕೊಳ್ಳಲಾಗಿತ್ತು. ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಣವಾಗಿರುವ ಈ ರೊಮ್ಯಾಂಟಿಕ್ ಚಿತ್ರ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಬಂದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೌದು, ಸಮಂತಾ ಇತ್ತೀಚೆಗೆ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ‘ಖುಷಿ’ ಚಿತ್ರದಲ್ಲೂ ಮುಂದುವರೆಯಲಿವೆ ಎನ್ನುತ್ತಿವೆ ವರದಿಗಳು. ಇತ್ತ ನಾಯಕನಟ ವಿಜಯ್ ದೇವರಕೊಂಡ ಈಗಾಗಲೇ ಹಲವು ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಶಾಲಿನಿ ಪಾಂಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರೊಂದಿಗೆ ಅವರು ರೊಮ್ಯಾಂಟಿಕ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ‘ಖುಷಿ’ ಚಿತ್ರದಲ್ಲೂ ಮುಂದುವರೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಬಾಲಿವುಡ್ ಲೈಫ್ ವರದಿ ಮಾಡಿದ್ದು, ಸ್ಯಾಮ್ ಹಾಗೂ ವಿಜಯ್ ಜೋಡಿ ಲಿಪ್ಲಾಕ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಲಿದ್ದಾರೆ ಎಂದಿದೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
‘ಮಹಾನಟಿ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ವಿಜಯ್-ಸಮಂತಾ ‘ಖುಷಿ’ ಸಿನಿಮಾದ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕ-ನಾಯಕಿಯಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಖುಷಿ’ಯ ಫಸ್ಟ್ ಲುಕ್ ಹಂಚಿಕೊಳ್ಳಲಾಗಿತ್ತು. ಬುಧವಾರದಂದು ಚಿತ್ರದ ಟೈಟಲ್ ಟ್ರ್ಯಾಕ್ನ ತುಣುಕನ್ನು ಹಂಚಿಕೊಳ್ಳಲಾಗಿದೆ. ಟೈಟಲ್ ಟ್ರ್ಯಾಕ್ನ ಸಂಗೀತ ಎಲ್ಲರ ಮನಗೆದ್ದಿದ್ದು, ಒಂದು ಪರಿಪೂರ್ಣ ರೊಮ್ಯಾಂಟಿಕ್ ಚಿತ್ರ ಇದಾಗಿರಬಹುದು ಎಂಬ ಸೂಚನೆ ನೀಡಿದೆ.
ಖುಷಿ ಟೈಟಲ್ ಟ್ರ್ಯಾಕ್ ಟೀಸರ್ ಇಲ್ಲಿದೆ:
ಇದನ್ನೂ ಓದಿ: Kushi Movie: ಸಖತ್ ‘ಖುಷಿ’ಯಲ್ಲಿದ್ದಾರೆ ವಿಜಯ್ ದೇವರಕೊಂಡ- ಸಮಂತಾ; ಏನಿದು ಸಮಾಚಾರ?
ವಿಜಯ್ ದೇವರಕೊಂಡ ಈಗಾಗಲೇ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸಮಂತಾ ಕೂಡ ಭಾರತದಾದ್ಯಂತ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅದಾಗ್ಯೂ ‘ಖುಷಿ’ ಚಿತ್ರ ಹಿಂದಿಯಲ್ಲಿ ರಿಲೀಸ್ ಆಗುತ್ತಿಲ್ಲ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಗೆ ಬರಲಿದೆ. ಈ ವರ್ಷಾಂತ್ಯದಲ್ಲಿ ಅರ್ಥಾತ್ ಕ್ರಿಸ್ಮಸ್ ಸಂದರ್ಭವಾದ ಡಿಸೆಂಬರ್ 23ಕ್ಕೆ ‘ಖುಷಿ’ ರಿಲೀಸ್ ಆಗಲಿದೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ಮಾತ್ರವಲ್ಲದೆ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ. ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ನಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ನಿರ್ವಾಣ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ