
ನಟಿ ಸಮಂತಾ (Samantha) ಹಾಗೂ ನಿರ್ದೇಶಕ ರಾಜ್ ನಿಧಿಮೋರು ಮಧ್ಯೆ ಪ್ರೀತಿ ಮೂಡಿದೆ ಎಂಬ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಇದನ್ನು ಅವರು ಇಷ್ಟು ದಿನ ಖಚಿತಪಡಿಸಿರಲಿಲ್ಲ. ಆದರೆ, ಈಗ ಇವರು ಇದನ್ನು ಬಹುತೇಕ ಒಪ್ಪಿಕೊಂಡಿದ್ದಾರೆ. ಸಮಂತಾ ಹೆಗಲಮೇಲೆ ಕೈ ಹಾಕಿ ರಾಜ್ ಬರುತ್ತಿದ್ದರೆ, ಅವರನ್ನು ಸಮಂತಾ ತಮ್ಮ ಕೈ ಮೂಲಕ ಹಿಡಿದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.
ಅಮೆರಿಕದ ಮಿಚಿಗನ್ನ ಡೆಟ್ರಾಯ್ಟ್ನಲ್ಲಿರುವ ತೆಲುಗು ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಂತಾ, ರಾಜ್ ಹಾಗೂ ಇತರರು ತೆರಳಿದ್ದಾರೆ. ಈ ವೇಳೆ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಸಮಂತಾ ಅವರು ಹಂಚಿಕೊಂಡಿದ್ದಾರೆ. ಹಲವು ಕಡೆಗಳಲ್ಲಿ ನೀವು ರಾಜ್ ನಿಧಿಮೋರು ಅವರನ್ನು ಕಾಣಬಹುದು. ಇದರಿಂದ ಇವರ ಸಂಬಂಧ ಬಹುತೇಕ ಖಚಿತವಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದಾರೆ.
ಸಮಂತಾ ಹಾಗೂ ರಾಜ್ ಮೊದಲ ಬಾರಿಗೆ ಭೇಟಿ ಆಗಿದ್ದು, ‘ದಿ ಫ್ಯಾಮಿಲಿ ಮ್ಯಾನ್ 2’ ಶೂಟ್ ವೇಳೆ. ಆ ಬಳಿಕ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಈಗಾಗಲೇ ರಾಜ್ಗೆ ವಿವಾಹ ಆಗಿದೆ. ಪತ್ನಿ ಜೊತೆ ಅವರು ಇನ್ನೂ ವಿಚ್ಛೇದನ ಕೂಡ ಪಡೆದಿಲ್ಲ. ಆದಾಗ್ಯೂ ಅವರು ಸಮಂತಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಮದುವೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: ಸಮಂತಾ ಅವರನ್ನು ರೆಡಿ ಮಾಡಲು ಒಂದೀಡಿ ತಂಡವೇ ಬೇಕು, ವಿಡಿಯೋ ನೋಡಿ
ಸಮಂತಾ ಮೊದಲ ಪತಿ ನಾಗ ಚೈತನ್ಯ ಅವರು ಜೀವನದಲ್ಲಿ ಮುಂದೆ ಸಾಗಿಯಾಗಿದೆ. ಅವರು ನಟಿ ಶೋಭಿತಾ ಅವರನ್ನು ವಿವಾಹ ಆಗಿದ್ದಾರೆ. ಸಮಂತಾ ಕೂಡ ಈಗ ಬೇರೆ ಜೀವನವನ್ನು ಕಟ್ಟಿಕೊಳ್ಳುವುದರಲ್ಲಿ ಇದ್ದಾರೆ. ಹೋದಲ್ಲಿ ಬಂದಲ್ಲಿ ರಾಜ್ ಜೊತೆ ಸುತ್ತಾಡುತ್ತಿದ್ದು, ರಾಜಾರೋಶವಾಗಿ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಈ ಫೋಟೋ ನೋಡಿದ ಫ್ಯಾನ್ಸ್, ‘ಸಮಂತಾ ಎಲ್ಲವನ್ನೂ ಖಚಿತಪಡಿಸಿಯಾಗಿದೆ. ಹೇಳೋಕೆ ಇನ್ನೇನು ಇದೆ. ಇಷ್ಟು ಆಪ್ತವಾಗಿದ್ದರೆ ಲವರ್ ಅಲ್ಲದೆ ಇನ್ನೇನು’ ಎಂದು ಪ್ರಶ್ನೆ ಮಾಡಿದ್ದಾರೆ. ಸಮಂತಾ ಅವರು ಈ ಬಗ್ಗೆ ಇನ್ನೂ ಮೌನ ಮುರಿದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.