ನಟಿ ಸಮಂತಾ ರುತ್ ಪ್ರಭು ಅವರು ಚಿತ್ರರಂಗಕ್ಕೆ ಬಂದಿದ್ದು 2010ರಲ್ಲಿ. ಅವರು ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ಕೆಲವು ನಟನೆಗೆ ಆದ್ಯತೆ ಇರೋ ಸಿನಿಮಾಗಳಾದರೆ, ಇನ್ನೂ ಕೆಲವರು ಗ್ಲಾಮರಸ್ ಪಾತ್ರಗಳು. ಆದರೆ, ಈ ರೀತಿಯ ಪಾತ್ರಗಳನ್ನು ಮಾಡಬಾರದಿತ್ತು ಎಂದು ಸಮಂತಾ ಅವರು ಈಗ ಮರುಗಿದ್ದಾರೆ.
‘ಇದು ಒತ್ತಡದಿಂದ ಕೂಡಿತ್ತು. ಏಕೆಂದರೆ ನಾನು ಪ್ರತಿ ಚಿತ್ರದ ಯಶಸ್ಸಿಗೆ ನನ್ನ ಸ್ವಾಭಿಮಾನವನ್ನು ಕಟ್ಟಿಕೊಂಡಿದ್ದೇನೆ. ಯಶಸ್ಸನ್ನು ನಾನು ನಿರ್ಧರಿಸೋಕೆ ಸಾಧ್ಯವಿಲ್ಲ. ಪ್ರತಿ ಶುಕ್ರವಾರ ಆತಂಕ ಆಗುತ್ತಿತ್ತು. ಬಾಕ್ಸ್ ಆಫೀಸ್ ಮೇಲೆ ನನ್ನ ಯಶಸ್ಸು ನಿರ್ಧಾರ ಆಗುತ್ತಿತ್ತು. ಈಗ ಹಾಗಿಲ್ಲ. ನಾನು ಸ್ಪಷ್ಟ ದೃಷ್ಟಿಕೋನ ಹೊಂದಿದ್ದೇನೆ’ ಎಂದಿದ್ದಾರೆ ಅವರು.
‘ನಾನು ಕೆಲವು ಪಾತ್ರಗಳಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಆದಾಗ್ಯೂ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಾನು ಈಗ ಆ ಸಿನಿಮಾಗಳನ್ನು ನೋಡಿದಾಗ ನನ್ನ ಪಾತ್ರಗಳು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತವೆ. ಆ ಸಿನಿಮಾಗಳನ್ನು ಮಾಡಬಾರದಿತ್ತು’ ಎಂದಿದ್ದಾರೆ ಅವರು.
ಸಮಂತಾ ಅವರು ನಟಿಸಿದ್ದು, ‘ಯೇ ಮಾಯ ಚೇಸಾವೆ’ ಸಮಂತಾ ನಟಿಸಿದ ಮೊದಲ ಸಿನಿಮಾ. ಆ ಬಳಿಕ ಅವರು ‘ಬೃಂದಾವನಂ’, ‘ದೂಕುಡು’, ‘ಅತ್ತಾರಿಟಿಕಿ ದಾರೇದಿ’ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದರು.
ಇದನ್ನೂ ಓದಿ: ಸಮಂತಾಗೆ ಈ ಸಿನಿಮಾ ನಟಿಯರು ಬಲು ಅಚ್ಚುಮೆಚ್ಚು, ನಟಿಯರ ಯಾವ ಸಿನಿಮಾ ಹೆಚ್ಚು ಇಷ್ಟ?
ಸಮಂತಾ ಅವರು 2023ರಲ್ಲಿ ‘ಶಾಂಕುಂತಲಂ’ ಹಾಗೂ ‘ಖುಷಿ’ ಚಿತ್ರಗಳಲ್ಲಿ ನಟಿಸಿದರು. ಈ ಪೈಕಿ ‘ಖುಷಿ’ ಸಿನಿಮಾ ಕೊಂಚ ಮೆಚ್ಚುಗೆ ಪಡೆಯಿತು. ಅಲ್ಲದೆ, ‘ಸಿಟಾಡೆಲ್’ ಸೀರಿಸ್ನಲ್ಲೂ ಅವರು ನಟಿಸಿದ್ದಾರೆ. ‘ರಕ್ತಬ್ರಹ್ಮಾಂಡ: ದಿ ಬ್ಲಡಿ ಕಿಂಗ್ಡಮ್’ ವೆಬ್ ಸೀರಿಸ್ನಲ್ಲಿ ಅವರು ನಟಿಸುತ್ತಿದ್ದಾರೆ. ರಾಜ್ ಮತ್ತು ಡಿಕೆ ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ರಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತೂ ಇದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.